Advertisement

ಗುಜರಾತ್ ಕಾಂಗ್ರೆಸ್ ಸೋಲಿಗೆ ಕಾರಣವೇನು?: ಮಾಜಿ ಸಿಎಂ ಮೊಯ್ಲಿ ಅಭಿಪ್ರಾಯ ಹೀಗಿದೆ

02:58 PM Dec 11, 2022 | Team Udayavani |

ಬೆಂಗಳೂರು : ”ಗುಜರಾತ್ ಕಾಂಗ್ರೆಸ್‌ನ ರಾಜ್ಯ ನಾಯಕರನ್ನು ನಿರಾಸೆಗೊಳಿಸಿದ್ದು ವಿಧಾನಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನಕ್ಕೆ ಕಾರಣವಾಯಿತು” ಎಂದು ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಭಾನುವಾರ ಅಭಿಪ್ರಾಯ ಹೊರ ಹಾಕಿದ್ದಾರೆ.

Advertisement

”ಹಿಂದೆ ಯಶಸ್ಸು ತಂದುಕೊಟ್ಟ ನಾಯಕರನ್ನು ಕಾಂಗ್ರೆಸ್ ಯಾವಾಗಲೂ ಗೌರವಿಸಬೇಕು ಎಂದು ಹೇಳಿದ ಮಾಜಿ ಕೇಂದ್ರ ಸಚಿವ, ಮಾಜಿ ಸಿಎಂ ದಿವಂಗತ ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ಅವರನ್ನು ಪಿಸಿಸಿ ಮುಖ್ಯಸ್ಥರನ್ನಾಗಿ ಮಾಡಿದ ಕ್ರಮವು ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಲಾಭವನ್ನು ತಂದು ಕೊಟ್ಟಿದೆ” ಎಂದು ಹೇಳಿದರು.

“ಪರೀಕ್ಷಿತ, ಉತ್ತಮವಾಗಿ ಪರೀಕ್ಷಿಸಲ್ಪಟ್ಟ ಮತ್ತು ಸಮಯ-ಪರೀಕ್ಷಿತ ನಾಯಕರಿಗೆ ಮಹತ್ವ ಮತ್ತು ಗೌರವವನ್ನು ನೀಡಬೇಕು. ಗುಜರಾತ್‌ನಲ್ಲಿ ಅದನ್ನು ನಾವು ಮಾಡದೇ ಕಾಂಗ್ರೆಸ್ ಅನ್ನು ಹೇಗೆ ಬೆಳೆಸಬಹುದು” ಎಂದು ಮೊಯ್ಲಿ ಪಿಟಿಐಗೆ ತಿಳಿಸಿದರು.

”ಗುಜರಾತ್‌ನಲ್ಲಿ ನಾಯಕರನ್ನು ನಿರಾಸೆಗೊಳಿಸಲಾಗಿದೆ ಮತ್ತು ಪರಿಸ್ಥಿತಿ ಸುಧಾರಿಸಿಲ್ಲ. ಇದು ಕಲಿಯಬೇಕಾದ ಪಾಠವಾಗಿದೆ.  ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವೀಕ್ಷಕರು ರಾಜ್ಯ ನಾಯಕರ ಮೇಲೆ ಹೇರಬಾರದು ಬದಲಿಗೆ, ಅವರಿಗೆ ಅಧಿಕಾರ, ಪೋಷಣೆ ಮತ್ತು ಸರಿಯಾದ ಮಾನ್ಯತೆ ನೀಡಬೇಕು.ಇದರಿಂದ ಅವರು ಯಾವಾಗಲೂ ಪಕ್ಷಕ್ಕಾಗಿ ಕೆಲಸ ಮಾಡಬಹುದು” ಎಂದರು.

“ಕಳೆದ ಬಾರಿ ಗುಜರಾತ್ ನಲ್ಲಿ ಕಾಂಗ್ರೆಸ್ ಉತ್ತಮ ಫಲಿತಾಂಶವನ್ನು ಪಡೆದಿತ್ತು (2017 ರಲ್ಲಿ 77 ಸ್ಥಾನ). ಆಡಳಿತದ ಚುಕ್ಕಾಣಿ ಹಿಡಿದಿದ್ದ ಎಲ್ಲ ನಾಯಕರನ್ನು ಬದಲಾಯಿಸಲಾಗಿದೆ, ಅವರಿಗೆ ಸರಿಯಾಗಿ ಗೌರವ ಮತ್ತು ಮನ್ನಣೆ ನೀಡಲಾಗಿಲ್ಲ ”ಎಂದು ಮೊಯ್ಲಿ ಬಹಿರಂಗವಾಗಿ ಅಭಿಪ್ರಾಯ ಹೊರ ಹಾಕಿದರು.

Advertisement

ಗುಜರಾತ್ ಅಸೆಂಬ್ಲಿಯಲ್ಲಿ ಕಾಂಗ್ರೆಸ್ ಕೇವಲ 17 ಸ್ಥಾನಗಳನ್ನು ಗೆದ್ದಿದ್ದರೆ, 68 ಸದಸ್ಯ ಬಲದ ಹಿಮಾಚಲ ಪ್ರದೇಶ ಸದನದಲ್ಲಿ 40 ಸ್ಥಾನಗಳನ್ನು ಗಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next