Advertisement

ಕಾಲ್ತುಳಿತಕ್ಕೆ “ಫ‌ೂಲ್‌’ಕಾರಣವೇ?

07:20 AM Oct 05, 2017 | |

ಮುಂಬೈ: “ವ್ಯಕ್ತಿಯೊಬ್ಬ “ಫ‌ೂಲ್‌ ಗಿರ್‌ ಗಯಾ’ (ಹೂವು ಬಿದ್ದವು) ಎಂದು ಕೂಗಿದ. ಅದನ್ನು “ಪೂಲ್‌ ಗಿರ್‌ ಗಯಾ’ (ಸೇತುವೆ ಬಿತ್ತು) ಎಂದು ತಪ್ಪಾಗಿ ಭಾವಿಸಿದ ಜನ ಪ್ರಾಣದ ಹಂಗು ತೊರೆದು ಓಡಿದರು,’…

Advertisement

ಮುಂಬೈನ್‌ ಎಲ್ಫಿನ್‌ಸ್ಟೋನ್‌ ರಸ್ತೆ ಮತ್ತು ಪೆರೇಲ್‌ ಸಬ್‌ಅರ್ಬನ್‌ ರೈಲು ನಿಲ್ದಾಣಗಳ ನಡುವೆ ಸಂಪರ್ಕ ಕಲ್ಪಿಸುವ ಸೇತುವೆಯಲ್ಲಿ ಸೆ.29ರಂದು ಸಂಭವಿಸಿದ ಕಾಲ್ತುಳಿತದಲ್ಲಿ ಬದುಕುಳಿದ ಸಂತ್ರಸ್ತ ಮಹಿಳೆಯೊಬ್ಬರು ರೈಲ್ವೆ ಅಧಿಕಾರಿಗಳಿಗೆ ನೀಡಿರುವ ಮಾಹಿತಿಯಿದು. ಸೇತುವೆ ಮೇಲೆ ನೂರಾರು ಜನ ಕಿಕ್ಕಿರಿದು ಬರುವಾಗ “ಸೇತು ಬೀಳುತ್ತಿದೆ’ ಎಂಬ ಕೂಗು ಕೇಳಿಸಿಕೊಂಡು ಜನ ದಿಕ್ಕಾಪಾಲಾಗಿ ಓಡಿದ್ದರಿಂದ ಕಾಲು¤ಳಿತ ಸಂಭವಿಸಿತು.

ಪರಿಣಾಮ ಇಬ್ಬರು ಕನ್ನಡಿಗರೂ ಸೇರಿ 23 ಮಂದಿ ಅಸುನೀಗಿದ್ದರು. ಈ ಘಟನೆ ಕುರಿತು ತನಿಖೆ ನಡೆಸುತ್ತಿರುವ ಪಶ್ಚಿಮ ರೈಲ್ವೆ ಅಧಿಕಾರಿಗಳು, ಸಂತ್ರಸ್ತರು ಹಾಗೂ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಕಲೆಹಾಕುತ್ತಿದ್ದಾರೆ. “ಸೇತುವೆ ಮೇಲೆ ನಡೆದುಹೋ ಗುತ್ತಿದ್ದ ಹೂವಿನ ವ್ಯಾಪಾರಿಯೊಬ್ಬ “ಫ‌ೂಲ್‌ ಗಿರ್‌ ಗಯಾ’ ಎಂದು ಕೂಗಿಕೊಂಡಿದ್ದನ್ನು ಜನ ತಪ್ಪಾಗಿ ಕೇಳಿಸಿಕೊಂಡಿದ್ದೇ ನೂಕುನುಗ್ಗಲು, ಕಾಲ್ತುಳಿತಕ್ಕೆ ಕಾರಣವಾಯಿತು,’ ಎಂದು ಗಾಯಗೊಂಡಿದ್ದ ಮಹಿಳೆಯೊಬ್ಬರು ಸಮಿತಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next