Advertisement
ಈ ಸಂಬಂಧ 30 ಕೋಟಿ ರೂ. ಕೂಡ ಬಿಡುಗಡೆ ಮಾಡಲಾಗಿತ್ತು. ಆದರೆ, ಈ ಸಬ್ಸಿಡಿ ಹಣದಲ್ಲಿ ಈವರೆಗೆ ಒಂದೇ ಒಂದು ಪೈಸೆ ಖರ್ಚಾಗದೆ, ಸರ್ಕಾರಕ್ಕೆ ವಾಪಸ್ ಹೋಗಿದೆ. ಹಾಗಾಗಿ, ಇದನ್ನು ಮುಂದುವರಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಗೊಂದಲ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಸಮ್ಮಿಶ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಗುಜರಿಗೆ ಹಾಕಲು ಒಬ್ಬ ಆಟೋ ಮಾಲೀಕ ಕೂಡ ಮುಂದೆ ಬರುತ್ತಿಲ್ಲ.
Related Articles
Advertisement
ಅಲ್ಲದೆ, ಮೊದಲ ವರ್ಷದಲ್ಲೇ 10 ಸಾವಿರ ಟು-ಸ್ಟ್ರೋಕ್ ಆಟೋಗಳನ್ನು ಗುಜರಿಗೆ ಸೇರಿಸುವ ಗುರಿ ಹೊಂದಲಾಗಿತ್ತು. ಆದರೆ, ಒಂದು ವರ್ಷದಲ್ಲಿ ಸಾಪ್ ಮಾಡಿದ ಆಟೋಗಳ ಸಂಖ್ಯೆ ಎರಡಂಕಿಯೂ ದಾಟಿಲ್ಲ! ಹೀಗಿರುವಾಗ ಗುಜರಿ ಸೇರದ ಆಟೋಗಳ ವಿರುದ್ಧ ಕಾರ್ಯಾಚರಣೆ ಕಷ್ಟ ಎಂದು ಉನ್ನತ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
2010ರಿಂದ ಟು-ಸ್ಟ್ರೋಕ್ ಆಟೋಗಳ ವಿರುದ್ಧ ಕೂಗು ಕೇಳಿಬರುತ್ತಿದ್ದು, 2011ರಿಂದಲೇ ಈ ಮಾದರಿಯ ಆಟೋಗಳನ್ನು ನಗರದಿಂದ ಹೊರಗೆ ಹಾಕಿ, 4 ಸ್ಟ್ರೋಕ್ ಆಟೋಗಳನ್ನು ಖರೀದಿಗೆ ಸಬ್ಸಿಡಿ ನೀಡುವ ಯೋಜನೆ ಜಾರಿಗೊಳಿಸಲಾಯಿತು. ಆರಂಭದಲ್ಲಿ ಈ ಸಬ್ಸಿಡಿ ಮೊತ್ತ 10 ಸಾವಿರ ರೂ. ಇತ್ತು.
ನಂತರದಲ್ಲಿ 15 ಸಾವಿರ ರೂ., ಈಗ 30 ಸಾವಿರ ರೂ. ನಿಗದಿಪಡಿಸಲಾಗಿದೆ. 2011ರಿಂದ 2017ರವರೆಗೆ ಸುಮಾರು 5 ಸಾವಿರ ಟು-ಸ್ಟ್ರೋಕ್ ಆಟೋಗಳನ್ನು 4 ಸ್ಟ್ರೋಕ್‌ಗೆ ಪರಿವರ್ತಿಸಲಾಗಿದೆ. ಸಂಪೂರ್ಣ ಗುಜರಿಗೆ ಹಾಕುವಂತೆ ಆದೇಶ ಹೊರಡಿಸಿದ ನಂತರದಿಂದ ಯಾರೂ ಮುಂದೆ ಬರುತ್ತಿಲ್ಲ.
ಗುಜರಿಗೆ ಹಾಕಿದ್ರೆ ಹೊಟ್ಟೆಪಾಡೇನು?: ದುಡಿಮೆಗೆ ಇರುವ ಏಕೈಕ ಮೂಲವಾದ ಆಟೋಗಳನ್ನು ಗುಜರಿಗೆ ಹಾಕಿದರೆ ಕುಟುಂಬದ ಹೊಟ್ಟೆ ಪಾಡೇನು? ಈಗ ಆಟೋಗಳ ಬೆಲೆ ಎಷ್ಟಿದೆ ಅಂತಾ ನಿಮಗೆ ಗೊತ್ತಿದೆಯಾ? ಹೆಚ್ಚುವರಿ ಜಿಎಸ್‌ಟಿ ಹೇರಿಕೆಯಿಂದಾಗಿ ಚಾಲಕರು ಆಟೋ ರೇಟು ಕೇಳಿಯೇ ಕುಸಿದು ಬೀಳುತ್ತಿ¨ªಾರೆ. ಹೀಗಿರುವಾಗ ಆಟೋಗಳನ್ನು ಗುಜರಿಗೆ ಹಾಕಿ ಎಂದರೆ ಏನರ್ಥ?
ಅಷ್ಟಕ್ಕೂ ಬೆಂಗಳೂರಲ್ಲಿ ಆಟೋಗಳನನು ಹೊರತುಪಡಿಸಿ ಬೇರೆ ಯಾವ ವಾಹನಗಳಿಂದಲೂ ಮಾಲಿನ್ಯ ಆಗುತ್ತಿಲ್ಲವೇ? ಯಾವ ವಾಹನವೂ ಹೆಚ್ಚು ಹೊಗೆ ಬಿಡುವುದೇ ಇಲ್ಲವೇ? ಬೇರೆ ವಾಹನಗಳಿಗಿಲ್ಲದ ನೀತಿ ಆಟೋಗಳಿಗೇ ಏಕೆ ಎಂದು ಅಖೀಲ ಕರ್ನಾಟಕ ರಾಜ್ಯ ಆಟೋ ಚಾಲಕರ ಕ್ಷೇಮಾಭಿವೃದ್ಧಿ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಮೊಹಮ್ಮದ್ ಅಬಾrಸ್ ಪ್ರಶ್ನಿಸುತ್ತಾರೆ.
ಕಳೆದ ವರ್ಷ ಟು-ಸ್ಟ್ರೋಕ್ ಆಟೋಗಳನ್ನು ಗುಜರಿಗೆ ಹಾಕುವ ಕಾರ್ಯಕ್ರಮಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಾರಿ ಮುಂದುವರಿಸುವ ಬಗ್ಗೆ ಹಲವು ಗೊಂದಲಗಳಿವೆ. ಈ ಹಿನ್ನೆಲೆಯಲ್ಲಿ ಸಾರಿಗೆ ಸಚಿವರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು. ಪರಿವರ್ತನೆ ಅಥವಾ ಸಬ್ಸಿಡಿ ಮೊತ್ತ ಹೆಚ್ಚಳ ಒಳಗೊಂಡಂತೆ ಹಲವು ಆಯ್ಕೆಗಳು ಇಲಾಖೆ ಮುಂದಿವೆ. ಅವೆಲ್ಲವುಗಳ ಬಗ್ಗೆ ವೈಜ್ಞಾನಿಕವಾಗಿ ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು. -ನವೀನ್‌ರಾಜ್ ಸಿಂಗ್, ಆಯುಕ್ತರು, ಸಾರಿಗೆ ಇಲಾಖೆ * ವಿಜಯಕುಮಾರ್ ಚಂದರಗಿ