Advertisement

Gangavathi: ಪೊಲೀಸ್ ಠಾಣೆಯಲ್ಲೇ ಒಂದೇ ಕೋಮಿನ ಎರಡು ಗುಂಪುಗಳ ಮಾರಾಮಾರಿ

05:39 PM May 11, 2024 | Team Udayavani |

ಗಂಗಾವತಿ: ನಗರದ ಕಿಲ್ಲಾ ಏರಿಯಾದಲ್ಲಿರುವ ಮಸೀದಿಯೊಂದರ ಆಡಳಿತ ಮಂಡಳಿಯ ರಚನೆ ವಿಚಾರವಾಗಿ ಒಂದೇ ಕೋಮಿನ ಎರಡು ಗುಂಪುಗಳ ಮಧ್ಯೆ ಸಂಘರ್ಷ ನಡೆದಿದ್ದು, ಸಮಸ್ಯೆ ಪರಿಹಾರಕ್ಕಾಗಿ ಪೊಲೀಸ್ ಠಾಣೆಗೆ ಆಗಮಿಸಿದ ನಂತರವೂ ಠಾಣೆಯ ಆವರಣದಲ್ಲಿಯೇ ಬಡಿದಾಡಿಕೊಂಡ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

Advertisement

ಮಸೀದಿ ಕಮಿಟಿ ರಚನೆ ನಂತರ ಒಂದೇ ಕೋಮಿನ ಯುವಕರ ಎರಡು ಗುಂಪುಗಳ ಮಧ್ಯೆ ವಾಗ್ವಾದ ನಡೆದಿದೆ. ಬಳಿಕ ಪೊಲೀಸ್ ಠಾಣೆಯಲ್ಲಿ ರಾಜೀಸಂಧಾನಕ್ಕೆ ಆಗಮಿಸಿದಾಗ ಯುವಕರು ಪರಸ್ಪರ ಬಡಿದಾಡಿಕೊಂಡಿದ್ದು,ವಿಡಿಯೋ ಸಾಮಾಜಿಕ ಜಾಕತಾಣದಲ್ಲಿ ವೈರಲ್ ಆಗಿದೆ.

ಸಾರ್ವಜನಿಕವಾಗಿ ಪೊಲೀಸ್ ಠಾಣೆಯಲ್ಲಿ ಬಡಿದಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣೆಯಲ್ಲಿ ಎರಡು ಗುಂಪಿನ ಎಂಟು ಜನರ ವಿರುದ್ಧ ಪೊಲೀಸರು ಸ್ವಯಂ ಕೇಸ್ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next