Advertisement

RPF, EPF, VPF, PPF ಇತ್ಯಾದಿ ಗೊಂದಲಗಳು

08:17 AM Jun 04, 2018 | Harsha Rao |

ಶೇ. 8.55 ಕೊಡುವ ಈ ಉಕಊ ಸ್ಕೀಮು ಭದ್ರತೆಯೊಂದಿಗೆ ಸ್ಥಿರ ಆದಾಯ ಬರುವ ಯಾವುದೇ ಸ್ಕೀಮಿನೆದುರೂ ಅತ್ಯಂತ ಅಧಿಕವಾದದ್ದು. ಇದು ಕರ ವಿನಾಯಿತಿ ಯೊಂದಿಗೆ ಬರುವ ಕಾರಣ ಇದನ್ನು ಒಂದು ಬಹಳ ಸೇಫ್ ಮತ್ತು ಉತ್ಕೃಷ್ಟವಾದ ಸ್ಕೀಂ ಎಂದು ಸರ್ವರೂ ಮೆಚ್ಚುತ್ತಾರೆ. ಹೆಚ್ಚು ಪ್ರತಿಫ‌ಲ ಬಯಸುವವರು ಶೇರು ಲೋಕ
ದತ್ತ ಪಯಣಿಸಬೇಕಾಗುತ್ತದೆ.

Advertisement

Every morning I go through the Forbes list of the richest people in America and if I don’t see my name in it, I go to work. 
-Robert Orben

ದಿನಾ ಬೆಳಗ್ಗೆ ನಾನು ಫೋಬ್ಸ…ì ಪತ್ರಿಕೆಯ ಅಮೆರಿಕದ ಅತ್ಯಂತ ಶ್ರೀಮಂತರ ಪಟ್ಟಿಯನ್ನು ನೋಡಿ, ಅದರಲ್ಲಿ ನನ್ನ ಹೆಸರು ಕಾಣಿಸದಿದ್ದರೆ ಕೆಲಸಕ್ಕೆ ಹೋಗುತ್ತೇನೆ.  
– ರಾಬರ್ಟ್‌ ಓರ್ಬೆನ್‌  

ಉಡುಪಿ ಬಸ್ಸಾ$rಂಡಿನಲ್ಲಿಳಿದು ಒಂದು ಹತ್ತು ಹೆಜ್ಜೆ ಹಾಕಿದರೆ ಅÇÉೇ ಬಳಿಯಿರುವ ಮೈತ್ರೇಯಿ ಕಾಂಪ್ಲೆಕ್ಸಿನ ಮೇಲ್ಮಹಡಿಯಲ್ಲಿ ರುವ ಸ್ಟೇಟ್‌ ಬ್ಯಾಂಕ್‌ ಯಾರಿಗೆ ತಾನೇ ಗೊತ್ತಿಲ್ಲ. ಮೊನ್ನೆಯ ದಿನ ಅÇÉೇ ಕೆಳಗಿರುವ ATM ಖಜಾನೆಯಲ್ಲಿ ನನ್ನ ಕಾರ್ಡ್‌ ಉಜ್ಜಿದರೆ ನನ್ನ ಭಕ್ತಿಗೆ ಮೆಚ್ಚಿ ಆ ಧನಲಕ್ಷ್ಮೀ ಎÇÉಾದರೂ ಸ್ವಲ್ಪ ದುಡ್ಡು ಕರುಣಿಸುತ್ತಾಳ್ಳೋ ಅಂತ ಅದೃಷ್ಟ ಪರೀಕ್ಷಿಸಲು ಹೋಗಿ¨ªೆ. ಆದರೆ ಈ ಲಕ್ಷ್ಮೀದೇವಿ ATM ಅವರಿಗೆ ಅಂತಹ ಯಾವುದೇ ಸಮಾಜವಾದಿ ಐಡಿಯಗಳು ಇದ್ದಂತಿರಲಿಲ್ಲ. “ನೀನು ಈ ರೀತಿ ಎಷ್ಟು ಬಾರಿ ಬ್ಯಾಲನ್ಸ್‌ ಚೆಕ್‌ ಮಾಡಿದರೂ ಅದು ಇಂಕ್ರೀಸ್‌ ಆಗಲಾರದು ಮಹಾರಾಯ, ಮೊದಲು ಎಕೌಂಟಿಗೆ ಒಂದಷ್ಟು ದುಡ್ಡು ತುಂಬು. ಆಮೇಲೆ ಕಾರ್ಡ್‌ ಉಜ್ಜು’ ಅಂತ ಚೀಟಿದಾನ ಮಾಡಿದಳು. ಚೀಟಿಯನ್ನು ಓದಿ, ಮು¨ªೆ ಮಾಡಿ ಅಲ್ಲಿಯೇ ಬಾಸ್ಕೆಟ್ಟಿಗೆ ಎಸೆದು ಎಟಿಎಮ್ನಿಂದ ಟಮ್ಮನೆ ಹೊರ ಬಂದೆ. 

ನಾನು ಮೆಟ್ಟಲಿಳಿದು ಕೆಳ ಬರುವುದೂ, ಗುರುಗುಂಟಿರಾಯರು ನಿಧಾನವಾಗಿ ಕಾಲೆಳೆಯುತ್ತಾ ಮೆಟ್ಟಲೇರಿ ಮೇಲಕ್ಕೆ ಬರುವುದೂ ಸರಿಹೋಯಿತು. ಮೊದಲೇ ಮಳೆಗಾಲದ ಬಿಸಿಲಿನ ಝಳ; ನನ್ನನ್ನು ಕಂಡ ರಾಯರಿಗೆ ಮುಖದಲ್ಲಿ ಇದ್ದ ಕಳೆಯೂ ಹೋದಂತಾಯಿತು. ಒಂದು ಥರಾ ಮುಖ ಮಾಡಿ ಇನ್ನೊಂದು ಥರಾ ನಕ್ಕರು. 

Advertisement

“ಏನ್‌ ರಾಯರೇ, ಬ್ಯಾಂಕಿಗಾ?’ ಅಂತ ಎಲ್ಲರೂ ಕೇಳುವಂತೆ ಒಂದು ಸರಳ-ಸಿಲ್ಲಿ ಕ್ವೆಶ್ಚನ್‌ ಕೇಳಿದೆ.
“ಹೂØಂ…’ ರಾಯರು ಗಂಭೀರವದನರಾದರು. “ಪ್ರಾವಿಡೆಂಟ್‌ ಫ‌ಂಡಿಗೆ ಅದೇನೋ ಬಡ್ಡಿ ಜಾಸ್ತಿ ಮಾಡಿ¨ªಾರಂತೆ. ಹಾಗೆ ವಿಚಾರಿಸಿ ಹೋಗೋಣ ಅಂತ ಬ್ಯಾಂಕಿಗೆ ಬಂದೆ’ ಅಂತ ಅರೆಕ್ಷಣ ಬಿಟ್ಟು ಮಾತು ಜೋಡಿಸಿದರು.

“ಓ, ಅದು ಇಲ್ಲಿ ಸ್ಟೇಟ್‌ ಬ್ಯಾಂಕಿನಲ್ಲಿ ಇರುವ PPFಗೆ ಅಲ್ಲ ರಾಯರೇ, ಅದು EPFಗೆ’ ಅಂತ ವಿವರಣೆ ಕೊಟ್ಟೆ.
“ಹಾಂ! ಅದೆಂತದು ಇಪಿಎಫ್? ಪೀಪೀಎಫ್, ಗೀಪೀಎಫ್?? ಇನ್ನೂ ಇದೆಯಲ್ಲ ವೀಪೀಎಫ್, ಆಪೀìಎಫ್ ಅಂತೆÇÉಾ. ಎÇÉಾ ಒಟ್ಟು ಕಂಫ್ಯೂಶನ್‌ ಮಾರಾಯೆÅ.’, ರಾಯರು ಈಗ ಗೊಂದಲವದನರಾದರು.

“ಹೌದು, ಅದೆÇÉಾ ಬೇರೆ ಬೇರೆ. ಬನ್ನಿ ವಿವರಿಸ್ತೇನೆ’ ಅಂತ ರಾಯರನ್ನು ಕರೆದುಕೊಂಡು ಅÇÉೆ ಪಕ್ಕದಲ್ಲಿದ್ದ NCR ರೆಸ್ಟೋರೆಂಟ್‌ ಹೊಕ್ಕೆ- ಮಸಾಲೆ ದೋಸೆಯಾರ್ಥಾಯ ಉಪರಿ ಕಾಫಿಯಾರ್ಥಾಯ. 
***
Public Provident Fund Act, 1952 ಗುರುತಿಸಿದ ಪ್ರಾವಿಡೆಂಟ್‌ ಫ‌ಂಡ್‌ ಅನ್ನು ಒಂದು Recognised Provident Fund (RPF) ಎಂದು ಕರೆಯಬಹುದು. 1952ರ ಈ ಶಾಸನದನ್ವಯ ಭಾರತ ಸರಕಾರವು ಎಂಪ್ಲಾಯೀಸ್‌ ಪ್ರಾವಿಡೆಂಟ್‌ ಫ‌ಂಡ್‌ ಎಂಬ ನಿಧಿಯನ್ನು ನೌಕರವರ್ಗದ ಭವಿಷ್ಯ ಕಲ್ಯಾಣಕ್ಕಾಗಿ ಸ್ಥಾಪಿಸಿತು. ಇದರಲ್ಲಿ ಸರಕಾರಿ ಹಾಗೂ ಖಾಸಗಿ ಕ್ಷೇತ್ರದ ನೌಕರರಿಗೆ ಅನುಕೂಲವಾಗುವಂತೆ ಈ ಕಾಯಿದೆಯನ್ನು 20 ಅಥವಾ ಜಾಸ್ತಿ ನೌಕರರಿರುವ ಸಂಸ್ಥೆಗಳಲ್ಲಿ ಕಡ್ಡಾಯವಾಗಿಯೂ ಅದರಿಂದ ಚಿಕ್ಕ ಸಂಸ್ಥೆಗಳಲ್ಲಿ ಐಚ್ಛಿಕವಾಗಿಯೂ ಮಾಡಿತು. 

ನೌಕರರ ಸಂಬಳದಿಂದ (ಬೇಸಿಕ್‌ ಮತ್ತು ಡಿ.ಎ.) ಶೇ.12 ಕಡಿತಗೊಳಿಸಿ ಮತ್ತು ಎಂಪ್ಲಾಯರ್‌ ವತಿಯಿಂದ ಅದಕ್ಕೆ ಸರಿಸಮ ಶೇ.12- ಹೀಗೆ ಒಟ್ಟು ಶೇ. 24ನ್ನು ಪ್ರತಿಯೊಬ್ಬ ನೌಕರನ ಹೆಸರಿನಲ್ಲೂ ಪ್ರತ್ಯೇಕವಾದ ಖಾತೆಯಲ್ಲಿ ಜಮೆ ಮಾಡಲಾಗುತ್ತದೆ. ಎಂಪ್ಲಾಯರ್‌ ವತಿಯ ಶೇ. 12ರಲ್ಲಿ ಶೇ. 8.33 ಎಂಪ್ಲಾಯೀಸ್‌ ಪೆನÒನ್‌ ಫ‌ಂಡಿಗೆ ಬದಿಗಿರಿಸಿ (ಇದು ಗರಿಷ್ಠ ಸಂಬಳ ರೂ. 15000 ಮೇಲೆ = ರೂ. 1250) ಮತ್ತು ಶೇ.12ರ ಉಳಿದ ಭಾಗ ಪ್ರಾವಿಡೆಂಟ್‌ ಫ‌ಂಡಿಗೆ ಹೋಗುತ್ತದೆ. 

ಈ EPFನ ಉಸ್ತುವಾರಿ 2 ವಿಧದಲ್ಲಿ ನಡೆಯಬಹುದು
1. ಸರಕಾರದ ಆಧೀನದ ಉಕಊO ಸಂಸ್ಥೆಯಲ್ಲಿ ಪ್ರಾವಿಡೆಂಟ್‌ ಫ‌ಂಡ್‌ ಕಮಿಶನರರ ಉಸ್ತುವಾರಿಯಲ್ಲಿ ಜಮಾ ಮಾಡುವುದು. ಹೆಚ್ಚಿನ ಚಿಕ್ಕ ಪುಟ್ಟ ಕಂಪೆನಿಗಳು ಈ ರೀತಿ ಸರಕಾರದ ಕೈಯಲ್ಲಿ ತಮ್ಮ ಪಿ.ಎಫ್. ದುಡ್ಡನ್ನು ಠೇವಣಿ ಇಡುತ್ತವೆ. ಅ ದುಡ್ಡು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಾಲಪತ್ರಗಳು, ಸರಕಾರಿ ಮತ್ತು ಖಾಸಗಿ ಕಂಪೆನಿಗಳ ಬಾಂಡು ಡಿಬೆಂಚರುಗಳಲ್ಲಿ ಹೂಡ ಲ್ಪಡುತ್ತದೆ. ಪಿ.ಎಫ್. ದುಡ್ಡನ್ನು ಶೇರುಕಟ್ಟೆಯಲ್ಲಿ ಹೂಡುವ ಪ್ರಕ್ರಿಯೆ ಹಂತ ಹಂತವಾಗಿ ಇತ್ತೀಚೆಗೆ ನಡೆಯುತ್ತಿದೆ.   

2. ಕೆಲವೊಮ್ಮೆ ದೊಡ್ಡ ದೊಡ್ಡ ಲಾಭದಾಯಕ ಕಂಪೆನಿಗಳು ತಮ್ಮ ಉದ್ಯೋಗಿಗಳ ಪ್ರಾವಿಡೆಂಟ್‌ ಫ‌ಂಡ್‌ ದುಡ್ಡನ್ನು ತಾವೇ ಒಂದು ಟ್ರಸ್ಟ್‌ ರಚಿಸಿ ಅದನ್ನು ಹೂಡುವ ಅನುಮತಿಯನ್ನು ಸರಕಾರ ದಿಂದ ಪಡೆದಿರುತ್ತಾರೆ. ಇದು EPFOದಂತೆಯೇ, ಅದರ ಮಾರ್ಗಸೂಚಿಯಂತೆ ನಡೆಯುತ್ತದೆ. ಫ‌ಂಡ್‌ ಮ್ಯಾನೇಜೆ¾ಂಟ್‌ ಬಿಟ್ಟು ಉದ್ಯೋಗಿಗಳ ಮಟ್ಟಿಗೆ ಬೇರಾವುದೇ ವ್ಯತ್ಯಾಸವಿರು ವುದಿಲ್ಲ. ಹೆಚ್ಚಿನ ಪ್ರತಿಷ್ಠಿತ ಕಂಪೆನಿಗಳು ಈ ರೀತಿ ತಮ್ಮದೇ ಆದ ಸ್ವಂತ ಟ್ರಸ್ಟಿಯಡಿ EPF ಚಲಾಯಿಸುತ್ತವೆ.  

 ಈ ಮೊತ್ತ ಪ್ರತಿವರ್ಷವೂ ಸರಕಾರ ಘೋಷಿಸಿದ ಬಡ್ಡಿದರ ದೊಂದಿಗೆ ಬೆಳೆದು ನಿವೃತ್ತಿಯ ಸಮಯದಲ್ಲಿ ಅಥವ ಇರುವ ಕೆಲಸ ಬಿಟ್ಟು ನಿರುದ್ಯೋಗಿಯಾಗಿಯಾದರೆ 2 ತಿಂಗಳಾವಧಿಯಲ್ಲಿ ವಾಪಸು ಪಡಕೊಳ್ಳಬಹುದು.

(ಉದ್ಯೋಗ ಬದಲಿಸಿ ಕೊಂಡರೆ ಹೊಸ ಕಂಪೆನಿಗೆ ತನ್ನ ಖಾತೆಯನ್ನು ವರ್ಗಾಯಿಸತ ಕ್ಕದ್ದು) ದೀರ್ಘ‌ಕಾಲಿಕ ಹೂಡಿಕೆ ಇದಾದ್ದರಿಂದ ಇದರಲ್ಲಿ ದ್ರವತೆ ಅಥವ ಲಿಕ್ವಿಡಿಟಿಯ ಕೊರತೆ ಇದೆ. ಆದರೂ ಪ್ರತಿವರ್ಷವೂ ಬಡ್ಡಿದರವನ್ನು ಪ್ರಕಟಿಸುವ ಈ ಸ್ಕೀಮಿನಲ್ಲಿ ಸಾಕಷ್ಟು ಸ್ಥಿರತೆ ಇರುತ್ತದೆ. 1989ರಿಂದ 2002ರ ವರೆಗೆ ಶೇ.12 ಇದ್ದ ಬಡ್ಡಿದರ ಕಳೆದ ಹಲವು ವರ್ಷಗಳಿಂದ ಇಳಿಕೆಯಾಗಿ ಇದೀಗ ಶೇ.8.55ಕ್ಕೆ  ಬಂದು ನಿಂತಿದೆ. ಮನೆಕಟ್ಟಿ ನೋಡುವವರಿಗೆ ಮತ್ತು ಮದುವೆ ಮಾಡಿ ನೋಡುವವರಿಗೆ EPFನಿಂದ ದುಡ್ಡು ಹಿಂಪಡೆ ಯುವ ಸೌಲಭ್ಯ ಕೂಡಾ ಇದೆ.  

ಅಲ್ಲದೆ, ಇದಕ್ಕೆ ಹಾಕಿದ ದುಡ್ಡಿಗೆ ಸೆಕ್ಷನ್‌ 80ಸಿ ಅನ್ವಯ ಕರ ವಿನಾಯತಿ ದೊರಕುತ್ತದೆ. ಇದರಲ್ಲಿ ಉತ್ಪನ್ನವಾದ ವಾರ್ಷಿಕ ಬಡ್ಡಿಯೂ ಕರ ರಹಿತ ಹಾಗೂ ಇದರಿಂದ ವಾಪಸು ಪಡಕೊಳ್ಳುವ ಸಮಯದಲ್ಲಿ ಕೂಡಾ ಪೂರ್ಣ ಮೊತ್ತ ಕರ ರಹಿತ. ಹೀಗೆ ಮೂರೂ ಹಂತಗಳಲ್ಲಿ ಕರ ವಿನಾಯತಿ ಇರುವ ಇಂತಹ ಸ್ಕೀಂಗಳಿಗೆ exempt-exempt-exempt (eee) ಎನ್ನುತ್ತಾರೆ. ಆದರೆ, ಖಾತೆ ಆರಂಭಿಸಿ 5 ವರ್ಷಗಳೊಳಗೆ ಪಿ.ಎಫ್. ದುಡ್ಡು ವಾಪಸು ತೆಗೆದು ಕೊಂಡಲ್ಲಿ ಅದು ಸಂಪೂರ್ಣವಾಗಿ ತೆರಿಗೆಗೆ ಒಳಪಡುತ್ತದೆ.  

VPF

ಮೇಲೆ ಹೇಳಿದಂತೆ ಶೇ.12 ನೌಕರನ ವತಿಯಿಂದ (ಎಕೌಂಟ್‌ ಎ) ಹಾಗೂ ಎಂಪ್ಲಾಯರ್‌ ವತಿಯಿಂದ ಶೇ.12 (ಎಕೌಂಟ್‌ ಬಿ) EPF ಖಾತೆಯಲ್ಲಿ ಕಟ್ಟಲ್ಪಡುತ್ತದಷ್ಟೆ? ಒಬ್ಬ ನೌಕರನಿಗೆ ಸ್ವ- ಇಚ್ಛೆಯಿಂದ ತನ್ನ ಸಂಬಳದ (ಬೇಸಿಕ್‌+ಡಿ.ಎ.) ಶೇ.0-ಶೇ.100 ರಷ್ಟನ್ನು ತನ್ನ ಖಾತೆಯ ಎಕೌಂಟ್‌ ಸಿ ಯಲ್ಲಿ ವಾಲೆಂಟರಿಯಾಗಿ ಹಾಕುವ ಸೌಲಭ್ಯವನ್ನು ಸರಕಾರ ಕಲ್ಪಿಸಿಕೊಟ್ಟಿದೆ. ಪ್ರಾವಿಡೆಂಟ್‌ ಫ‌ಂಡಿನ ಈ ಭಾಗವನ್ನು  Voluntary Provident Fund ಅಥವಾ VPF ಎಂದು ಕರೆಯುತ್ತಾರೆ. ಇದು ಒಬ್ಬನ ಪ್ರಾವಿಡೆಂಟ್‌ ಫ‌ಂಡ್‌ ಖಾತೆಯದೇ ಒಂದು ಅಂಗವಾಗಿದೆ ಹಾಗೂ ಇದಕ್ಕೆ ಎ ಮತ್ತು ಬಿ ಎಕೌಂಟಿನಷ್ಟೇ ಬಡ್ಡಿದರ ಲಾಗೂ ಆಗುತ್ತದೆ, ಮತ್ತದೇ ಕರವಿನಾಯಿತಿ ದೊರೆಯುತ್ತದೆ. ವಾಲೆಂಟರಿ ಜಮೆಯ ಮೇಲೆ ಎಂಪ್ಲಾಯರ್‌ ಗಳ ಸರಿಸಮ ಜಮೆ ಇರುವುದಿಲ್ಲ. 

PPF

ಉದ್ಯೋಗಸ್ಥ ವ್ಯಕ್ತಿಗಳಿಗೆ ಮಾತ್ರ ಲಭ್ಯವಿರುವ EPF/GPFಗಳ ಪ್ರಯೋಜನ ಸ್ವಂತ ಉದ್ಯೋಗದ ಪ್ರೊಫೆಶನಲ್ಸ… ಮತ್ತು ಇತರ ಎÇÉಾ ಶ್ರೀಸಾಮಾನ್ಯರಿಗೂ ಸಿಗಬೇಕೆಂಬ ಇಚ್ಛೆಯಿಂದ ಸರಕಾರವು 1969ರಲ್ಲಿ Public Provident Fund ಅಥವಾ PPF ಎಂಬ ಹೆಸರುಳ್ಳ ಖಾತೆಗಳನ್ನು ಸ್ಟೇಟ್‌ ಬ್ಯಾಂಕ್‌ ಮತ್ತು ಅಂಚೆ ಕಚೇರಿಗಳಲ್ಲಿ ತೆರೆಯಲು ಸಾರ್ವಜನಿಕರಿಗೆ ಅವಕಾಶ ಮಾಡಿ ಕೊಟ್ಟಿತು. ಈ ಖಾತೆಯನ್ನು EPF ಉಳ್ಳ ಉದ್ಯೋಗಸ್ಥರೂ ತೆರೆಯಬಹುದು. ಉದ್ದೇಶದಲ್ಲಿ ಮತ್ತು ಹೆಸರಿನಲ್ಲಿ EPF/GPF ಅನ್ನೇ ಹೋಲುವ ಈ PPF ಅದರಿಂದ ತುಂಬಾ ಭಿನ್ನವಾಗಿಯೂ ಇದೆ. ಅತ್ಯಂತ ಮುಖ್ಯವಾಗಿ ಇದರ ಬಡ್ಡಿದರ EPF ಬಡ್ಡಿದರಕ್ಕಿಂತ ಭಿನ್ನವಾಗಿರ ಬಹುದು. ಸದ್ಯಕ್ಕೆ ಇದು ಶೇ.7.6. ಇದು 15 ವರ್ಷಗಳ ಫ‌ಂಡ್‌. EPF ನಂತೆ ಕರವಿನಾಯತಿ ಇದರಲ್ಲೂ ದೊರೆಯುತ್ತದೆ. PPF ಬಗ್ಗೆ ಜಾಸ್ತಿ ವಿವರಗಳನ್ನು ಗುರುಗುಂಟಿರಾಯರೊಡನೆ ಸಿಹಿ ಅಂಬಟೆಕಾಯಿ ಮೆಲ್ಲುತ್ತಾ ವಿಸ್ತಾರವಾಗಿ ಕಾಕು-32 ರಲ್ಲಿ ತಿಳಿದುಕೊಳ್ಳಬಹುದು. 
***
ಸದ್ಯಕ್ಕೆ ಶೇ.8.55 ಕೊಡುವ ಈ EPF ಸ್ಕೀಮು ಭದ್ರತೆಯೊಂದಿಗೆ ಸ್ಥಿರ ಆದಾಯ ಬರುವ ಯಾವುದೇ ಸ್ಕೀಮಿನೆದುರೂ ಅತ್ಯಂತ ಅಧಿಕವಾದದ್ದು. ಅಲ್ಲದೆ, ಇದು ಕರ ವಿನಾಯತಿಯೊಂದಿಗೆ ಬರುವ ಕಾರಣ ಇದನ್ನು ಒಂದು ಬಹಳ ಸೇಫ್ ಮತ್ತು ಉತ್ಕೃಷ್ಟವಾದ ಸ್ಕೀಂ ಎಂದು ಸರ್ವರೂ ಮೆಚ್ಚುತ್ತಾರೆ. 

ಇದರಿಂದ ಹೆಚ್ಚು ಪ್ರತಿಫ‌ಲ ಬಯಸುವವರು ಶೇರು ಲೋಕದತ್ತ ಪಯಣಿಸಬೇಕಾಗುತ್ತದೆ. ಆದರೆ ಆ ದಾರಿ ನಮ್ಮ ಕರಾವಳಿಯ ರೋಡುಗಳಂತೆ ದುರ್ಗಮ; ಸುಲಭವಲ್ಲ. ವೇಗದಾಸೆಗೆ ಹೋದರೆ ಸೊಂಟ ಮುರಿಯುವ ಚಾನ್ಸಸ್‌ ಆರ್‌ ಅಲ್ಸೊà ದೇರ್‌!! ಅಲ್ವೇ? ಆದ್ದರಿಂದ ಜಾಸ್ತಿ ಪ್ರತಿಫ‌ಲಾಸಕ್ತ ರಿಸ್ಕ್ ಪ್ರಿಯರು ರಿಯಾಲ್ಟಿಯಂತಹ ಶೇರುಗಳಲ್ಲಿ ದುಡ್ಡಿರಿಸಿ ಅಹರ್ನಿಶಿ ಎನ್‌ಡಿಟಿವಿ ನೋಡುತ್ತಾ ತಮ್ಮ ಮತ್ತು ಮನೆಯ ಇತರರ ಬಿ.ಪಿ ಏರಿಸುತ್ತಾರೆ. ಅದೆಲ್ಲವನ್ನು ಬಿಟ್ಟ ಸೇಫ್ಟಿ ಪ್ರಿಯರು EPFನಲ್ಲಿ ತಮ್ಮ ವಾಲೆಂಟರಿ ಕಂತನ್ನು (ಎಕೌಂಟ್‌ ಸಿ) ಗರಿಷ್ಟವಾಗಿಸಿ ಬೇರೆ ಯಾವುದರ ಉಸಾಬರಿಗೂ ಹೋಗದೆ ತೆಪ್ಪಗೆ ಕುಳಿತು “ಎದೆತುಂಬಿ ಹಾಡುವೆನು’ ಟೈಪಿನ ರಿಯಾಲಿಟಿ ಶೋಗಳಲ್ಲಿ ಬರುವ ಮಕ್ಕಳನ್ನು ನೋಡುತ್ತಾ ಚಪ್ಪಾಳೆ ತಟ್ಟಿ ಆನಂದಿಸುತ್ತಾರೆ. 

ಆಯ್ಕೆ ನಿಮ್ಮದು!

– ಜಯದೇವ ಪ್ರಸಾದ ಮೊಳೆಯಾರ

Advertisement

Udayavani is now on Telegram. Click here to join our channel and stay updated with the latest news.

Next