Advertisement

Exam: ಪರೀಕ್ಷಾ ಅಕ್ರಮ ಸಾಬೀತಾದರೆ ಆಸ್ತಿ ಜಪ್ತಿ

11:44 PM Dec 06, 2023 | Team Udayavani |

ಬೆಳಗಾವಿ: ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗಿರುವುದು ಸಾಬೀತಾದರೆ 8-12 ವರ್ಷ ಜೈಲು, 15 ಲಕ್ಷ ರೂ.ನಿಂದ 10 ಕೋಟಿ ರೂ.ವರೆಗೆ ದಂಡ ಹಾಗೂ ಅಪರಾಧಿಯ ಆಸ್ತಿ ಜಪ್ತಿಗೆ ಅನುಕೂಲವಾಗುವಂತೆ ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ಮಸೂದೆ -2023 ಅನ್ನು ವಿಧಾನಸಭೆಯಲ್ಲಿ ಬುಧವಾರ ಮಂಡಿಸಲಾಯಿತು.

Advertisement

ಇತ್ತೀಚೆಗೆ ನಡೆದ ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿದ್ದು, ಸಾಲದ್ದಕ್ಕೆ ಎಫ್ಡಿಎ ಪರೀಕ್ಷೆಯಲ್ಲೂ ಅಕ್ರಮ ನಡೆದು ತನಿಖೆಗಳು ನಡೆಯುತ್ತಿವೆ. ಪ್ರತಿ ಪ್ರಕರಣದಲ್ಲೂ ಪರೀಕ್ಷೆ ನಡೆಸುವ ಸಂಸ್ಥೆಯನ್ನು ಬದಲಿಸುವಂತೆ, ಕಟ್ಟು­ನಿಟ್ಟಾಗಿ ಪರೀಕ್ಷೆ ನಡೆಸುವಂತೆ ನ್ಯಾಯಾ­ಲಯಗಳೂ ಸರಕಾರಕ್ಕೆ ನಿರ್ದೇಶನ ನೀಡುತ್ತಲೇ ಬಂದಿದೆ.

ಹೀಗಾಗಿ ಹೊಸ ಮಸೂದೆವೊಂದನ್ನು ಮಂಡಿಸಿರುವ ಸರಕಾರ, ಕಾನೂನಿನ ಮೂಲಕ ಪರೀಕ್ಷಾ ಅಕ್ರಮಗಳನ್ನು ತಡೆಯಲು ಹಾಗೂ ಅಪರಾಧಿಗಳಿಗೆ ಶಿಕ್ಷೆ ನೀಡಲು ಕ್ರಮ ವಹಿಸಿದೆ. ಸಾರ್ವಜನಿಕ ಪರೀಕ್ಷೆ ನಡೆಸುವಿಕೆ ಸಂದರ್ಭದಲ್ಲಿ ಪರೀಕ್ಷೆ ಬರೆಯುವವರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಯಾರೇ ವ್ಯಕ್ತಿ ಅಥವಾ ಗುಂಪಿನಿಂದ ಲಿಖೀತ, ದಾಖಲಿತ, ನಕಲಿತ ಅಥವಾ ಮುದ್ರಿತ ಸಾಮಗ್ರಿಯ ಯಾವುದೇ ಇತರ ರೂಪದಲ್ಲಿ ಅನಧಿಕೃತ ಸಹಾಯ ಪಡೆದರೆ, ಅನಧಿಕೃತ ವಿದ್ಯುನ್ಮಾನ ಯಾಂತ್ರಿಕ ಉಪಕರಣ ಬಳಸಿದರೆ, ಅನುಮತಿ ಇಲ್ಲದೆ ಬದಲಿ ವ್ಯಕ್ತಿಯಾಗಿ ಪರೀಕ್ಷೆ ಬರೆಯು­ವುದು, ಪ್ರಶ್ನೆಪತ್ರಿಕೆ ಸೋರಿಕೆ ಮಾಡು­ವುದು, ಅದಕ್ಕೆ ಸಹಕರಿಸುವುದು, ಅನಧಿಕೃತವಾಗಿ ಉತ್ತರ ಸಂಗ್ರಹಿಸುವುದನ್ನು ಮಾಡುವಂತಿಲ್ಲ. ಅದೇ ರೀತಿ ಈ ಯಾವ ಪ್ರಕ್ರಿಯೆಗೂ ಪರೀಕ್ಷಾ ಕಾರ್ಯ ನಿರ್ವಹಿಸುವವರು ಸಹಕರಿಸಿದರೂ ಶಿಕ್ಷೆ ಅನುಭವಿಸಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next