Advertisement

ಶೈಕ್ಷಣಿಕ ಚಟುವಟಿಕೆ ಬಲಪಡಿಸಲು ಸಮ್ಮೇಳನ ಪೂರಕ

11:45 AM Jan 18, 2019 | |

ಆಲಮಟ್ಟಿ: ಶಿಕ್ಷಣ ಸಾಹಿತ್ಯ ಸಮ್ಮೇಳನ ಶೈಕ್ಷಣಿಕ ಚಟುವಟಿಕೆ ಬಲಪಡಿಸಲು ಪೂರಕವಾಗಿದ್ದು, ಗುಣಾತ್ಮಕ ಕಲಿಕೆಗೆ ಹಾಗೂ ಬೋಧನೆಗೆ ಬೇಕಾದ ಸಿದ್ಧತೆಗೆ ವೇದಿಕೆಯಾಗಲಿದೆ ಎಂದು ಡಿಡಿಪಿಐ ಎಂ.ಎಂ. ಸಿಂಧೂರ ಹೇಳಿದರು.

Advertisement

ಪಟ್ಟಣದಲ್ಲಿರುವ ವಚನ ಪಿತಾಮಹ ರಾವಬಹಾದ್ದೂರ ಫ.ಗು.ಹಳಕಟ್ಟಿ ಪ್ರೌಢಶಾಲೆಯಲ್ಲಿ ಗುರುವಾರ ಆಲಮಟ್ಟಿಯಲ್ಲಿ ನಡೆಯಲಿರುವ ಧಾರವಾಡ ವಿಭಾಗ ಮಟ್ಟದ 6ನೇ ಶಿಕ್ಷಣ ಸಾಹಿತ್ಯ ಸಮ್ಮೇಳನದ ಎರಡನೇ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಧಾರವಾಡ ವಿಭಾಗದ ವಿವಿಧ ಕಡೆಗಳಿಂದ ಸಾವಿರಕ್ಕೂ ಹೆಚ್ಚು ಜನ ಶಿಕ್ಷಕ ಸಾಹಿತಿಗಳು, ರಾಜ್ಯಮಟ್ಟದ ಶಿಕ್ಷಣ ತಜ್ಞರು, ಅಧಿಕಾರಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಆಲಮಟ್ಟಿಯಲ್ಲಿ ಸಮ್ಮೇಳನ ನಡೆಯುವುದರಿಂದ ಆಲಮಟ್ಟಿ-ನಿಡಗುಂದಿ ಕ್ಲಸ್ಟರ್‌ ವ್ಯಾಪ್ತಿಯ ಶಾಲೆಗಳ ಸಂಘ, ಸಂಸ್ಥೆಗಳವರ ಸಹಯೋಗ ಅತ್ಯವಶ್ಯಕ. ಸಮ್ಮೇಳನದ ಯಶಸ್ವಿಗೆ ನೀವೆಲ್ಲರೂ ಕಾರಣಿಭೂತರಾಗಬೇಕು. ಆ ದಿಸೆಯಲ್ಲಿ ತಮಗೆ ವಹಿಸಿರುವ ಜವಾಬ್ದಾರಿ ನಿರ್ಲಕ್ಷಿಸದೆ ಅಚ್ಚುಕಟ್ಟುತನದಿಂದ ನಿರ್ವಹಿಸಿ ಆಸಕ್ತಿದಾಯಕ ಸಾಮರ್ಥ್ಯ ತೋರ್ಪಡಿಸಿ ಈ ಸಮ್ಮೇಳನ ಜಿಲ್ಲೆಯ ಹಾಗೂ ತಾಲೂಕಿನ ಪ್ರತಿಷ್ಠೆಯಾಗಿದೆ. ಈ ಕಾರ್ಯಕ್ರಮದ ಒಂದು ಭಾಗವಾಗಿ ಶ್ರಮಿಸಬೇಕೆಂದು ಹೇಳಿದರು.

ಸಮ್ಮೇಳನದ ಸಂಪೂರ್ಣ ರೂಪರೇಷ‌ಗಳ ಮಾಹಿತಿಯನ್ನು ಶಿಕ್ಷಣಾಧಿಕಾರಿ ಡಾ| ಅಶೋಕ ಲಿಮಕರ ವಿವರಿಸಿದರು. ಸ್ವಾಗತ, ಗೋಷ್ಠಿ, ಸ್ಮರಣ ಸಂಚಿಕೆ, ಆಹಾರ ಸಮಿತಿ, ನೋಂದಣಿ, ಶಿಷ್ಠಾಚಾರ, ವಸತಿ, ಸಾರಿಗೆ, ಪ್ರಚಾರ, ವೇದಿಕೆ ಸೇರಿದಂತೆ 11 ಸಮಿತಿಗಳನ್ನು ಇದೇ ಸಂದರ್ಭದಲ್ಲಿ ರಚಿಸಲಾಯಿತು. ಇಲ್ಲಿಯ ಆರ್‌ಬಿಪಿಜಿ ಹಳಕಟ್ಟಿ ಪ್ರೌಢಶಾಲೆಯಲ್ಲಿ ಪುರುಷ ಪ್ರತಿನಿಧಿಗಳ, ಶಾಸಕರ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಹಿಳಾ ಪ್ರತಿನಿಧಿಗಳ ವಸತಿ ವ್ಯವಸ್ಥೆಗೆ ನಿರ್ಧರಿಸಲಾಯಿತು.

Advertisement

ಎಸ್‌.ಪಿ. ಬೆಟಗೇರಿ, ಅಶೋಕ ಬಸಣ್ಣವರ, ಮಂಜುನಾಥ ಗುಳೇದಗುಡ್ಡ, ಬಿ.ಟಿ. ಗೌಡರ್‌, ಸುರೇಶ ಶೇಡಶ್ಯಾಳ, ಅರ್ಜುನ ಲಮಾಣಿ, ಜುಬೇರ ಕೆರೂರ, ಆರ್‌.ಎಸ್‌. ತುಂಗಳ, ಶಿವಾನಂದ ಮಂಗಾನವರ, ಎ.ಎಂ. ಹಳ್ಳೂರ, ಶರಣಪ್ಪ ಮಾದರ, ಎಸ್‌.ಬಿ. ಪಾಟೀಲ ಸೇರಿದಂತೆ ವಿವಿಧ ಅಧಿಕಾರಿಗಳು ಶಿಕ್ಷಣ ಇಲಾಖೆಯ ಕೆಲ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು. ಸಭೆಯಲ್ಲಿ ಆಲಮಟ್ಟಿ ಹಾಗೂ ನಿಡಗುಂದಿ ಕ್ಲಸ್ಟರ್‌ ವ್ಯಾಪ್ತಿಯ ಎಲ್ಲಾ ಪ್ರಾಥಮಿಕ, ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಪಾಲ್ಗೊಂಡಿದ್ದರು. ಜಿ.ಎಂ. ಕೊಟ್ಯಾಳ ಸ್ವಾಗತಿಸಿದರು. ಮಹೇಶ ಗಾಳಪ್ಪಗೋಳ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next