Advertisement
ಆ ಪ್ರಯುಕ್ತ ಸಾಹಿತ್ಯ ಪರಿಷತ್ತು ವತಿಯಿಂದ ನಾ.ಕಾರಂತ ಅವರ ಮನೆಗೆ ತೆರಳಿ ಆಮಂತ್ರಣ ಪತ್ರಿಕೆ ನೀಡಿ ಗೌರವಿಸಿ ಆಹ್ವಾನ ಮಾಡಲಾಯಿತು. ಪರಿಷತ್‌ನ ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷ ಬಿ. ಐತಪ್ಪ ನಾೖಕ, ಗೌರವ ಕಾರ್ಯದರ್ಶಿಗಳಾದ ಡಾ| ಶ್ರೀಧರ ಎಚ್.ಜಿ., ಸರೋಜಿನಿ ಮೇನಾಲ, ಸಮ್ಮೇಳನದ ಸಲಹಾ ಸಮಿತಿ ಸದಸ್ಯರಾದ ಪ್ರೊ| ವಿ.ಬಿ. ಅರ್ತಿಕಜೆ, ಎನ್. ಸುಬ್ರಹ್ಮಣ್ಯಂ, ಪ್ರಮುಖರಾದ ಪ್ರೊ| ಹರಿನಾರಾಯಣ ಮಾಡಾವು, ಪ್ರೊ| ಎ.ವಿ. ನಾರಾಯಣ, ಪ್ರಕಾಶ್ ಕೊಡೆಂಕಿರಿ ಹಾಗೂ ನಾ. ಕಾರಂತ ಅವರ ಕುಟುಂಬ ಸದಸ್ಯರು ಹಾಜರಿದ್ದರು.
ಬೆಳಗ್ಗೆ 9.45ರಿಂದ ನಾ. ಕಾರಂತ ಪೆರಾಜೆ ಅವರ ಅಧ್ಯಕ್ಷತೆಯಲ್ಲಿ ದೂರದರ್ಶನದ ವಿಶ್ರಾಂತ ಹೆಚ್ಚುವರಿ ಮಹಾನಿರ್ದೇಶಕ ನಾಡೋಜ ಡಾ| ಮಹೇಶ್ ಜೋಷಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಕಸಾಪ ತಾಲೂಕು ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕ ಪ್ರಸ್ತಾವನೆ ಮಾಡಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಆಶಯ ಭಾಷಣ ಮಾಡಲಿರುವರು. ಸುಳ್ಯ ಶಾಸಕ ಎಸ್. ಅಂಗಾರ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಪುಸ್ತಕ ಪ್ರದರ್ಶನ ಉದ್ಘಾಟಿಸುವರು. ವಸ್ತು ಪ್ರದರ್ಶನವನ್ನು ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ, ಕಲಾ ಪ್ರದರ್ಶನವನ್ನು ಪ.ಪೂ. ಕಾಲೇಜಿನ ಕಾರ್ಯಾಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಉದ್ಘಾಟಿಸಲಿದ್ದಾರೆ.
Related Articles
Advertisement
ಕವಿಗೋಷ್ಠಿಹಿರಿಯ ಕವಿ ಟಿ.ಜಿ. ಮುಡೂರು ಅಧ್ಯಕ್ಷತೆಯಲ್ಲಿ ಸಮ್ಮೇಳನದ ಕವಿಗೋಷ್ಠಿ ನಡೆಯಲಿದ್ದು, ಕವಿಗಳಾದ ಕವಿತಾ ಅಡೂರು, ನಾರಾಯಣ ರೈ ಕುಕ್ಕುವಳ್ಳಿ, ಪಿ.ಎಸ್. ನಾರಾಯಣ ಕೊಯಿಲ, ಅಪೂರ್ವಾ ಕೊಲ್ಯ, ಕಾವ್ಯಾ ಶೆಟ್ಟಿ, ಅನಘಾ, ರತ್ನಶ್ರೀ, ಮಾನಸಾ ಕೆ., ಸಬಿತಾ ಕೆ., ಅನ್ವಿತಾ ಎಸ್. ಡಿ., ಸುಪ್ರೀತಾ ಎ., ವೈಷ್ಣವಿ ರಾಜೇಶ್ ಕವನಗಳನ್ನು ವಾಚಿಸಲಿದ್ದಾರೆ. ಪುಸ್ತಕಗಳ ಬಿಡುಗಡೆ
ಸಮ್ಮೇಳನಾಧ್ಯಕ್ಷ ನಾ. ಕಾರಂತ ಪೆರಾಜೆ ಹೊಸ ಪುಸ್ತಕಗಳ ಬಿಡುಗಡೆ ಗೊಳಿಸಲಿದ್ದಾರೆ. ಶತಮಾನದ ನೆನಪು; ವಾಣಿಯವರ ಕುರಿತು ಡಾ| ಶೋಭಿತಾ ಸತೀಶ್ ಉಪನ್ಯಾಸ ನೀಡಲಿದ್ದಾರೆ. ಡಾ| ಕೆ.ಎಂ .ಮ್ಯಾಥ್ಯೂ, ಡಾ| ಸಿ.ಕೆ. ಶಾಸ್ತ್ರಿ ಪಾಲ್ಗೊಳ್ಳಲಿದ್ದಾರೆ. ಪಣೆಮಜಲು ಜನಾರ್ದನ ಗೌಡ ಅವರು ಸಾಹಿತಿ ಗೋಪಾಲ ರಾವ್ ಕಡಬ ಅವರ ಸಂಸ್ಮ ರಣೆ ಮಾಡಲಿದ್ದಾರೆ. ಸಮಾರೋಪ ಪೂರ್ವಭಾವಿಯಾಗಿ ಉದ್ಯಮಿ ಸಿ. ಫಿಲಿಪ್ ಉಪಸ್ಥಿತಿಯಲ್ಲಿ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈ ಅವರು ವಿವಿಧ ಕ್ಷೇತ್ರಗಳ ಸಾಧಕರಾದ ಟಿ.ಜಿ. ಮ್ಯಾಥ್ಯೂ, ಬಲ್ನಾಡು ಸುಬ್ಬಣ್ಣ ಭಟ್, ಕರುಣಾಕರ ಉಪಾಧ್ಯಾಯ, ಎಸ್.ಜಿ. ಕೃಷ್ಣ, ಪ್ರೊ| ಎಂ. ವತ್ಸಲಾ ರಾಜ್ಮೀ, ಕುಂಬಳೆ ಶ್ರೀಧರ್ ರಾವ್, ಕಡಮಜಲು ಸುಭಾಷ್ ರೈ, ಪ್ರಕಾಶ್ ಕೊಡೆಂಕಿರಿ, ಬಿ.ಎಂ. ಲಿಂಗಪ್ಪ ಗೌಡ, ಜನಾರ್ದನ ಪರವ, ಜಿನ್ನಪ್ಪ ಕುಂಬಾರ ಅವರನ್ನು ಸಮ್ಮಾನಿಸಲಿದ್ದಾರೆ. ಸಮಾರೋಪ ಸಮಾರಂಭ
ಕಸಾಪ ಜಿಲ್ಲಾಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅವರ ಅಧ್ಯಕ್ಷತೆಯಲ್ಲಿ ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ| ಸದಾನಂದ ಪೆರ್ಲ ಸಮಾರೋಪ ಭಾಷಣ ಮಾಡಲಿದ್ದಾರೆ. ಸಮ್ಮೇಳನಾಧ್ಯಕ್ಷ ನಾ| ಕಾರಂತ ಪೆರಾಜೆ ಸಮ್ಮೇಳನದ ವಿಮರ್ಶೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸ್ವರ್ಣೋದ್ಯಮಿ ಮುಳಿಯ ಶ್ಯಾಮ ಭಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಪಾಲ್ಗೊಳ್ಳಲಿದ್ದಾರೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕನ್ನಡ ಭುವನೇಶ್ವರಿ ದಿಬ್ಬಣ
ಬೆಳಗ್ಗೆ 8ಕ್ಕೆ ನಡೆಯುವ ಕನ್ನಡ ಭುವನೇಶ್ವರಿಯ ದಿಬ್ಬಣವನ್ನು ಕಡಬ ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ ಉದ್ಘಾಟಿಸಲಿದ್ದಾರೆ. ತಾ.ಪಂ. ಸದಸ್ಯ ಫಝಲ್ ಕೋಡಿಂಬಾಳ ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಬಳಿಕ 9.15ಕ್ಕೆ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ರಾಷ್ಟ್ರ ಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಪರಿಷತ್ ಧ್ವಜಾರೋಹಣ, ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಸಮ್ಮೇಳನದ ಧ್ವಜಾರೋಹಣ ಮಾಡಲಿದ್ದಾರೆ.