Advertisement

ಯುವ ಜನತೆಗೆ ಉಚಿತ ಕಾಂಡೋಮ್‌ ವಿತರಣೆ: ಮಹತ್ವದ ಯೋಜನೆ ಘೋಷಿಸಿದ ಸರ್ಕಾರ

01:12 PM Dec 10, 2022 | Team Udayavani |

ನವದೆಹಲಿ: ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸುವ ನಿಟ್ಟಿನಲ್ಲಿ 18-25 ರಿಂದ ವರ್ಷದೊಳಗಿನ ಯುವ ಜನತೆಗೆ ಉಚಿತವಾಗಿ ಕಾಂಡೋಮ್‌ ನೀಡಲಾಗುವುದು ಫ್ರಾನ್ಸ್‌ ಸರ್ಕಾರ ಗುರುವಾರ (ಡಿ.8 ರಂದು) ಘೋಷಿಸಿದೆ.

Advertisement

ಗರ್ಭನಿರೋಧಕಕ್ಕೆ ಇದೊಂದು ಒಂದು ಸಣ್ಣ ಕ್ರಾಂತಿ ಎಂದು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಫಾಂಟೈನ್-ಲೆ-ಕಾಮ್ಟೆಯಲ್ಲಿ ಯುವ ಜನರೊಂದಿಗೆ ನಡೆದ ಆರೋಗ್ಯ ವಿಚಾರದ ಚರ್ಚೆಯ ವೇಳೆ ಮಾಧ್ಯಮಗಳ ಮೂಲಕ ಹೇಳಿದ್ದಾರೆ.

ಇದನ್ನೂ ಓದಿ: ಕ್ರೋವೇಷಿಯಾ ಆಘಾತ… ಬ್ರೆಜಿಲ್ ಪರ ಆಡುವುದನ್ನೇ ನಿಲ್ಲಿಸುತ್ತಾರಾ ನೇಯ್ಮರ್

ಫ್ರಾನ್ಸ್‌ ಸರ್ಕಾರವು ಈ ವರ್ಷದಿಂದ 25 ವರ್ಷದೊಳಗಿನ ಎಲ್ಲಾ ಮಹಿಳೆಯರಿಗೆ ಉಚಿತ ಜನನ ನಿಯಂತ್ರಣ ಮಾತ್ರೆಯನ್ನು ನೀಡಲು ಪ್ರಾರಂಭಿಸಿದೆ. ಈ ಯೋಜನೆಯನ್ನು ವಿಸ್ತರಿಸಿ 18 ವರ್ಷದವರನ್ನು ಗುರಿಯಾಗಿಸಿಕೊಂಡು ಉಚಿತ ಕಾಂಡೋಮ್‌ ನೀಡುವ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಅಧ್ಯಕ್ಷರು ಹೇಳಿದ್ದಾರೆ.

ಲೈಂಗಿಕವಾಗಿ ಹರಡುವ ರೋಗಗಳನ್ನು( ಎಸ್‌ ಟಿಡಿ ಕಾಯಿಲ) ತಡೆಯುವ ಉದ್ದೇಶದಿಂದ ಜ.1 2023 ರಿಂದ  ಎಲ್ಲಾ ಫಾರ್ಮಸಿಗಳಲ್ಲಿ 18 -25 ವರ್ಷದ ಯುವ ಜನರಿಗೆ ಉಚಿತವಾಗಿ ಕಾಂಡೋಮ್‌ ಗಳನ್ನು ನೀಡಲಾಗುವುದು ಎಂದು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಹೇಳಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next