Advertisement

ಬಿಪಿನ್‌ ರಾವತ್‌ಗೆ ಶ್ರದ್ಧಾಂಜಲಿ

02:03 PM Dec 12, 2021 | Team Udayavani |

ಯಾದಗಿರಿ: ದೇಶದ ಮೂರು ಸೇನಾ ಪಡೆಗಳ ಮುಖ್ಯಸ್ಥ ಜ. ರಾವತ್‌ ಮತ್ತು ಅವರ ಪತ್ನಿ ಸೇರಿದಂತೆ 11 ಜನ ಸೇನಾಧಿಕಾರಿಗಳು ಕಾಪ್ಟರ್‌ ದುರಂತದಲ್ಲಿ ಹುತಾತ್ಮರಾಗಿದ್ದು, ಈ ಘಟನೆ ದೇಶಕ್ಕೆ ಬರಸಿಡಿಲು ಬಡಿದಂತಾಗಿದೆ ಎಂದು ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಸೋಮಶೇಖರ ಮಣ್ಣೂರು ದುಃಖ ವ್ಯಕ್ತಪಡಿಸಿದರು.

Advertisement

ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಮಹಾಸಭಾ ವತಿಯಿಂದ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಪಿನ್‌ ರಾವತ್‌ ಅವರ ಶೌರ್ಯ, ಸಾಹಸ ಹಾಗೂ ದೇಶಪ್ರೇಮ, ಸೈನಿಕ ಆಡಳಿತಾತ್ಮಕ ಕ್ರಮಗಳಲ್ಲಿ ಅವರ ಚಾಣಾಕ್ಷತೆ ಉತ್ತಮವಾಗಿತ್ತು. ಇದರಿಂದ ದೇಶದ ಮಿಲಿಟರಿ ಶಕ್ತಿ ಬಲಾಡ್ಯವಾಗಿತ್ತು ಎಂದು ಸ್ಮರಿಸಿದರು.

ನಗರ ವೀರಶೈವ ಸಮಾಜದ ಅಧ್ಯಕ್ಷ ಅಯ್ಯಣ್ಣ ಹುಂಡೇಕಾರ್‌ ಮಾತನಾಡಿದರು. ತಾಲೂಕು ಪ್ರ. ಕಾರ್ಯದರ್ಶಿ ಬಸವರಾಜ ಮೋಟ್ನಳ್ಳಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಮೃತ ಎಲ್ಲ ಸೇನಾನಿಗಳ ಆತ್ಮಕ್ಕೆ ಶಾಂತಿಕೋರಿ ಮೌನಾಚರಣೆ ಮಾಡಲಾಯಿತು. ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಮಹೇಶ ಆನೆಗುಂದಿ, ಸಿದ್ದು ಪಾಟೀಲ್‌, ಮಹೇಶ ಕುಮಾರ ಹಿರೇಮಠ, ವಿಶಾಲ, ಮಲ್ಲಿಕಾರ್ಜುನ, ಬಂಡೆಪ್ಪ ಆಕಳ, ವಿಶ್ವನಾಥ ಕೋರಿ, ಬಸವರಾಜ ನಾಸಿ, ಡಾ| ಭೀಮರಾಯ ಲಿಂಗೇರಿ, ಶರಣು ಆಶನಾಳ, ನೂರೊಂದಪ್ಪ ಲೇವಡಿ, ಬಾಪುಗೌಡ ದಶರಥ ಸಾತನೂರ, ಬಸವರಾಜ ಸಾವೂರ, ಮಲ್ಲು ಹಳಕಟ್ಟಿ, ದೇವೇಂದ್ರರೆಡ್ಡಿ, ಶರಣು ಇಡ್ಮೂರು ಸೇರಿದಂತೆ ಮಹಾಸಭಾ ಪದಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next