Advertisement

ರಾಷ್ಟ್ರ ಧ್ವಜಕ್ಕೆ ಮಾಡಿದ ಅವಮಾನವನ್ನು ಖಂಡಿಸುತ್ತೇನೆ: ಬಿ.ಟಿ.ಲಲಿತಾ ನಾಯಕ್‌

07:27 PM Feb 25, 2022 | Team Udayavani |

ಬೆಂಗಳೂರು: ಭಾರತದ ಹೆಮ್ಮೆಯ ರಾಷ್ಟ್ರಧ್ವಜವನ್ನು ಅಪಮಾನಗೊಳಿಸಿ, ಅದರ ಜಾಗದಲ್ಲಿ ಕೇಸರಿ ಧ್ವಜವನ್ನು ಹಾರಿಸುವುದಾಗಿ ಹೇಳಿಕೆ ಕೊಟ್ಟಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರ ದುರ್ವರ್ತನೆಯನ್ನು ಜನತಾ ಪಾರ್ಟಿ ರಾಜ್ಯಾಧ್ಯಕ್ಷೆ ಡಾ.ಬಿ.ಟಿ.ಲಲಿತಾ ನಾಯಕ್‌ ವರು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದರು.

Advertisement

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ತ್ರಿವರ್ಣ ಧ್ವಜದ ಬಗ್ಗೆ ಕಿಂಚಿತ್ತು ತಿಳುವಳಿಕೆ ಇಲ್ಲದೇ, ಧ್ವಜವನ್ನು ಕೇವಲ ಮೂರು ರಂಗಿನ ಬಟ್ಟೆ ಎಂದು ಕೇವಲವಾಗಿ ಭಾವಿಸಿರುವುದು ದೇಶದ ಜನತೆಗೆ ನಾಚಿಕೆ ಮತ್ತು ಮುಜುಗರ ಉಂಟುಮಾಡಿದೆ. ರಾಷ್ಟ್ರ ಧ್ವಜದ ಮಹತ್ವವನ್ನು ತಿಳಿಯದೇ, ಸಚಿವರು ಯಾವುದೋ ರಾಜಕೀಯ ಪಕ್ಷದ ಬಾವುಟವನ್ನು ರಾಷ್ಟ್ರಧ್ವಜವನ್ನಾಗಿ ಹಾರಿಸುವ ಕನಸು ಕಾಣುತ್ತಿರುವುದು ದುರದೃಷ್ಟಕರ ಎಂದು ಹೇಳಿದರು.

ಅಧಿಕಾರ ಸ್ವೀಕರಿಸುವಾಗ ಸಂವಿಧಾನದ ಮೇಲೆ ಮಾಡಿರುವ ಪ್ರಮಾಣವನ್ನು ಮರೆತು, ದೇಶದ ಜಾತ್ಯತೀತ ಸಿದ್ಧಾಂತವನ್ನು ಗಾಳಿಗೆ ತೂರುವ ಅವಿವೇಕದ ಹೇಳಿಕೆ ಕೊಟ್ಟು ಪದೇಪದೇ ಜನರ ಶಾಂತಿ ನೆಮ್ಮದಿಗೆ ಭಂಗ ತರುತ್ತಿರುವ ಕೆ.ಎಸ್‌.ಈಶ್ವರಪ್ಪನವರ ಮೇಲೆ ರಾಷ್ಟ್ರದ್ರೋಹದಡಿ ಪ್ರಕರಣ ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಸಚಿವರ ಮನೆ , ಸರ್ಕಾರಿ ಬಂಗಲೆ ಅಥವಾ ವಿಧಾನಸೌಧದ ಕಚೇರಿಯ ಮುಂದೆ ಬೃಹತ್‌ ಪ್ರತಿಭಟನೆ ನಡೆಸಲಾಗುವುದು. ಅವರ ರಾಜೀನಾಮೆ ಪಡೆಯುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಎನ್‌.ನಾಗೇಶ್‌ ಸರಕಾರಕ್ಕೆ ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next