Advertisement

ಎಲ್‌ಐಸಿ ಷೇರು ಮಾರಾಟಕ್ಕೆ ಖಂಡನೆ

04:00 PM Feb 05, 2020 | Suhan S |

ಗಂಗಾವತಿ: ಕೇಂದ್ರ ಸರಕಾರ ತನ್ನ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಎಲ್‌ಐಸಿ ಷೇರು ಮಾರಾಟವನ್ನು ವಿಮಾನೌಕರರು ಮತ್ತು ಪ್ರತಿನಿಧಿಗಳ ಸಂಘದವರು ಖಂಡಿಸಿ ಮಂಗಳವಾರ ದೇಶವ್ಯಾಪಿ ಪ್ರತಿಭಟನೆ ನಡೆಸಿದರು. ಸ್ಥಳೀಯ ಎಲ್‌ಐಸಿ ಕಚೇರಿ ಎದುರು ವಿಮಾನೌಕರರು ಮತ್ತು ಪ್ರತಿನಿಧಿಗಳ ಸಂಘದವರು ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು.

Advertisement

ಈ ಸಂದರ್ಭದಲ್ಲಿ ವಿಮಾ ಹಿರಿಯ ಅಧಿಕಾರಿಗಳ ಸಂಘದ ಮುಖಂಡರಾದ ಗಂಗಾಧರಸ್ವಾಮಿ ಮತ್ತು ಸುರೇಶ ಮಾತನಾಡಿ, 6 ದಶಕಗಳಿಂದ ದೇಶದಲ್ಲಿ ಎಲ್‌ಐಸಿ ದೇಶದ ಜನರ ಬದುಕಿನೊಂದಿಗೆ ಹಾಸುಹೊಕ್ಕಾಗಿದೆ. ದೇಶದ ಸದೃಢ ಆರ್ಥಿಕ ಶಕ್ತಿಯಾಗಿ ದೇಶದ ಮೂಲಸೌಕರ್ಯ ಕಲ್ಪಿಸಲು ನೆರವಾಗಿದೆ.ಪಂಚವಾರ್ಷಿಕ ಯೋಜನೆಯಲ್ಲಿ ಎಲ್‌ ಐಸಿಯಲ್ಲಿ ಸಂಗ್ರಹವಾದ ಜನರ ಹಣವನ್ನು ಬಳಕೆ ಮಾಡಲಾಗುತ್ತಿದೆ. ಪ್ರತಿ ವರ್ಷ ಕೇಂದ್ರ ಸರಕಾರ ಕೋಟ್ಯಾಂತರ ರೂ.ಗಳನ್ನು ಲಾಭಾಂಶ ನೀಡುವ ಎಲ್‌ಐಸಿ ದೇಶವನ್ನು ಎಲ್ಲಾ ಸಂದರ್ಭಗಳಲ್ಲಿ ಆರ್ಥಿಕವಾಗಿ ಸಂರಕ್ಷಣೆ ಮಾಡಿದೆ. ಈಗ ಸರಕಾರ ತನ್ನ ಪಾಲಿನ ಷೇರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ಎಲ್‌ಐಸಿಯನ್ನು ಖಾಸಗೀಕರಣ ಮಾಡುವ ಪ್ರಥಮ ಹೆಜ್ಜೆ ಇಡುತ್ತಿರುವುದು ಖಂಡನೀಯವಾಗಿದೆ.

ಸ್ವಾತಂತ್ರ್ಯ ನಂತರ ಬ್ಯಾಂಕಿಂಗ್‌ ಸೇರಿ ಸಾರ್ವಜನಿಕ ಸಂಸ್ಥೆಗಳನ್ನು ರಾಷ್ಟ್ರೀಕರಣ ಮಾಡಿ ಲಾಭಾಂಶವನ್ನು ದೇಶದ ಜನರಿಗೆ ಹಂಚಿಕೆ ಮಾಡಲಾಗುತ್ತಿತ್ತು. ಇದೀಗ ಖಾಸಗೀಕರಣದ ನೆಪದಲ್ಲಿ ಲಾಭದಲ್ಲಿರುವ ಬ್ಯಾಂಕಿಂಗ್‌ ಹಾಗೂ ವಿಮಾ ಕ್ಷೇತ್ರವನ್ನು ಖಾಸಗೀಕರಣ ಮಾಡುವುದು ಅವೈಜ್ಞಾನಿಕವಾಗಿದೆ. ಎಲ್‌ ಐಸಿ ದೇಶದ ಸುಮಾರು 30 ಕೋಟಿ ಜನರಿಗೆ ವಿಮಾ ಸುರಕ್ಷತೆ ನೀಡಿದೆ. 15 ಲಕ್ಷಕ್ಕೂ ಅಧಿಕ ಪ್ರತಿನಿಧಿಗಳ ಬದುಕು ನಡೆಸಲು ಕಾರಣವಾಗಿದೆ. ಇಂತಹ ಹೆಮ್ಮೆಯ ಸಂಸ್ಥೆಯನ್ನು ಖಾಸಗೀಕರಣ ಮಾಡುವ ಹುನ್ನಾರ ಕೈಬಿಡುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ವಿಮಾ ನೌಕರರ ಸಂಘದ ಗಂಗಾಧರಸ್ವಾಮಿ, ಸುರೇಶ, ರಾಮಣ್ಣ,  ಕುರಿರಾಮಣ್ಣ, ಗೋಪಾಲಕೃಷ್ಣ, ಹನುಮಂತಪ್ಪ, ನರೇಶ, ಶ್ರೀಲತಾ, ವೀಣಾ, ಅಂಜಿನಮ್ಮ, ನರಸಿಂಹ, ರಮೇಶ ಭಟ್‌, ಕಿಶನ್‌, ರಾಜು, ವಿಶ್ವಪ್ರಸಾದ, ಪ್ರತಿನಿಧಿ  ಸಂಘದ ಕೆ.ನಿಂಗಜ್ಜ, ವಲಿಮೋಹಿಯುದ್ದೀನ್‌, ಖಾಜವಲಿ, ರಾಘವೇಂದ್ರ ದೇಸಾಯಿ, ನಿಜಲಿಂಗಪ್ಪ, ಬಸವರಾಜ ಸಜ್ಜನ್‌, ಎಚ್‌. ಈಶ್ವರ, ಬಸವಣ್ಣಯ್ಯ, ಕಲ್ಯಾಣಬಸಪ್ಪ ಸೇರಿ ಪ್ರತಿನಿಧಿಗಳು ಹಾಗೂ ಗ್ರಾಹಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next