Advertisement

ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಕ್ಕೆ ಖಂಡನೆ

12:48 PM Jan 04, 2022 | Shwetha M |

ವಿಜಯಪುರ: ಅಲ್ಪಸಂಖ್ಯಾತರ ಮೇಲೆ ದೇಶದಾದ್ಯಂತ ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಿವೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕದಿಂದ ಸೋಮವಾರ ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.

Advertisement

ನಗರದ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ಆರಂಭಗೊಂಡ ರ್ಯಾಲಿ, ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿ ತಲುಪಿತು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್‌ ಅಲ್ಪಸಂಖ್ಯಾತ ರಾಜ್ಯ ಉಪಾಧ್ಯಕ್ಷ ಮೊಹ್ಮದ್‌ ರಫೀಕ್‌ ಟಪಾಲ್‌, ದೇಶದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರದಿಂದ ಸತತವಾಗಿ ಅಲ್ಪಸಂಖ್ಯಾತರ ಸಮುದಾಯದ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಪರಿಸ್ಥಿತಿ ನಿಯಂತ್ರಿಸುವಲ್ಲಿ ಬಿಜೆಪಿ ಸರ್ಕಾರಗಳು ವಿಫಲವಾಗಿವೆ ಎಂದು ಖಂಡಿಸಿದರು.

ಕರ್ನಾಟಕದ ಮಂಡ್ಯ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಹ ಕ್ರಿಸ್‌ಮಸ್‌ ಹಬ್ಬದ ಆಚರಣೆ ವೇಳೆ ಭಜರಂಗ ದಳದ ಕಾರ್ಯಕರ್ತರು ಕ್ರೈಸ್ತರು ಪ್ರಾರ್ಥನಾ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸುವ ವೇಳೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಎಲ್ಲ ಘಟನೆಗಳಿಗೆ ಬಿಜೆಪಿ ಸರಕಾರವೇ ನೇರ ಹೊಣೆ ಎಂದು ಆರೋಪಿಸಿದರು.

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳು ಪೊಲೀಸರು ಏನು ಮಾಡುತ್ತಿದ್ದಾರೆ. ಇಂತಹ ಅಪರಾಕ ಚಟುವಟಿಕೆ ಮಾಡುವವರನ್ನು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಬೇಕು. ಕೃತ್ಯಕ್ಕೆ ಕಾರಣವಾದ ಸಂಘಟನೆಗಳನ್ನು ನಿಷೇಧಿ ಸಬೇಕು ಎಂದು ಆಗ್ರಹಿಸಿದರು.

ದೇಶದಲ್ಲಿ ಡಾ| ಬಾಬಾಸಾಹೇಬ ಅಂಬೇಡ್ಕರ್‌ ಅವರ ಸಂವಿಧಾನವನ್ನು ಬಿಜೆಪಿ ಸರಕಾರವು ಭಾಷಣದಲ್ಲಿ ಮತ್ತು ಪುಸ್ತಕದಲ್ಲಿ ಓದಲು ಮಾತ್ರ ಸೀಮಿತ ಮಾಡಿಕೊಂಡಿದೆ. ಆದರೆ ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿಲ್ಲ ಎಂದು ದೂರಿದರು.

Advertisement

ಸರ್ಕಾರ ಸದರಿ ಪ್ರಕರಣದಲ್ಲಿ ಪಾಲ್ಗೊಂಡಿರುವ ವ್ಯಕ್ತಿಗಳು ಹಾಗೂ ಸಂಘಟನಗಳ ವಿರುದ್ಧ ತ್ವರಿತವಾಗಿ ಕಠಿಣ ಕ್ರಮ ಕೈಗೊಳ್ಳದಿದ್ದರೆ ಭವಿಷ್ಯದಲ್ಲಿ ಉಗ್ರವಾಗಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ರಾಜು ಆಲಗೂರ ಮಾತನಾಡಿ, ದೇಶದಲ್ಲಿ ಶಾಂತಿಯನ್ನು ಕದಡುತ್ತಿರುವ ಬಿಜೆಪಿ ಸರಕಾರಗಳು ಇಂತಹ ಕೃತಿಗಳಿಗೆ ಕೊನೆಗಾಣಿಸಬೇಕು. ಇಲ್ಲವಾದಲ್ಲಿ ಅಲ್ಪಸಂಖ್ಯಾತರು, ದಲಿತರು, ಕ್ರೈಸ್ತರು ಹಾಗೂ ಇನ್ನಿತರ ಸಮುದಾಯಗಳು ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಅಬ್ದುಲ್‌ ಹಮೀದ್‌ ಮುಶ್ರೀಫ್‌, ವೈಜನಾಥ ಕರ್ಪೂರಮಠ, ಬಡೇಪೀರ ಜುನೇದಿ, ಅಬ್ದುಲ್‌ ಹಮೀದ ಮುಶ್ರೀಫ್‌, ಎಸ್‌.ಎಂ. ಪಾಟೀಲ ಗಣಿಹಾರ, ಚಾಂದಸಾಬ ಗಡಗಲಾವ, ಸುರೇಶಗೌಡ ಪಾಟೀಲ ಧೂಳಖೇಡ ಜಮೀರಅಹ್ಮದ ಬಕ್ಷಿ, ಶಹಾಜಾನ್‌ ಮುಲ್ಲಾ, ಉಸ್ಮಾನ ಪಟೇಲ, ವಸಂತ ಹೊನಮೊಡೆ, ಅಬ್ದುಲ್‌ಖಾದಿರ ಖಾದಿಮ್‌, ಶಬ್ಬೀರ ಜಾಗೀರದಾರ, ಜಯಶ್ರೀ ಭಾರತೆ, ರಾಜೇಶ್ವರಿ ಚೋಳಕೆ, ಮಂಜುಳಾ ಗಾಯಕವಾಡ, ಲಕ್ಷ್ಮಿ ಕ್ಷೀರಸಾಗರ, ರಜಾಕಸಾಬ ಕಾಖಂಡಕಿ, ಜಮೀರ ಬಾಂಗಿ, ಜಾಕೀರ ಬಾಗವಾನ, ಪಯಾಜ ಕಲಾದಗಿ, ಸಾಹೇಬಗೌಡ ಬಿರಾದಾರ, ಆಬೀದ ಸಂಗಮ, ಶರಣಪ್ಪ ಯಕ್ಕುಂಡಿ, ಸುಂದರಪಾಲ್‌ ರಾಠೊಡ, ರವೀಂದ್ರ ಜಾಧವ, ಧನರಾಜ ಎ., ಶಕೀಲ ಗಡೇದ, ಬಾಬು ಯಾಳವಾರ, ಡಿ.ಎಂ. ಬಡದಾಳೆ, ಪ್ರಕಾಶ ಕಟ್ಟಿಮನಿ, ಐಜಾಜ ಕಲಾದಗಿ, ಅಬೂಬಕರ ಬಿಜಾಪುರ, ಶೌಕತ್‌ಅಲಿ, ಮುನೀರ ಕಾಲೇಬಾಗ, ಇಬ್ರಾಹಿಂ ಮುಲ್ಲಾ, ಅಲ್ಲಾಭಕ್ಷ ಬಾಗಲಕೋಟ, ಕುಲದೀಪಸಿಂಗ ಪೋತಿವಾಲ, ಮಹ್ಮದಹನೀಫ್‌ ಮಕಾನದಾರ, ಮಹಾದೇವ ಜಾಧವ, ಜಾವೀದ ಶೇಖ, ಅಪ್ಸರ ಜಹಾಗೀರದಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next