Advertisement

ಪೆಟ್ರೋಲ್‌-ಡೀಸೆಲ್‌ ಬೆಲೆ ಹೆಚ್ಚಳಕ್ಕೆ ಖಂಡನೆ

01:01 PM Jun 27, 2020 | Suhan S |

ಹುಬ್ಬಳ್ಳಿ: ಕೇಂದ್ರ ಸರಕಾರ ದಿನೇ ದಿನೇ ತೈಲ ಬೆಲೆ ಹೆಚ್ಚಳ ಮಾಡುತ್ತಿರುವುದನ್ನು ಬಹುಜನ ಸಮಾಜ ಪಾರ್ಟಿ ಜಿಲ್ಲಾ ಘಟಕ ಖಂಡಿಸಿದೆ.

Advertisement

ತಹಶೀಲ್ದಾರ್‌ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ ಪಕ್ಷದ ಕಾರ್ಯಕರ್ತರು, ಕಳೆದ 18ದಿನಗಳಿಂದ ತೈಲ ಬೆಲೆ ನಿರಂತರವಾಗಿ ಹೆಚ್ಚಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನವಿರೋಧಿ ಆಡಳಿತ ನಡೆಸುತ್ತಿವೆ. ನೆರೆಹೊರೆಯ ರಾಷ್ಟ್ರಗಳಲ್ಲಿ ತೈಲ ಬೆಲೆ ಭಾರತಕ್ಕಿಂತ ಕಡಿಮೆ ಇದ್ದರೂ ದೇಶದಲ್ಲಿ ಮಾತ್ರ ಅಧಿಕವಾಗುತ್ತಿದೆ. ಜನರಿಗೆ ಹೊರೆಯಾಗುತ್ತಿರುವ ತೈಲ ಬೆಲೆಯನ್ನು ತಕ್ಷಣ ಇಳಿಸಬೇಕೆಂದು ರೇವಣಸಿದ್ದಪ್ಪ ಹೊಸಮನಿ, ನಿಸ್ಸಾರಅಹ್ಮದ ಮುಲ್ಲಾ, ಪ್ರಕಾಶ ವೀರಾಪುರ, ಹಣಮಂತ ಯಮಾಳ, ವಿಜಯ ಕರ್ರಾ ಇತರರು ಒತ್ತಾಯಿಸಿದ್ದಾರೆ.

ಬೈಕ್‌ ಹೊತ್ತು ವಿನೂತನ ಪ್ರತಿಭಟನೆ : ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಪಕ್ಷದಿಂದ ಬೈಕ್‌ ಹೊತ್ತು ಸಾಗುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಪೆಟ್ರೋಲ್‌, ಡೀಸೆಲ್‌ ದರ ಇಳಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಹು-ಧಾ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಸಮಿತಿಯ ಬ್ಲಾಕ್‌ ಅಧ್ಯಕ್ಷೆ ಗೌರಮ್ಮ ನಾಡಗೌಡ್ರ, ಬಸವರಾಜ ಜಾಧವ, ಆನಂದ ಸಿಂಗನಾಥ, ರಾಬರ್ಟ್‌ ದದ್ದಾಪುರಿ, ಆನಂದ ಜಾಧವ, ಪ್ರಶಾಂತ ಕೆಕರೆ, ನಿರ್ಮಲಾ ಹೊಂಗಲ, ರವಿವರ್ಮ ಪಾಟೀಲ, ಮಂಜುನಾಥಗೌಡ ಮುರಳ್ಳಿ, ಬಸವರಾಜ ದಾಸನಕೊಪ್ಪ, ಮಲ್ಲಪ್ಪ ಬಾವಿಕಟ್ಟಿ, ಕಲ್ಲಪ್ಪ ಪುಡಕಲಕಟ್ಟಿ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next