Advertisement
ಬಿರುಸಿನಿಂದ ಸುರಿದ ಮುಂಗಾರು ಮಳೆಗೆ ಈಗ ರಸ್ತೆಯೇ ಕೊಚ್ಚಿ ಹೋಗಿದ್ದು, ಲಕ್ಷಾಂತರ ರೂ. ಹಣ ಪೋಲಾಗಿದೆ. ಮಣ್ಣು ತುಂಬಿಸಿದ ರಸ್ತೆಯನ್ನು ಗಟ್ಟಿಗೊಳಿಸದೆ ಅವೈಜ್ಞಾನಿಕವಾಗಿ ಕಾಂಕ್ರಿಟ್ ಹಾಕಿದ್ದರಿಂದ ಕೊಚ್ಚಿ ಹೋಗಿ ಸಂಪರ್ಕವೇ ಕಡಿತಗೊಂಡಿದೆ. ಈ ಬಗ್ಗೆ ವೇಣೂರು ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿ ಕೆ. ವೆಂಕಟಕೃಷ್ಣರಾಜ ಅವರನ್ನು ಕೇಳಿದರೆ, ರಸ್ತೆ ಕೊಚ್ಚಿಹೋಗಿರುವ ಬಗ್ಗೆ ಮಾಹಿತಿ ಇಲ್ಲವಾಗಿದ್ದು, ಪರಿಶೀಲಿಸುವುದಾಗಿ ತಿಳಿಸಿದ್ದಾರೆ.
ಹೊಸದಾಗಿ ಮಣ್ಣು ತುಂಬಿಸಿ ಮಾಡಲಾದ ಪರಪ್ಪು ರಸ್ತೆಗೆ ಒಂದು ಮಳೆಗಾಲ ಕಳೆದ ಬಳಿಕ ಕಾಂಕ್ರೀಟ್ ಹಾಕಬಹುದು ಎಂದು ಗುತ್ತಿಗೆದಾರರಿಗೆ ತಿಳಿಸಿದ್ದೆ. ಆದರೆ ಅವಸರದ ಕಾಮಗಾರಿಯಿಂದ ಕಾಂಕ್ರೀಟ್ ರಸ್ತೆ ಕೊಚ್ಚಿಹೋಗುವಂತಾಗಿದೆ.
– ಧರಣೇಂದ್ರ ಕುಮಾರ್, ಜಿ.ಪಂ. ಸದಸ್ಯ