Advertisement

ಆಡಳಿತಾತ್ಮಕ ವಲಯ ರಚನೆಗೆ ತೀರ್ಮಾನ

06:00 AM Jul 27, 2018 | Team Udayavani |

ಬೆಂಗಳೂರು: ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ಲೋಕಾಯುಕ್ತ ಕಚೇರಿ, ಉದ್ಯೋಗಸೌಧ, ಮಾಹಿತಿಸೌಧ, ಮಹಾಲೇಖಪಾಲಕರ ಕಚೇರಿ “ಆಡಳಿತಾತ್ಮಕ ವಲಯ’ ವಾಗಲಿದೆ.

Advertisement

ಇದಕ್ಕೆ ಪ್ರತ್ಯೇಕ ಭದ್ರತಾ ವ್ಯವಸ್ಥೆಯೂ ಇರಲಿದೆ. ಕಚೇರಿ ವೇಳೆಯಲ್ಲಿ ಅನಗತ್ಯ ವ್ಯಕ್ತಿಗಳ ಪ್ರವೇಶಕ್ಕೆ ನಿರ್ಬಂಧ
ಹೇರಲು ಇಂತಹದ್ದೊಂದು ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

ಆಡಳಿತಾತ್ಮಕ ವಲಯ ರಚನೆ ಸಂಬಂಧ ಸದ್ಯದಲ್ಲೇ ಆದೇಶ ಹೊರಬೀಳಲಿದೆ. ಆಗಸ್ಟ್‌ನಿಂದಲೇ ಇದು ಜಾರಿಯಾಗಲಿದ್ದು ವಿಧಾನಸೌಧ,ವಿಕಾಸಸೌಧ, ಬಹುಮಹಡಿ ಕಟ್ಟಡ, ಉದ್ಯೋಗ ಸೌಧ, ಮಾಹಿತಿ ಸೌಧ, ಮಹಾಲೇಖಪಾಲಕರ ಕಚೇರಿ ಭೇಟಿಗೆ ಪ್ರತ್ಯೇಕ ಪಾಸ್‌ ವ್ಯವಸ್ಥೆ ಸಹ ಕಲ್ಪಿಸಲು ತೀರ್ಮಾನಿಸಲಾಗಿದೆ.

ವಿಶೇಷ ಸಮವಸ್ತ್ರ: ಮಧ್ಯಾಹ್ಮ 3 ಗಂಟೆ ನಂತರವಷ್ಟೇ ಸಾರ್ವಜನಿಕ ಭೇಟಿಗೆ ಇಲ್ಲಿ ಅವಕಾಶವಿರಲಿದ್ದು, ಉಳಿದಂತೆ ಬೆಳಗ್ಗೆ ಯಾವುದೇ ಕಾರಣಕ್ಕೂ ಪ್ರವೇಶ ಇರುವುದಿಲ್ಲ. ಮೇಲ್ಕಂಡ ವ್ಯಾಪ್ತಿಯ ಭದ್ರತೆಗಾಗಿ ವಿಶೇಷ ಪೊಲೀಸ್‌ ನೇಮಕ ಮಾಡಲಾಗುವುದು.ಅವರಿಗೆ ಖಾಕಿ ಸಮವಸOಉ ಬದಲು ಹೊಸ ಬಗೆಯ ವಿಶಿಷ್ಟ ಸಮವಸ್ತ್ರ ವಿನ್ಯಾಸ ಮಾಡಲು ಸೂಚಿಸಲಾಗಿದೆ ಎಂದು ಹೇಳಲಾಗಿದೆ.

ಮತ್ತಷ್ಟು ಭದ್ರತೆ: ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹಸಚಿವ ಡಾ.ಜಿ.ಪರಮೇಶ್ವರ್‌, ಬೆಳಗ್ಗೆಯಿಂದಲೇ ಸಾರ್ವಜನಿಕರ ಪ್ರವೇಶದಿಂದ ದೈನಂದಿನ ಕೆಲಸ-ಕಾರ್ಯಗಳಿಗೆ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ ಆಡಳಿತಾತ್ಮಕ ವಲಯ ರಚನೆಗೆ ತೀರ್ಮಾನಿಸಲಾಗಿದೆ. ಈಗಿರುವ ಪೊಲೀಸರಿಗಿಂತ ಹೆಚ್ಚಿನ ಭದ್ರತೆ ಒದಗಿಸಲಾಗುವುದು. ಪ್ರಸ್ತುತ 180 ಪೊಲೀಸರು ಭದ್ರತೆಗೆ ನಿಯೋಜಿಸಲಾಗಿದ್ದು ಆ ಸಂಖ್ಯೆ ಮತ್ತಷ್ಟು ಹೆಚ್ಚಿಸಲಾಗುವುದು ಎಂದು ತಿಳಿಸಿದರು.

Advertisement

ವಿಧಾನಸೌಧದಲ್ಲಿ ಅನಗತ್ಯ ವ್ಯಕ್ತಿಗಳ ಓಡಾಟ ಹೆಚ್ಚಾಗಿದೆ. ಇದರಿಂದ ಕೆಲಸಕ್ಕೆ ತೊಂದರೆಯಾಗುತ್ತಿದೆ. ಜತೆಗೆ ಭದ್ರತೆ ದೃಷ್ಟಿಯಿಂದ ಅಪರಿಚಿತ ವ್ಯಕ್ತಿಗಳ ಓಡಾಟಕ್ಕೆ ಕಡಿವಾಣ ಹಾಕುವುದು ಉತ್ತಮ ಎಂದು ಹಿರಿಯ ಪೊಲೀಸರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಚರ್ಚೆ ನಡೆದಿದೆ ಎಂದರು.

ಮಾಧ್ಯಮದವರಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ಒಂದನೇ ಮಹಡಿಯಲ್ಲಿ ಪತ್ರಕರ್ತರ ಗ್ಯಾಲರಿ ಸ್ಥಾಪಿಸಿ ಅಲ್ಲಿಗೆ
ಸಚಿವರು, ಅಧಿಕಾರಿಗಳು ಬಂದು ಮಾಹಿತಿ ನೀಡಲಿದ್ದಾರೆ. ಪತ್ರಕರ್ತರ ಪ್ರವೇಶಕ್ಕೆ ಪ್ರತ್ಯೇಕ ಪಾಸ್‌ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಏನಿದು ಆಡಳಿತಾತ್ಮಕ ವಲಯ?
ಆಡಳಿತಾತ್ಮಕ ವಲಯ, ವಿಭಾಗ, ಬ್ಲಾಕ್‌ ಎಂದು ರಚನೆಯಾದರೆ ಆ ವ್ಯಾಪ್ತಿ ಪ್ರದೇಶ ಸಂಪೂರ್ಣ ನಿಗಾ ವ್ಯವಸ್ಥೆಯಲ್ಲಿರುತ್ತದೆ.ಅಲ್ಲಿನ ಪ್ರವೇಶಕ್ಕೆ ಹಲವು ನಿರ್ಬಂಧ ವಿಧಿಸಬಹುದಾಗಿದೆ. ಭದ್ರತಾ ದೃಷ್ಟಿಯಿಂದ ಪ್ರತ್ಯೇಕ ತೀರ್ಮಾನಗಳನ್ನು ಕೈಗೊಳ್ಳಬಹುದಾಗಿದೆ. ಪ್ರತ್ಯೇಕ ಭದ್ರತೆ ಒದಗಿಸಲು ನಿಯಮಾವಳಿಗಳಲ್ಲಿ ಅವಕಾಶ ಸಿಗಲಿದೆ. ರಾಷ್ಟ್ರೀಯ ಸ್ಮಾರಕ, ಸಂಸತ್‌, ವಿಧಾನಸೌಧದಂತಹ ಕಟ್ಟಡಗಳು ಇರುವ ಸ್ಥಳಗಳನ್ನು ಈ ರೀತಿ ಪ್ರತ್ಯೇಕ ಬ್ಲಾಕ್‌ ಅಥವಾ ವಲಯ ಎಂದು ಗುರುತಿಸಲು ಅವಕಾಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next