Advertisement

‘ಮಣ್ಣಿನ ಸಂಸ್ಕೃತಿ ಕಂಬಳವನ್ನು ಉಳಿಸಬೇಕು’

03:21 PM Nov 26, 2018 | |

ಪುಂಜಾಲಕಟ್ಟೆ: ಕಂಬಳ ಕ್ರೀಡೆ ನಮ್ಮ ಮಣ್ಣಿನ ಸಂಸ್ಕೃತಿಯಾಗಿದ್ದು, ಕೃಷಿಕರ ಜೀವನದ ಭಾಗವಾಗಿದೆ. ತುಳುನಾಡಿನಲ್ಲಿ ಗ್ರಾಮೀಣ ಜನತೆಯ ಕೃಷಿ ಚಟುವಟಿಕೆಯ ಭಾಗವಾಗಿರುವ ಕಂಬಳದಿಂದ ಜನರು ಸಂತಸ ಪಡೆಯುತ್ತಿದ್ದು, ಕಾನೂನಿನ ಚೌಕಟ್ಟಿನಲ್ಲಿ ಕಂಬಳವು ವಿಜೃಂಭಿಸಲಿ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಹೇಳಿದರು. ಉಳಿ ಗ್ರಾಮದ ಕಕ್ಯಪದವಿನ ಮೈರ ಬರ್ಕೆಜಾಲುನಲ್ಲಿ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ಶನಿವಾರ ನಡೆದ 6ನೇ ವರ್ಷದ ಸತ್ಯ-ಧರ್ಮ ಜೋಡು ಕರೆ ಬಯಲು ಕಂಬಳದ ಸಮಾರೋಪದಲ್ಲಿ ಅವರು ಮಾತನಾಡಿದರು.

Advertisement

ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವುದಾಸ ಶೆಟ್ಟಿ, ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್‌, ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ, ಗುತ್ತಿಗೆದಾರ ಉದಯ ಕುಮಾರ್‌ ರಾವ್‌, ಬಿಜೆಪಿ ಯುವಮೋರ್ಚಾ ಪ್ರ. ಕಾರ್ಯದರ್ಶಿ ಸಂದೇಶ್‌ ಶೆಟ್ಟಿ, ದಂತ ವೈದ್ಯ ಡಾ| ಬಾಲಚಂದ್ರ ಶೆಟ್ಟಿ, ಪ್ರಮುಖರಾದ ಜಿ. ಆನಂದ, ದಿನೇಶ್‌ ಅಮೂrರು, ಬಾಲಕೃಷ್ಣ ಸೇರ್ಕಳ, ಅಭಿಷೇಕ್‌ ರೈ, ಪುರುಷೋತ್ತಮ ಶೆಟ್ಟಿ ವಾಮದಪದವು, ಕಂಬಳ ಸಮಿತಿ ಅಧ್ಯಕ್ಷ ಹರೀಶ್ಚಂದ್ರ ಪೂಜಾರಿ, ಪ್ರಗತಿಪರ ಕೃಷಿಕ ಬಾಬು ಗೌಡ ಪೆಂರ್ಗಾಲು, ಸ್ಥಳದಾನಿ ತುಕ್ರಪ್ಪ ಗೌಡ, ಉಳಿ ಗ್ರಾ.ಪಂ. ಸದಸ್ಯ ಚಿದಾನಂದ ರೈ, ಪ್ರಗತಿಪರ ಕೃಷಿಕ ಸುಧಾಕರ ಶೆಟ್ಟಿ ಶಂಕರಬೆಟ್ಟು, ಜಯ ಪೂಜಾರಿ ಕುಕ್ಕಾಜೆ, ಪ್ರವೀಣ್‌ ಶೆಟ್ಟಿ ಕಿಂಜಾಲು, ಶ್ರೀ ರಾಮಾಂಜನೇಯ ಗೆಳೆಯರ ಬಳಗದ ಅಧ್ಯಕ್ಷ ಉಮೇಶ್‌ ಪೂಜಾರಿ, ಕಾರ್ಯಾಧ್ಯಕ್ಷ ಲತೀಶ್‌ ಕುಕ್ಕಾಜೆ, ಗೆಳೆಯರ ಬಳಗದ ಪದಾಧಿಕಾರಿಗಳಾದ ಪುರುಷೋತ್ತಮ ಪಲ್ಕೆ, ಸುರೇಶ್‌ ಮೈರ, ಮಹಾಕಾಳಿ ಮಹಿಳಾ ಮಂಡಲ ಅಧ್ಯಕ್ಷೆ ಚಂದ್ರಕಲಾ ಯತೀಂದ್ರ ಚೌಟ ಮತ್ತಿತರರಿದ್ದರು.

ಈ ಸಂದರ್ಭದಲ್ಲಿ ಬಿ.ವೈ. ವಿಜಯೇಂದ್ರ ಮತ್ತು ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರನ್ನು ಕಂಬಳ ಸಮಿತಿ ವತಿಯಿಂದ ಸಮ್ಮಾನಿಸಲಾಯಿತು. ಗೆಳೆಯರ ಬಳಗದ ಸ್ಥಾಪಕಾಧ್ಯಕ್ಷ ಶಿವಾನಂದ ಮೈರ ಸ್ವಾಗತಿಸಿ, ಮಾಜಿ ಅಧ್ಯಕ್ಷ, ನ್ಯಾಯವಾದಿ ರಂಜಿತ್‌ ಮೈರ ವಂದಿಸಿದರು. ಪ್ರಶಾಂತ ಮೈರ ನಿರೂಪಿಸಿದರು.

ಫಲಿತಾಂಶ
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ ಒಟ್ಟು 91 ಜತೆ.
ಕನೆಹಲಗೆ-3, ಅಡ್ಡಹಲಗೆ-2, ಹಗ್ಗ ಹಿರಿಯ: 14, ನೇಗಿಲು ಹಿರಿಯ-14, ಹಗ್ಗ ಕಿರಿಯ-14, ನೇಗಿಲು ಕಿರಿಯ-44.
ಕನೆಹಲಗೆ: ವಾಮಂಜೂರು ತಿರುವೈಲು ಗುತ್ತು ಅಭಯ ನವೀನ್‌ಚಂದ್ರ ಆಳ್ವ (6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ). ಹಲಗೆ ಮೆಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ.

ಹಗ್ಗ ಹಿರಿಯ: ಪ್ರಥಮ-ಪದವು ಕಾನಡ್ಕ ಫ್ರಾನ್ಸಿಸ್‌ ಫ್ಲೇವಿ ಡಿ’ಸೋಜಾ , ಓಡಿಸಿದವರು-ಪಣಪೀಲು ಪ್ರವೀಣ್‌ ಕೋಟ್ಯಾನ್‌. ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ. ಶೆಟ್ಟಿ , ಓಡಿಸಿದವರು: ಮರೋಡಿ ಶ್ರೀಧರ್‌

Advertisement

ಹಗ್ಗ ಕಿರಿಯ: ಪ್ರಥಮ-ಮಿಜಾರು ಪ್ರಸಾದ್‌ ನಿಲಯ ಶಕ್ತಿ ಪ್ರಸಾದ್‌ ಶೆಟ್ಟಿ , ಓಡಿಸಿದವರು: ಮಾರ್ನಾಡ್‌ ರಾಜೇಶ್‌. ದ್ವಿತೀಯ: ಕಾಂತಾವರ ಅಂಬೋಡಿಮಾರ್‌ ರಘುನಾಥ ದೇವಾಡಿಗ, ಓಡಿಸಿದವರು: ನಕ್ರೆ ಮಂಜುನಾಥ ಭಂಡಾರಿ. 

ನೇಗಿಲು ಹಿರಿಯ: ಪ್ರಥಮ-ಇರುವೈಲು ಪಾಣಿಲ ಬಾಡ ಪೂಜಾರಿ, ಓಡಿಸಿದವರು: ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ. ದ್ವಿತೀಯ-ಬೋಳದ ಗುತ್ತು ಸತೀಶ್‌ ಶೆಟ್ಟಿ , ಓಡಿಸಿದವರು:
ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್‌ ಎಂ. ಶೆಟ್ಟಿ.

ನೇಗಿಲು ಕಿರಿಯ: ಪ್ರಥಮ-ಮಾಣಿ ಸಾಗು ಹೊಸಮನೆ ಉಮೇಶ್‌ ಮಹಾಬಲ ಶೆಟ್ಟಿ, ಓಡಿಸಿದವರು: ಮರೋಡಿ ಶ್ರೀಧರ್‌. ದ್ವಿತೀಯ-ಮುಂಡ್ಕೂರು ಪುನ್ಕೆದಡಿ ಲೊಕೇಶ್‌ ಪೂಜಾರಿ, ಓಡಿಸಿದವರು: ಕಡಂದಲೆ ದುರ್ಗಪ್ರಸಾದ್‌.

ಅಡ್ಡಹಲಗೆ: ಪ್ರಥಮ- ಬೋಳಾರ ತ್ರಿಶಾಲ್‌ ಕೆ. ಪೂಜಾರಿ, ಹಲಗೆ ಮೆಟ್ಟಿದವರು: ಶಿರೂರು ಮಂದಾರ್ತಿ ಮುದ್ದುಮನೆ ಗೋಪಾಲ ನಾಯ್ಕ. ದ್ವಿತೀಯ- ಹಂಕರಜಾಲು ಜಯರಾಜ್‌ ಭಿರ್ಮಣ್ಣ ಶೆಟ್ಟಿ, ಹಲಗೆ ಮೆಟ್ಟಿದವರು: ನಾರಾವಿ ಯುವರಾಜ ಜೈನ್‌. 

ಆರಾಧನೆಯ ಭಾಗ
ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಮಾತನಾಡಿ, ಕೃಷಿ ಹಾಗೂ ಕಂಬಳಕ್ಕೆ ಮಹತ್ವ ನೀಡುವ ಮೂಲಕ ನಮ್ಮ ಮೂಲ ಸಂಸ್ಕೃತಿಯ ಜತೆ ರೈತರ ಜಾನಪದ ಕ್ರೀಡೆಯನ್ನು ಉಳಿಸಿ, ಬೆಳೆಸಬೇಕು. ತುಳುನಾಡು ದೈವ- ದೇವರ ಆರಾಧನೆಯ ಬೀಡಾಗಿದ್ದು, ಕಂಬಳವು ಆರಾಧನೆಯ ಭಾಗವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next