Advertisement

ಶಂಖ ಹುಳು ಕಾಟ: ರೈತರಿಗೆ ಪರಿಹಾರ ನೀಡಲು ಆಗ್ರಹ

10:52 AM Jul 16, 2022 | Team Udayavani |

ಕಾಳಗಿ: ತಾಲೂಕಿನಾದ್ಯಂತ ಬಸವನಹುಳು ಕಾಟದಿಂದ ಬೆಳೆಹಾನಿಯಾದ ರೈತರಿಗೆ ಪರಿಹಾರ ಒದಗಿಸಬೇಕೆಂದು ದಲಿತ ಸೇನೆಯಿಂದ ತಹಶೀಲ್ದಾರ್‌ ಹಾಗೂ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

Advertisement

ಮುಂಗಾರು ಮಳೆ ಬಿತ್ತನೆಯಿಂದ ರೈತರು ಬಿತ್ತನೆ ಮಾಡಿದ ಸೋಯಾಬಿನ್‌, ಉದ್ದು, ಹೆಸರು, ತೊಗರಿ ಬೆಳೆಗೆ ಬಸವನಹುಳುಗಳ ಕಾಟ ಹೆಚ್ಚಾಗಿದ್ದು, ಸಂಪೂರ್ಣ ನಾಶವಾಗಿವೆ. ಇದರಿಂದ ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ಸರ್ಕಾರ ಶೀಘ್ರವೇ ರೈತರ ನೆರವಿಗೆ ಧಾವಿಸಿ ಪ್ರತಿ ಎಕರೆಗೆ 10000ರೂ. ಪರಿಹಾರ ಧನ ನೀಡಬೇಕು ಎಂದು ಸೇನೆ ಮುಖಂಡರು ಒತ್ತಾಯಿಸಿದರು.

ಮರು ಬಿತ್ತನೆ ಮಾಡಲು ರೈತರ ಹತ್ತಿರ ಹಣ ಇಲ್ಲದಿರುವುದರಿಂದ ಸರ್ಕಾರವೇ ಬೀಜ ಮತ್ತು ರಸಗೊಬ್ಬರ ಉಚಿತವಾಗಿ ನೀಡಬೇಕು. ಬೆಳೆ ವಿಮೆ ಉಚಿತವಾಗಿ ಮಾಡಬೇಕು. ಬೆಳೆ ಹಾನಿ ಬಗ್ಗೆ ಕೃಷಿ ಅಧಿಕಾರಿಗಳು ಹೊಲಗಳಿಗೆ ತೆರಳಿ ವೈಜ್ಞಾನಿಕ ಸಮೀಕ್ಷೆ ಮಾಡಬೇಕು. ಕೃಷಿ ತಜ್ಞರು ರೈತರ ಹೊಲಗಳಿಗೆ ಭೇಟಿ ನೀಡಿ ಮಣ್ಣನ್ನು ಪರೀಕ್ಷೆಗೆ ಒಳಪಡಿಸಿ ಸೂಕ್ತ ಸಲಹೆ ನೀಡಬೇಕೆಂದು ಆಗ್ರಹಿಸಿದರು.

ದಲಿತ ಸೇನೆ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾಧ್ಯಕ್ಷ ಮೋಹನ ಚಿನ್ನ, ಕಪಿಲ್‌ ದೊಡ್ಡಮನಿ ಚಿಂಚೋಳಿ, ದೇವರಾಜ್‌ ಕ್ಲೋಡಿ, ಕೃಷ್ಣ ಕುಡ್ಡಳ್ಳಿ ಹಾಗೂ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next