Advertisement

ಖಮರುಲ್‌ ಬೆಂಬಲಿಗನ ಮನೆಗೆ ನುಗ್ಗಿ ದಾಂಧಲೆ

12:26 AM Apr 08, 2019 | Team Udayavani |

ಕಲಬುರಗಿ: ಮಾಜಿ ಸಚಿವ ದಿ|ಖಮರುಲ್‌ ಇಸ್ಲಾಂ ಬೆಂಬಲಿಗ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಮ್ಮದ ಅಸಗರ ಚುಲ್‌ಬುಲ್‌ ಮೇಲೆ ಹಲ್ಲೆ ನಡೆಸಿರುವ ಗುಂಪೊಂದು ಅವರ ಮನೆಗೆ ನುಗ್ಗಿ ದಾಂಧಲೆ ನಡೆಸಿದೆ.

Advertisement

ಖ್ವಾಜಾ ಬಂದಾ ನವಾಜ್‌ ದರ್ಗಾ ಹತ್ತಿರದ ಚುಲ್‌ಬುಲ್‌ ಮನೆಗೆ ಶನಿವಾರ ರಾತ್ರಿ ನುಗ್ಗಿದ ಈ ಗುಂಪು ಅಸಗರ್‌, ಅವರ ಸಹೋದರರೂ ಸೇರಿ ಹಲವರ ಮೇಲೆ ಹಲ್ಲೆ ನಡೆಸಿದೆ. ಖಮರುಲ್‌ ಪತ್ನಿ, ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಖನೀಜ್‌ ಫಾತಿಮಾ ಬೆಂಬಲಿಗರೇ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಶಾಸಕಿ ಖನೀಜ್‌ ಫಾತಿಮಾ ಅವರು ನಿಂದನೆ ಮಾಡಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಆಲ್‌ ಇಂಡಿಯಾ ಮಿಲ್ಲಿ ಕೌನ್ಸಿಲ್‌ ಸಭೆಯಲ್ಲಿ “ಸಚಿವ ಸ್ಥಾನ
ತಪ್ಪಿದ್ದರಿಂದಲೇ ಖಮರುಲ್‌ ಸಾವು ಸಂಭವಿಸಿತು. ಇದಕ್ಕೆಲ್ಲ ಖರ್ಗೆ ಕಾರಣ’ ಎಂದು ಚುಲ್‌ಬುಲ್‌ ಹೇಳಿರುವುದೇ ಹಲ್ಲೆಗೆ ಕಾರಣ ಎಂದು ಹೇಳಲಾಗಿದೆ.

ಶನಿವಾರ ರಾತ್ರಿ ಏಕಾಏಕಿ ಚುಲ್‌ಬುಲ್‌ ಮನೆ ಮೇಲೆ ಗುಂಪು ದಾಳಿ ನಡೆಸಿತು. ಈ ವೇಳೆ, ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತ ತಲುಪಿತು.ಎರಡೂ ಕಡೆಯ ಜನ ಪರಸ್ಪರ ಬಡಿದಾಡಿಕೊಂಡಿದ್ದು, ಗಾಯಗೊಂಡವರು
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರೋಜಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಲ್ಲೆ ಘಟನೆ ಬೆನ್ನಲ್ಲೇ ಖನೀಜ್‌ ಫಾತಿಮಾ ಅವರ ನೂರಾರು ಬೆಂಬಲಿಗರು ಖಮರುಲ್‌ ನಿವಾಸದತ್ತ ಆಗಮಿಸಿ ಘೋಷಣೆ ಕೂಗತೊಡಗಿದರು. ಈ ಮಧ್ಯೆ ಸಚಿವ ಪ್ರಿಯಾಂಕ್‌ ಖರ್ಗೆ, ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಅವರು ಫಾತಿಮಾ ನಿವಾಸಕ್ಕೆ ಆಗಮಿಸಿ ಘಟನೆ ಬಗ್ಗೆ ಮಾಹಿತಿ ಪಡೆದರು. ಚುನಾವಣೆ ಸಂದರ್ಭ ಇಂತಹ ಘಟನೆಗಳು ನಡೆಯಬಾರದು. ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next