ನವದೆಹಲಿ: ರಾಜ್ಯ ಅಥವಾ ಕೇಂದ್ರ ಸರ್ಕಾರಿ ಉದ್ಯೋಗ ಬೇಕಿದ್ದರೆ ನಿಗದಿತ ವಿಭಾಗದ ಪರೀಕ್ಷೆ, ಸಂದರ್ಶನ ಪಾಸಾದರೆ ಉದ್ಯೋಗ ಸಿಗುತ್ತದೆ. ಆದರೆ ಇನ್ನು ಈ ವ್ಯವಸ್ಥೆಯ ಬದಲಾಗಿ ಐದು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದರೆ ಮಾತ್ರ ಸರ್ಕಾರಿ ಉದ್ಯೋಗ ಎಂದು
ಸಂಸತ್‌ನ ಸ್ಥಾಯಿ ಸಮಿತಿ ಸಲಹೆ ಮಾಡಿದೆ.
ಮೂಲಗಳ ಪ್ರಕಾರ, ಸಿಬ್ಬಂದಿ ಮತ್ತು ತರಬೇತಿ ಇಲಾಖೆಯಿಂದ ಸಂಸತ್ ಸಮಿತಿ ಈ ಕುರಿತು ಮಾಹಿತಿ ಸಂಗ್ರಹಿಸಿ ಸಲಹೆ ಮಾಡಿದೆ. ಇದೀಗ
ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅದಕ್ಕೆ ಸಂಬಂಧಿಸಿದ ಶಿಫಾರಸನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸಲಹೆ
ಮಾಡಿದೆ.
ಅದಕ್ಕೆ ಕಾರಣವೇನು?: ಭಾರತೀಯ ಸೇನೆಯಲ್ಲಿ ವಿವಿಧ ಹಂತಗಳ ಯೋಧರು, ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ಕೊರತೆ ಇದೆ. ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ಹಿನ್ನೆಲೆಯಲ್ಲಿ ಸಂಸತ್ ಸಮಿತಿ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಮುಂದಿಡುವ ಬಗ್ಗೆ ಚರ್ಚಿಸಿದೆ. ಐದು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ, ಸರ್ಕಾರಿ ಉದ್ಯೋಗಕ್ಕೆ ಸೇರಿದರೆ ಅಂಥವರಲ್ಲಿ ಶಿಸ್ತು ಬರುತ್ತದೆ. ವಿವಿಧ ಇಲಾಖೆಗೆ ವರ್ಗಾವಣೆಯಾದರೂ ಅವರು ಅದನ್ನು ನಿಭಾಯಿಸಬಲ್ಲರು ಎನ್ನುವುದು ಸಮಿತಿ ಲೆಕ್ಕಾಚಾರ.
ರಕ್ಷಣಾ ಸಚಿವಾಲಯಕ್ಕೆ ಕೂಡ ಈ ಪ್ರಸ್ತಾಪ ರವಾನೆಯಾಗಿದೆ. ಸದ್ಯ ಐಎಎಫ್, ನೌಕಾ ಪಡೆಯಲ್ಲಿ ತಲಾ 150 ಅಧಿಕಾರಿಗಳು ಹಾಗೂ 15,000 ಯೋಧರ ಕೊರತೆ ಎದುರಿಸುತ್ತಿವೆ. ಪ್ರಸ್ತಾವನೆಗೆ ಸಮ್ಮತಿ ಸಿಕ್ಕಲ್ಲಿ ಕೊರತೆ ನೀಗುವುದರಲ್ಲಿ ಅನುಮಾನ ಇಲ್ಲ.