Advertisement
ಕಲ್ಪತರು ನಾಡಿನಾದ್ಯಂತ ಗ್ರಾಪಂ ಚುನಾವಣೆ ಪೂರ್ಣಗೊಂಡು ಯಾವ ಪಕ್ಷದ ಅಭ್ಯರ್ಥಿಗಳು ಎಷ್ಟು ಗೆದ್ದಿದ್ದಾರೆ ಎನ್ನುವುದು ಆಯಾ ಪಕ್ಷಗಳ ಮುಖಂಡರಿಗೆ ತಿಳಿಯುತ್ತಲೇ ಈಗ ಯಾವ ಗ್ರಾಪಂ ನಾವು ಸ್ವತಂತ್ರವಾಗಿ ಅಧಿಕಾರ ಹಿಡಿಯಬಹುದು. ಇನ್ನು ತಮ್ಮ ಪಕ್ಷದ ಬೆಂಬಲಿಗರ ಕೊರತೆ ಇರುವ ಕಡೆಯೂ ಅಧಿಕಾರ ಹಿಡಿಯಲು ಪಕ್ಷದ ಮುಖಂಡರು ತಂತ್ರಗಾರಿಕೆ ಎಣೆಯಲಾರಂಭಿಸಿದ್ದಾರೆ.ಸರ್ಕಾರದಿಂದ ಗ್ರಾಪಂ ವಾರು ಮೀಸಲಾತಿಪ್ರಕಟವಾಗುತ್ತಲೇ ತಮ್ಮ ಪಕ್ಷವನ್ನು ಅಧಿಕಾರಕ್ಕೆತರಬೇಕು ಎನ್ನುವ ಕಾಳಜಿಯಿಂದ ಪಕ್ಷದ ಮುಖಂಡರು ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚೆ ಆರಂಭಿಸಿದ್ದಾರೆ.
Related Articles
Advertisement
ಜಿಲ್ಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಬಿಜೆಪಿಪಕ್ಷಗಳು ತನ್ನ ಕಮಾಲು ಮುಂದುವರಿಸಿವೆ ಗೆದ್ದಿರುವ ಅಭ್ಯರ್ಥಿಗಳಲ್ಲಿ ಕೆಲವರು ಇನ್ನೂಯಾವ ಪಕ್ಷದ ಬೆಂಬಲಿಗರು ಎಂದುಹೇಳುತ್ತಿಲ್ಲ ನಮ್ಮ ಪಕ್ಷದವರು ಎಂದು ಹೇಳುತ್ತಿದ್ದಾರೆ.
ಕಾಂಗ್ರೆಸ್, ಜೆಡಿಎಸ್,ಬಿಜೆಪಿ ಪಕ್ಷದಮುಖಂಡರು ನಮ್ಮ ಪಕ್ಷದ ಬೆಂಬಲಿಗರುಇಷ್ಟು ಸದಸ್ಯರು ಗೆದ್ದಿದ್ದಾರೆ ಎಂದುಹೇಳುತ್ತಿದ್ದಾರೆ, ಈಗ ಮೂರು ಪಕ್ಷಗಳವರುಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಮೇಲೆಕಣ್ಣಿಟ್ಟಿದ್ದು ಅದಕ್ಕೆ ಪೂರಕ ವಾಗಿ ಸದಸ್ಯರ ಬಲ ಬೇಕಾಗಿದೆ,
ಮೀಸಲಾತಿಗೆ ಅನುಗುಣವಾಗಿ ತಮ್ಮಪಕ್ಷದ ಬೆಂಬಲಿಗರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಆ ಪಂಚಾಯತ್ ನಮ್ಮ ಪಕ್ಷದ ವಶದಲ್ಲಿ ಇದೆ ಎನ್ನುವ ಹೆಗ್ಗಳಿಕೆ ಪಡೆಯಲು ಮೂರುಪಕ್ಷಗಳು ರಣ ತಂತ್ರ ರೂಪಿಸುತ್ತಿದ್ದಾರೆ. ಮುಂದೆ ಮಾರ್ಚ್ ಏಪ್ರಿಲ್‌ನಲ್ಲಿ ಬರಲಿರುವಜಿಪಂ, ತಾಪಂಗಳ ಚುನಾವಣೆ ಗಮನದಲ್ಲಿಇಟ್ಟು ಕೊಂಡು ಗ್ರಾಪಂ ಅಧಿಕಾರ ಹಿಡಿಯಲುಮೂರು ರಾಜಕೀಯ ಪಕ್ಷಗಳು ಕಾರ್ಯತಂತ್ರ ಎಣಿಯುತ್ತಲಿವೆ.
–ಚಿ.ನಿ.ಪುರುಷೋತ್ತಮ್