Advertisement
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೋವಿಡ್ ನಿಯಂತ್ರಣ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಇತರ ರಾಜ್ಯಗಳಿಂದ ತಲಪಾಡಿ ಚೆಕ್‌ಪೋಸ್ಟ್ ಮೂಲಕ ಆಗಮಿಸುವವರಿಗೆ ಪಾಸ್ ಕಡ್ಡಾಯವಾಗಿದೆ. ಪಾಸ್ ಮಂಜೂ ರಾತಿಯಲ್ಲಿ ಗರ್ಭಿಣಿಯರು, ಮಕ್ಕಳು, ರೋಗಿಗಳು, ವಯೋವೃದ್ಧರು, ಮಹಿಳೆ ಯರಿಗೆ ಆದ್ಯತೆ ನೀಡಲಾಗುವುದು. ಪಾಸ್ ಮಂಜೂರಾತಿಯಲ್ಲಿ ಆದ್ಯತೆ ಕ್ರಮ ಖಚಿತಗೊಳಿಸುವ ಹೊಣೆಯನ್ನು ಹೆಚ್ಚುವರಿ ದಂಡನಾಧಿಕಾರಿ, ಉಪ ಜಿಲ್ಲಾಧಿಕಾರಿಗೆ ನೀಡಲಾಗಿದೆ. ಪಾಸ್ ಇಲ್ಲದೆ ಜನರನ್ನು ಅಕ್ರಮ ವಾಗಿ ಗಡಿ ದಾಟಿಸುವವರನ್ನು ಸರಕಾರಿ ಕ್ವಾರಂಟೈನ್‌ಗೆ ದಾಖಲಿಸಲಾಗುವುದು. ಜತೆಗೆ ಇಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ತಲಪಾಡಿ ಮೂಲಕ ಕೇರಳ ಪ್ರವೇಶ ಮಾಡುವವರು ರಾ.ಹೆ.ಮೂಲಕವೇ ತಮ್ಮೂರಿಗೆ ತಲಪಬೇಕು. ತಮ್ಮ ಪ್ರಯಾಣಕ್ಕಾಗಿ ಅಡ್ಡದಾರಿ, ಎಸ್.ಪಿ.ಟಿ. ರಸ್ತೆ ಬಳಸಬಾರದು ಎಂದರು.
ತಲಪಾಡಿಯ ಮಂಜೇಶ್ವರ ಚೆಕ್‌ಪೋಸ್ಟ್ ಮೂಲಕ ಈ ವರೆಗೆ 6,535 ಮಂದಿ ಕೇರಳ ಪ್ರವೇಶಿಸಿದ್ದಾರೆ. ಅರ್ಜಿ ಸಲ್ಲಿಸಿದವರಲ್ಲಿ 17,859 ಮಂದಿಗೆ ಪಾಸ್ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿ ದರು. ಕಾಸರಗೋಡು ಜಿಲ್ಲೆಯ 1,753 ಮಂದಿ ಈ ವರೆಗೆ ಊರಿಗೆ ಮರಳಿದ್ದಾರೆ. 3,905 ಮಂದಿಗೆ ಪ್ರವೇಶಾತಿ ಪಾಸ್ ಮಂಜೂರು ಮಾಡಲಾಗಿದೆ ಎಂದಿದ್ದಾರೆ.