ಗಂಗಾವತಿ: ಗಂಗಾವತಿ ಕ್ಷೇತ್ರದ ಪ್ರವಾಸಿ ತಾಣಗಳು ಮತ್ತು ಐತಿಹಾಸಿಕ ಕ್ಷೇತ್ರಗಳ ಸಮಗ್ರ ಅಭಿವೃದ್ಧಿ ಮಾಡುವ ಮೂಲಕ ಈ ಕ್ಷೇತ್ರಗಳ ಪರಿಚಯವನ್ನು ವಿಶ್ವದಾದ್ಯಂತ ಮಾಡಲು ಯೋಜನೆ ರೂಪಿಸಲಾಗಿದೆ. ಕ್ಷೇತ್ರದ ಜನರ ಆಶೀರ್ವಾದ ಪಡೆದ ಇವುಗಳ ಅನುಷ್ಠಾನ ಮಾಡಲಾಗುತ್ತದೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಸಂಸ್ಥಾಪಕ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ವೆಂಕಟಗಿರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಲವು ಸ್ಥಳಗಳಿಗೆ ಭೇಟಿ ನೀಡಿ, ಅಭಿಮಾನಿಗಳು ಮತ್ತು ಪಾರ್ಟಿ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಗಂಗಾವತಿ ಕ್ಷೇತ್ರದಲ್ಲಿ ನೂರಾರು ಪ್ರವಾಸಿ ತಾಣಗಳಿದ್ದು ಇವುಗಳ ಅಭಿವೃದ್ಧಿ ಇದುವರೆಗೂ ಆಗಿಲ್ಲ. ಮುಂಬರುವ ದಿನಗಳಲ್ಲಿ ಇಡೀ ಕ್ಷೇತ್ರವನ್ನು ಗುರಿಯಾಗಿಸಿಕೊಂಡು ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದರು.
ವೆಂಕಟಗಿರಿಯಲ್ಲಿ ನೂರಾರು ಯುವಕರು ಬೈಕ್ ರ‍್ಯಾಲಿ ಮಾಡಿದರು. ರೆಡ್ಡಿ ವೆಂಕಟಗಿರಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ದೇಗುಲದ ಮುಂಭಾಗದ ಆಯೋಜಿಸಿದ ಸಮಾವೇಶದಲ್ಲಿ ಸುತ್ತಮುತ್ತಲಿನ ಹಲವು ಗ್ರಾಮಗಳ ಹಾಲಿ ಮತ್ತು ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಕೆಆರ್‌ಪಿಪಿ ಪಕ್ಷವನ್ನು ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಗ್ರಾಮೀಣ ಘಟಕದ ಅಧ್ಯಕ್ಷ ದುರ್ಗಪ್ಪ ಆಗೋಲಿ, ಜಿಲ್ಲಾ ಅಧ್ಯಕ್ಷ ಮನೋಹರ ಗೌಡ ಹೇರೂರು, ನಗರ ಘಟಕದ ಅಧ್ಯಕ್ಷ ವಿರೇಶ್ ಬಲ್ಕುಂದಿ, ಯಮನೂರು ಚೌಡ್ಕಿ, ಜೋಗದ ದುರ್ಗಪ್ಪ ನಾಯಕ, ಚನ್ನವೀರನಗೌಡ, ವಿರೇಶ್ ಸುಳೆಕಲ್, ನಾಗರಾಜ ಚಳಗೇರಿ, ರಮೇಶ್ ಹೊಲಮಲಿ, ಆನಂದ ಗೌಡ, ಸೈಯದ್ ಜಿಲಾನಿ ಪಾಷ, ಲಿಂಗನಗೌಡ ಹೇರೂರು, ರಾಜೇಶ್ ರೆಡ್ಡಿ, ಪುಂಡನಗೌಡ ಸೇರಿ ಅನೇಕರಿದ್ದರು.