Advertisement

ಭದ್ರತೆ ಹಿನ್ನೆಲೆಯಲ್ಲಿ ಕಾಂಪೌಂಡ್‌ ಧ್ವಂಸ

12:44 PM Apr 28, 2018 | |

ಪಿರಿಯಾಪಟ್ಟಣ: ಭದ್ರತೆಯ ಹಿತದೃಷ್ಟಿಯ ಹೆಸರಿನಲ್ಲಿ ಕಾಂಪೌಂಡ್‌ನ್ನು ಒಡೆದು ನಾಶಪಡಿಸುತ್ತಿದ್ದಾರೆಯೇ ವಿನಹ ಸರಿಪಡಿಸುತ್ತಿಲ್ಲ ಎಂದು ಸಾರ್ವಜನಿಕರು  ಆರೋಪಿಸಿದ್ದಾರೆ. ಪಟ್ಟಣದ ಕ್ರೀಡಾ ಆವರಣದಲ್ಲಿ ನಿರ್ಮಿಸಿರುವ ಕಾಂಪೌಂಡ್‌ ಗೋಡೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಾಯಕರು ಸಭೆ,  ಸಮಾರಂಭಗಳಿಗೆ ಆಗಮಿಸುವ ಹಿನ್ನೆಲೆಯಲ್ಲಿ ಭದ್ರತೆ ಹಿತದೃಷ್ಟಿಯಿಂದ ಕಾಂಪೌಂಡ್‌ ನಾಶಪಡಿಸಲಾಗುತ್ತಿದೆ ಎಂದು ದೂರಿದ್ದಾರೆ. 

Advertisement

ಕೇಂದ್ರ ವಿಶೇಷ ಭದ್ರತಾ ತಂಡ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ಕಾಂಗ್ರೆಸ್‌ ಪ್ರಚಾರಕ್ಕಾಗಿ ಆಗಮಿಸಿದ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಕಾಂಪೌಂಡ್‌ ನಾಶಪಡಿಸಲಾಗಿದೆ.  

ಕಳೆದ 2 ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ವಿವಿಧ  ಕಾಮಗಾರಿಗಳಿಗೆ ಚಾಲನೆ ನೀಡುವ ಸಮಾರಂಭಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಸಹ ಇದೇ ಕಾಂಪೌಂಡ್‌ನ್ನು ಮತ್ತೂಂದು ಕಡೆ ನಾಶಪಡಿಸಲಾಗಿತ್ತು. 

ಈಗಿನವರೆಗೂ ನಾಶಪಡಿಸಲಾದ ಕಾಂಪೌಂಡ್‌ನ್ನು ಸರಿಪಡಿಸದೆ ಹಾಗೇ ಉಳಿದಿದೆ. ಈಗಾಗಲೇ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ ರಾಹುಲ್‌ ಗಾಂಧಿ  ಅವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮತ್ತೆ ಇದೇ ಕಾಂಪೌಂಡ್‌ನ್ನು ಒಡೆದು ನಾಶಪಡಿಸಲಾಗಿದೆ. 

ಮುಂದಿನ ದಿನಗಳಲ್ಲಿ ಈ ಕಾಂಪೌಂಡ್‌ನ್ನು  ನಾಶಪಡಿಸುತ್ತಾ ಹೋದರೆ ಕಾಂಪೌಂಡೇ ಇಲ್ಲದಂತಾಗುತ್ತದೆ. ಕಾರ್ಯಕ್ರಮ ಮುಗಿದ ನಂತರ ನಿಯಮಾನುಸಾರ ಕಾಂಪೌಂಡ್‌ನ್ನು ನಿರ್ಮಿಸಿ ಸಾರ್ವಜನಿಕರ ಆಸ್ತಿಯನ್ನು ಉಳಿಸಲು ಮುಂದಾಗಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next