Advertisement

ನಗರದ ಎಲ್ಲ ವಾರ್ಡ್‌ಗಳಲ್ಲಿ ಕಾಂಪೋಸ್ಟ್‌ ಖರೀದಿ ಕೇಂದ್ರ

12:39 PM Mar 28, 2017 | |

ಬೆಂಗಳೂರು: ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ತಯಾರಿಸುವ ಕಾಂಪೋಸ್ಟ್‌ ಗೊಬ್ಬರ ಖರೀದಿಗೆ ನಗರದ ಎಲ್ಲ 198 ವಾರ್ಡ್‌ಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಕರ್ನಾಟಕ ಕಾಂಪೋಸ್ಟ್‌ ಅಭಿವೃದ್ದಿ ನಿಗಮ ಹಾಗೂ ಬಿಬಿಎಂಪಿಯ ಎಲ್ಲ ತ್ಯಾಜ್ಯ ಘಟಕಗಳ ವತಿಯಿಂದ ಸೋಮವಾರ ವಿಧಾನಸೌಧದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಕಾಂಪೋಸ್ಟ್‌ ವಿತರಿಸುವ ಕೃಷಿ ಇಲಾಖೆಯ ಪೈಲಟ್‌ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, “ಕಾಂಪೋಸ್ಟ್‌ ಗೊಬ್ಬರಕ್ಕೆ ಸಾಕಷ್ಟು ಬೇಡಿಕೆ ಬರುತ್ತಿದೆ. ಖರೀದಿಸಲು ರೈತರು ಸಿದ್ಧರಿದ್ದಾರೆ. ಕಾಂಪೋಸ್ಟ್‌ ಗೊಬ್ಬರ ಹೆಚ್ಚು ಉಪಯುಕ್ತ ಎಂದು ಕೃಷಿ ವಿವಿಗಳು ಪ್ರಮಾಣೀಕರಿಸಿವೆ,” ಎಂದು ತಿಳಿಸಿದರು.

ರಾಜಧಾನಿ ಬೆಂಗಳೂರಿಗೆ ಗಾಬೇìಜ್‌ ಸಿಟಿ ಎಂದು ಕರೆಯುವಷ್ಟರ ಮಟ್ಟಿಗೆ ಇಲ್ಲಿನ ಕಸದ ಸಮಸ್ಯೆ ಇತ್ತು. ಆದರೆ, ನಮ್ಮ ಸರ್ಕಾರ ಬಂದ ಮೇಲೆ ಕಸವಿಲೇವಾರಿಗೆ ಹೆಚ್ಚಿನ ಹಣ ಕೊಡಲಾಗಿದೆ. ಈಗ ಪರಿಸ್ಥಿತಿ ಬದಲಾಗಿದೆ. ಬೆಂಗಳೂರಿನ ಉದ್ಯಾನನಗರಿ ಖ್ಯಾತಿಯನ್ನು ಉಳಿಸಿಕೊಳ್ಳಲು ಸರ್ಕಾರದ ಜೊತೆಗೆ ಸಾರ್ವಜನಿಕರು ಕೈಜೋಡಿಸಬೇಕು. ಸರ್ಕಾರದ ಹಣವನ್ನು ಸದುಪಯೋಗಪಡಿಸಿಕೊಂಡಾಗ ಮಾತ್ರ ಇದರಲ್ಲಿ ಯಶಸ್ಸು ಸಾಧ್ಯ.

ಬೆಂಗಳೂರು ಸೇರಿದಂತೆ ಇತರ ನಗರಗಳೂ ಸ್ವತ್ಛವಾಗಿರಬೇಕು ಎಂಬುದು ಸರ್ಕಾರದ ಉದ್ದೇಶ. ನಗರಗಳಲ್ಲಿ ಉತ್ಪತ್ತಿಯಾಗುವ ಕಸ ಉಪಯೋಗಕ್ಕೆ ಬಂದು ಅದರಿಂದ ರೈತರಿಗೆ ಅನುಕೂಲವಾಗಬೇಕು,” ಎಂದರು.  ಕೃಷಿ ಸಚಿವ ಕೃಷ್ಣಭೈರೇಗೌಡ ಮಾತನಾಡಿ, “ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಗಾಬೇìಜ್‌ ಸಿಟಿ ಎಂದು ಹೇಳಲಾಗುತ್ತಿತ್ತು. ಈಗ ಅದು ಗ್ರೀನ್‌ ಸಿಟಿ ಆಗಿದೆ. ಬೆಂಗಳೂರು ಕಸದ ಸಮಸ್ಯೆಯಿಂದ ಮುಕ್ತವಾಗಿದೆ.

ತ್ಯಾಜ್ಯ ವಿಲೇವಾರಿಗೆ ಸರ್ಕಾರ ಬಿಬಿಎಂಪಿಗೆ 450 ಕೋಟಿ ರೂ. ನೀಡಿದೆ. ಶೇ.50ರಷ್ಟು ಕಸ ಸಂಸ್ಕರಣೆ ಆಗುತ್ತಿದೆ. 6ರಿಂದ 7 ಕಾಂಪೋಸ್ಟ್‌ ಘಟಕಗಳನ್ನು ಈಗಾಗಲೇ ಸ್ಥಾಪಿಸಲಾಗಿದ್ದು, ಇದರಲ್ಲಿ ಗೊಬ್ಬರ ಉತ್ಪಾದನೆ ಮಾಡಲಾಗುತ್ತಿದೆ,” ಎಂದರು. ಕಾರ್ಯಕ್ರಮದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌, ಮೇಯರ್‌ ಪದ್ಮಾವತಿ, ಕರ್ನಾಟಕ ಕಾಂಪೋಸ್ಟ್‌ ಅಭಿವೃದ್ಧಿ ನಿಗದಮ ಅಧ್ಯಕ್ಷ ಕೆಂಚೇಗೌಡ, ಬಿಬಿಎಂಪಿ ಆಯುಕ್ತ ಮಂಜುನಾಥಪ್ರಸಾದ್‌ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next