ಹುಬ್ಬಳ್ಳಿ: ಜೆಲ್ಲಿಕೋನ್ ಕಂಪನಿ ಸಿದ್ಧಪಡಿಸಿದ “ಪ್ರಯಾತ್ರ’ ಆ್ಯಪ್‌ನ ಹೊಸ ವಿನ್ಯಾಸದ ಕುರಿತು ಮಾಹಿತಿ ಕಾರ್ಯಕ್ರಮ ಇಲ್ಲಿನ ಬಿವಿಬಿ ಕಾಲೇಜಿನ ಬಯೋಟೆಕ್ ಸಭಾಭವನದಲ್ಲಿ ಮಂಗಳವಾರ ನಡೆಯಿತು. ಪಾಲಿಕೆ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ಮಾತನಾಡಿ, ಸ್ಮಾಟ್ ìಸಿಟಿ ವ್ಯವಸ್ಥೆಯಲ್ಲಿ ಇಡೀ ನಗರವನ್ನು ಪರಿಚಯಿಸುವ ಇಂತಹ ಆ್ಯಪ್‌ಗ್ಳ ಅವಶ್ಯಕತೆಯಿದೆ.
ಒಂದು ಆ್ಯಪ್‌ನಲ್ಲಿ ನಗರದ ಪ್ರೇಕ್ಷಣೀಯ ಸ್ಥಳಗಳಿಂದ ಹಿಡಿದು ಹೋಟೆಲ್, ಕ್ಯಾಬ್, ವಿಶೇಷ ತಿಂಡಿ-ತಿನಿಸು ಸೇರಿದಂತೆ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿರುವುದು ವಿಶೇಷ. ಇದರಿಂದ ಜನರಿಗೆ, ವ್ಯಾಪಾರಿಗಳಿಗೆ ಸಹಕಾರಿಯಾಗಿದೆ ಎಂದರು. ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಜನ ಸಲಹೆ-ಸೂಚನೆ ನೀಡಿದ್ದಾರೆ.
ಕೇಂದ್ರೀಕೃತ ನಿಯಂತ್ರಣದ ಸ್ಮಾರ್ಟ್ ಬೀದಿ ದೀಪದ ವ್ಯವಸ್ಥೆ ಜಾರಿಗೆ ಬರಲಿದೆ. ಮೇಲ್ಛಾವಣಿ ಸೌರಶಕ್ತಿ ಅಳವಡಿಕೆಗೆ ಸಂಬಂಧಿಸಿ ಈಗಾಗಲೇ 40 ಕಟ್ಟಡ ಗುರುತಿಸಲಾಗಿದೆ. ಮೊದಲ ಹಂತದಲ್ಲಿ 28 ಕಟ್ಟಡಗಳ ಮೇಲೆ ಮೇಲ್ಛಾವಣಿ ಸೌರಶಕ್ತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 30 ಗ್ರಾಮಗಳು ಸೇರಿದಂತೆ ಸಾಕಷ್ಟು ಸ್ಲಮ್ ಗಳಿವೆ. ಇವುಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಕೇಂದ್ರ ಸರಕಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಹು- ಧಾ 198ನೇ ಸ್ಥಾನ ಪಡೆದಿತ್ತು. ಮುಂದಿನ ವರ್ಷ 100ರೊಳಗೆ ಸ್ಥಾನ ಪಡೆಯಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ.
ಈ ಕುರಿತು ಸಾರ್ವಜನಿಕರು ಉಪಯುಕ್ತ ಮಾಹಿತಿ ನೀಡುವಂತೆ ಹೇಳಿದರು. ಜೆಲ್ಲಿಕೋನ್ ಕಂಪನಿಯ ಸಿಇಒ ನಿಖೀಲ ರಾಯಚೂರ ಆ್ಯಪ್ ಕುರಿತು ಮಾಹಿತಿ ಮಾಡಿದರು. ಸಿಟಿಐಇ ನಿರ್ದೇಶಕ ನಿತೀನ ಕುಲಕರ್ಣಿ, ಜೆಲ್ಲಿಕೋನ್ ಸಿಬಿಒ ಅಕ್ಷತಾ ಕುಡಚಿಮಠ, ಸಿಒಒ ಅಭಿಷೇಕ ಕೌಜಲಗಿ ಇತರರಿದ್ದರು.