Advertisement

ಪಾಕ್‌ ಕುತಂತ್ರಕ್ಕೆ ಪೂರಕ ಸಾಕ್ಷ್ಯಾಧಾರ

11:48 AM Apr 30, 2020 | mahesh |

ಹೊಸದಿಲ್ಲಿ: ಸಾಮಾಜಿಕ ಜಾಲತಾಣ ಉಪಯೋಗಿಸಿಕೊಂಡು ಇಸ್ಲಾಮಿಕ್‌ ರಾಷ್ಟ್ರಗಳಲ್ಲಿ ಭಾರತದ ವಿರುದ್ಧ ದ್ವೇಷದ ಬೀಜ ಬಿತ್ತುವ ಪಾಕಿಸ್ಥಾನದ ಕುತಂತ್ರ ಮತ್ತೆ ಬಯಲಾಗಿದೆ. ಇದಕ್ಕೆ ಪೂರಕವಾದ ಸಾಕ್ಷಿಯನ್ನು ಓಪನ್‌ ಸೋರ್ಸ್‌ ಇಂಟೆಲಿಜೆನ್ಸ್‌ (ಒಎಸ್‌ಐಎನ್‌ಟಿ) ಎಂಬ ಸಂಸ್ಥೆ ತನ್ನ ವರದಿಯಲ್ಲಿ ಪ್ರಕಟಿಸಿದೆ.

Advertisement

“ಅರಬ್‌ ರಾಷ್ಟ್ರಗಳಲ್ಲಿ ಭಾರತ ವಿರೋಧಿ ಅಭಿಯಾನ’ ಎಂಬ 193 ಪುಟಗಳ ವರದಿಯನ್ನು ಬುಧವಾರ ಬಿಡುಗಡೆ ಮಾಡಿರುವ ಒಎಸ್‌ಎನ್‌ಟಿ ಸಂಸ್ಥೆ, ಕೊಲ್ಲಿ ರಾಷ್ಟ್ರಗಳಲ್ಲಿ ಭಾರತ ವಿರೋಧಿ ಅಲೆಯನ್ನು ಸೃಷ್ಟಿಸುವ ಪ್ರಯತ್ನ ನಡೆಸುತ್ತಿದೆ ಎಂದಿದೆ. ಭಾರತದ ವಿರುದ್ಧ ಇಸ್ಲಾಮಿಕ್‌ ರಾಷ್ಟ್ರಗಳಲ್ಲಿ ಪಾಕ್‌ ಯಾವ ರೀತಿಯಲ್ಲಿ ಸುಳ್ಳು ಸುದ್ದಿ ಹಬ್ಬಿ ಸುತ್ತಿದೆ ಎಂಬುದನ್ನೂ ವಿವರಿಸಲಾಗಿದೆ.

ಭಾರತ ವಿರೋಧಿ ಶಬ್ದಗಳುಳ್ಳ ಹ್ಯಾಶ್‌ಟ್ಯಾಗ್‌ಗಳನ್ನು ರಚಿಸಿ, ಆ ಮೂಲಕ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದೆ. ಬೆಹ್ರೈನ್‌, ಸೌದಿ ಅರೇಬಿಯಾ, ಕುವೈಟ್‌ ಮತ್ತು ಒಮಾನ್‌ ರಾಷ್ಟ್ರ ಗಳಲ್ಲಿ ಸುಳ್ಳುಸುದ್ದಿ ಹರಡುತ್ತಿದೆ. ಭಾರತ ವನ್ನು ಇಸ್ಲಾಂ ವಿರೋಧಿ ರಾಷ್ಟ್ರ ವೆಂದು ಬಿಂಬಿ ಸಲು, ಭಾರತದಲ್ಲಿ ಮುಸ್ಲಿಮರಿಗೆ ಹಿಂಸೆ ನೀಡ ಲಾಗು ತ್ತಿದ್ದು ಬಲಿಪಶುಗಳಾಗಿ ಮಾಡ ಲಾಗುತ್ತಿದೆ ಎಂಬಿತ್ಯಾದಿ ಸುಳ್ಳು ಗಳನ್ನು ಹರಡುತ್ತಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next