ಜಮಖಂಡಿ: ಧಾರವಾಡ- ವಿಜಯಪುರ ರಾಜ್ಯ ಹೆದ್ದಾರಿ ಮಾರ್ಗದ ನಗರದ ಕಟ್ಟಿಕೆರೆ ಬಳಿ ಗುಡ್ಡದ ತಿರುವು ರಸ್ತೆ ಕಾಮಗಾರಿಯನ್ನು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕಾಮಗಾರಿ ಪರಿಶೀಲಿಸಿದ ನಂತರ ಗುಣಮಟ್ಟದೊಂದಿಗೆ ಶೀಘ್ರ ಪೂರ್ಣಗೊಳಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ನೇರವಾಗಿ ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರಿ ಪ್ರಮಾಣದ ವಾಹನಗಳು, ಕಬ್ಬಿನ ಟ್ರ್ಯಾಕ್ಟರ್‌ಗಳಿಗೆ ಸಂಚರಿಸಲು ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕಾಗಿ ಕಟ್ಟಿಕೆರೆ ಬಳಿ ಅಂದಾಜು 4.5 ಮೀಟರ್ ಗುಡ್ಡ ಆಳ ಕೊರೆದು, 5 ಮೀಟರ್ ಉದ್ದ ಮತ್ತು 18 ಮೀಟರ್ ಅಗಲ ಒಳಗೊಂಡ ರಸ್ತೆ ನಿರ್ಮಿಸಲಾಗುತ್ತಿದೆ.
ಲೋಕೋಪಯೋಗಿ ಇಲಾಖೆಯ ವಲಯವಾದ ರಸ್ತೆ ಮತ್ತು ಆಸ್ತಿ ನಿರ್ವಹಣಾ ಕೇಂದ್ರ ಕಾಮಗಾರಿಯನ್ನು ಫೆಬ್ರವರಿ 2020 ರಲ್ಲಿ ಆರಂಭಿಸಿದೆ.ಹಿಂದಿನ ಪ್ರಸ್ತಾವನೆಯಲ್ಲಿ 2ಕೋಟಿ ರೂ. ವೆಚ್ಚದಲ್ಲಿ ಗುಡ್ಡವನ್ನು 1 ಮೀಟರ್ ಆಳ ಕೊರೆದು ತಿರುವು ರಸ್ತೆ ನಿರ್ಮಿಸುವಂತೆ ಯೋಜನೆ ಅನುಮೋದನೆ ನೀಡಲಾಗಿತ್ತು.ಒಂದು ಮೀಟರ್ ಗುಡ್ಡಕೊರೆದು ತಿರುವು ನಿರ್ಮಿಸಿದರೂ ಕಬ್ಬಿನ ಟ್ರ್ಯಾಕ್ಟರ್‌ಗಳ ಸಂಚಾರಕ್ಕೆ, ರೈತರಿಗೆ ಮತ್ತು ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವುದಿಲ್ಲ ಎನ್ನುವು ದನ್ನು ಅಧ್ಯಯನದಿಂದ ಸುಗಮ ಸಂಚಾರಕ್ಕಾಗಿ 4.5 ಮೀಟರ್ ಗುಡ್ಡವನ್ನು ಆಳಕ್ಕೆ ಕೊರೆದು ತಿರುವು ಕಾಮಗಾರಿ ಪೂರ್ಣಗೊಳಿಸಲಾಗುವುದು. ಗುಡ್ಡ ಕೊರೆಯುವ ಆಳವನ್ನು 4.5ಕ್ಕೆ ವಿಸ್ತರಿಸಿರುವುದರಿಂದ ಹೆಚ್ಚುವರಿಯಾಗಿ 2.90 ಕೋಟಿ ಹೆಚ್ಚುವರಿಯಾಗಿ ಅನುದಾನದ ಅಗತ್ಯವಿದ್ದು, ಶೀಘ್ರವಾಗಿ ಅನುದಾನ ಬಿಡುಗಡೆ ಮಾಡಲಾಗುವುದು. ಈ ರಸ್ತೆ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಪರ್ಯಾಯ ಮಾರ್ಗವಿಲ್ಲದೇ ರೈತರಿಗೆ, ಸಾರ್ವಜನಿಕರಿಗೆ ಅನಾನುಕೂಲವಾಗಿತ್ತು. ಅರಣ್ಯ ಇಲಾಖೆ ಸಹಮತಿಯೊಂದಿಗೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ.ಕಾಮಗಾರಿ ಪ್ರಗತಿಯ ಬಗ್ಗೆ ತೀವ್ರ ನಿಗಾವಹಿಸಿ ಎಂದರು.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು ಇದ್ದರು.