Advertisement

ಆಧುನೀಕರಣ ಶೀಘ್ರ ಮುಗಿಸಿ

04:54 PM May 23, 2017 | |

ಕಲಬುರಗಿ: ಬೆಣ್ಣೆತೊರಾ ಯೋಜನೆ ಆಧುನೀಕರಣ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಹಾಗೂ ಕಾಮಗಾರಿ ಗುಣಮಟ್ಟ ಕಾಪಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದರು. 

Advertisement

ನಗರದ ಕರ್ನಾಟಕ ನೀರಾವರಿ ನಿಗಮದ ನೀರಾವರಿ ಯೋಜನೆಗಳ ವಲಯ ಕಚೇರಿಯಲ್ಲಿ ಬೆಣ್ಣೆತೊರಾ ಯೋಜನೆ ಅಡಿ ಅನುಷ್ಠಾನದಲ್ಲಿರುವ ನೀರು ಬಳಕೆದಾರರ ಸಂಘದ ಅಧ್ಯಕ್ಷರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ನೀರಾವರಿ ಯೋಜನೆ ಬಲದಂಡೆ-ಎಡದಂಡೆ ಕಾಲುವೆಗಳಲ್ಲಿ ವ್ಯಾಪ್ತಿಯಲ್ಲಿನ ಹೊಲಗಾಲುವೆಗಳನ್ನು ಹಂತ ಹಂತವಾಗಿ ನಿರ್ಮಿಸಬೇಕು ಎಂದು ನೀರಾವರಿ ಯೋಜನೆಗಳ ವಲಯ ಕಾಡಾ ಆಡಳಿತಾಕಾರಿಗೆ ಸೂಚಿಸಿದರು. 

ಮೊದಲನೇ ಹಂತವಾಗಿ 5000 ಹೆಕ್ಟೇರ್‌ ಪ್ರದೇಶಕ್ಕೆ ಹೊಲಗಾಲುವೆಗಳ ಪುನರ್‌ ನಿರ್ಮಾಣ ಹಾಗೂ ಭೂಮಿ ಸಮತಟ್ಟು ಕಾಮಗಾರಿ  ಪ್ರಸ್ತಾವನೆ ತಯಾರಿಸಿ ಸಲ್ಲಿಸಬೇಕು ಎಂದು ಸೂಚಿಸಿದರು. ಆಧುನೀಕರಣ ಕಾಮಗಾರಿ ಬಗ್ಗೆ ಚರ್ಚಿಸಿದ ಸಚಿವರು, ಎಲ್ಲ ಅಚ್ಚುಕಟ್ಟು ರೈತರಿಗೆ ನೀರು ಉಪಯೋಗಿಸಬೇಕು ಎಂದು ಕೋರಿದರು. 

ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ ಹೊಲಗಾಲುವೆಗಳ ಪುನರ್‌ ನಿರ್ಮಿಸುವಂತೆ ಸಚಿವರಿಗೆ ಮನವಿ ಮಾಡಿದರು. ಮುಖ್ಯ ಇಂಜಿನಿಯರ್‌ ಜಗನ್ನಾಥ ಹಲಿಂಗೆ ಬೆಣ್ಣೆತೊರಾ ಯೋಜನೆ ಬಲದಂಡೆ ಹಾಗೂ ಎಡದಂಡೆ ಕಾಲುವೆ ಪ್ರಗತಿ ಬಗ್ಗೆ ವಿವರಿಸಿದರು.

Advertisement

ಬೆಣ್ಣೆತೊರಾ ನೀರಾವರಿ ಯೋಜನೆಯಿಂದ 2017-18ನೇ ಸಾಲಿನ ಮುಂಗಾರು ಹಂಗಾಮಿಗೆ ಬಲದಂಡೆ ಕಾಲುವೆಯಿಂದ 45 ಕಿಮೀ ವರೆಗೆ ಒಳಪಡುವ 9181.69 ಹೆಕ್ಟೇರ್‌ ಮತ್ತು ಎಡದಂಡೆ ಕಾಲುವೆಯಿಂದ 32 ಕಿಮೀ ವರೆಗೆ ಒಳಪಡುವ 2127 ಹೆಕ್ಟೇರ್‌ ನೀರಾವರಿ ಕ್ಷೇತ್ರಕ್ಕೆ ನೀರು ಬಿಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಭೆಯಲ್ಲಿ ವಿವರಿಸಲಾಯಿತು.
 
ಡಿಪಿಆರ್‌ ಪ್ರಕಾರ ಮುಂಗಾರು ಹಂಗಾಮಿನಲ್ಲಿ ಬೆಳೆಯಬೇಕಾದ ಬೆಳೆಗಳ ವಿವರ ಇಂತಿದೆ. ತೊಗರಿ-2428 ಕ್ಟೇರ್‌, ದ್ವಿದಳ ಧಾನ್ಯ-6880 ಹೆಕ್ಟೇರ್‌, ಶೇಂಗಾ-1619 ಹೆಕ್ಟೇರ್‌, ಮೆಕ್ಕೆಜೋಳ-405 ಹೆಕ್ಟೇರ್‌ ಮತ್ತು ಜೋಳ-809 ಹೆಕ್ಟೇರ್‌. 

ನೀರಾವರಿ ಯೋಜನೆಗಳ ವಲಯ ಕಾಡಾ ನಿರ್ದೇಶಕ ದಶರಥ ಬಾಬು ಒಂಟಿ, ಮಕೂºಲ್‌ ಪಟೇಲ್‌, ಮಾರುತಿ ರಾವ, ಮಸ್ತಾನ್‌ ಸಾಬ, ಬೆಣ್ಣೆತೊರಾ ಯೋಜನೆ ನೀರು ಬಳಕೆದಾರರ ಸಹಕಾರ ಸಂಘದ, ಮಹಾಮಂಡಳಿ ಅಧ್ಯಕ್ಷರು ಮತ್ತು ಎಲ್ಲ ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಮತ್ತು ಅಧಿಕಾರಿ ವರ್ಗದವರು ಸಭೆಯಲ್ಲಿ ಹಾಜರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next