Advertisement

ಸಂಪೂರ್ಣ ರೇಷ್ಮೆ ಹುಳು ಸಾವು: ರೈತ ಕಂಗಾಲು

12:50 PM Oct 12, 2018 | Team Udayavani |

ಚಿಂತಾಮಣಿ: ರೇಷ್ಮೆ ಹುಳುಗಳಿಗೆ ಯಾರೋ ಕಿಡಿಗೇಡಿಗಳು ಔಷಧಿ ಸಿಂಪಡಣೆ ಮಾಡಿದ ಪರಿಣಾಮ ರೇಷ್ಮೆ ಹುಳುಗಳು ಸಾವನ್ನಪ್ಪಿರುವ ಘಟನೆ ಕುರುಬೂರು ಗ್ರಾಮದಲ್ಲಿ ನಡೆದಿದೆ.
 
ತಾಲೂಕಿನ ಕುರುಬೂರು ಗ್ರಾಮದ ನಿವಾಸಿ ಸತೀಶ್‌ ಎಂಬ ರೇಷ್ಮೆ ಬೆಳೆಗಾರರು ತಮ್ಮ ಸ್ವಂತ ಮನೆಯಲ್ಲಿಯೇ 150 ರೇಷ್ಮೆ ಮೊಟ್ಟೆ ತಂದು, ತನ್ನ ಮನೆಯಲ್ಲಿಯೇ ರೇಷ್ಮೆ ಹುಳುಗಳನ್ನು ಮೇಯಿಸುತ್ತಿದ್ದರು. ಬೆಳೆ ಮಾತ್ರ ತುಂಬಾ ಚೆನ್ನಾಗಿ ಬಂದಿತ್ತು. ಯಾರೋ ಕಿಡಿಗೇಡಿಗಳು ಬುಧವಾರ ರಾತ್ರಿ ರೇಷ್ಮೆ ಹುಳು ಮನೆಗೆ, ಕ್ರಿಮಿನಾಶಕ ಔಷಧಿ ಸಿಂಪಡಣೆ ಮಾಡಿರುವುದರಿಂದ ಗುರುವಾರ ಸಂಪೂರ್ಣವಾಗಿ ರೇಷ್ಮೆ ಹುಳುಗಳೆಲ್ಲ ಸಾವನ್ನಪಿವೆ. 

Advertisement

ಇದನ್ನು ಕಂಡ ರೈತ ಹತಾಶನಾಗಿದ್ದು, ಈ ವಿಷಯವನ್ನು ಕೂಡಲೇ ರೈತ ಸತೀಶ್‌ ರೇಷ್ಮೆ ಇಲಾಖೆ ಅಧಿಕಾರಿಗಳ ಗಮನಕೆ ತಂದಿದ್ದಾರೆ. ಸ್ಥಳಕ್ಕೆ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಆಂಜನೇಯರೆಡಿ ಭೇಟಿ ನೀಡಿ ಸತ್ತ ರೇಷ್ಮೆ
ಹುಳುಗಳನ್ನು ಪರಿಶೀಲನೆ ಮಾಡಿದರು.

ಸತತ ಮಳೆಯಿಲ್ಲದೆ ಬರಗಾಲ: ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸತತವಾಗಿ ಮಳೆಯಿಲ್ಲದೆ ಬರಗಾಲ ಹೆಚ್ಚಾಗಿದೆ. ಆದರೂ ಇರುವ ಸ್ವಲ್ಪ ನೀರಿನಲ್ಲಿ ಹಿಪ್ಪುನೇರಳೆ ಸೊಪ್ಪನ್ನು ಬೆಳೆದು ರೈತರು ರೇಷ್ಮೆ ಬೆಳೆಯನ್ನು
ಬೆಳೆಯುತ್ತಿದ್ದಾರೆ. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರಲ್ಲಿಲ್ಲ ಅನ್ನುವ ಗಾದೆ ಮಾತಿನ ಹಾಗೆ ಆರು ದಿನಗಳಲ್ಲಿ ಗೂಡು ಕಟ್ಟುವ ಹಂತಕ್ಕೆ ಬರಬೇಕಾಗಿದ್ದ ರೇಷ್ಮೆ ಹುಳುಗಳು ನಾಶವಾಗಿರುವುದಕ್ಕೆ, ರೈತನಿಗೆ 50 ಸಾವಿರ ರೂಪಾಯಿ ನಷ್ಟ ಉಂಟಾಗಿದೆ. ಸರ್ಕಾರದಿಂದ ಪರಿಹಾರ ಧನ ನೀಡುವಂತೆ ಮನವಿ ಮಾಡಿದ್ದಾರೆ.

ಕಿಡಿಗೇಡಿಗಳುಕ್ರಿಮಿನಾಶಕ ಔಷಧಿ ಸಿಂಪಡಣೆ ಮಾಡಿರುವುದರಿಂದ ರೇಷ್ಮೆ ಹುಳುಗಳು ಸತ್ತು ಹೊಗಿದೆ. ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳುವಂತೆ ರೈತ ಸತೀಶ್‌ ಚಿಂತಾಮಣಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಯಾವುದೇ ಒಂದು ಬೆಳೆ ನಾಶವಾದಗ ಅದರ ನಷ್ಟ ಎಷ್ಟು? ಒಂದು ವೇಳೆ ಬೆಳೆ ಚನ್ನಾಗಿದ್ದಿದ್ದರೆ ಎಷ್ಟು ಉತ್ಪನ್ನವಾಗುತ್ತಿತ್ತು. ಇದರಿಂದ ಎಷ್ಟು ಲಾಭ ದೊರೆಯುತ್ತದೆ ಎಂಬ ಅಂಶಗಳ ವರದಿಯನ್ನು ನೀಡಬಹುದು. ಆದರೆ ರೇಷ್ಮೆ ಇಲಾಖೆಯಿಂದ ಪರಿಹಾರ ನೀಡುವುದಕ್ಕೆ ಯಾವುದೇ ಯೋಜನೆ ಇಲ್ಲ. ನಾವು ಕೊಟ್ಟ ವರದಿ ಆಧಾರದ ಮೇಲೆ ಕಂದಾಯ ಇಲಾಖೆ ಪರಿಹಾರ ನೀಡಬಹುದು.
 ಆಂಜನೇಯರೆಡ್ಡಿ, ತಾಲೂಕು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ

Advertisement
Advertisement

Udayavani is now on Telegram. Click here to join our channel and stay updated with the latest news.

Next