ಹಾಸನ:ಕೊರೊನಾ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ವಾರಕ್ಕೆ4 ದಿನ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸುವಮೊದಲ ದಿನವಾದ ಗುರುವಾರ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೆ ಪೊಲೀಸರು ಮುಂದಾಗಿದ್ದಾರೆ.ಹಾಸನ ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನುಅಳವಡಿಸಿದ್ದು, ಆಂಬ್ಯುಲೆನ್ಸ್‌ಗಳು ಹಾಗೂ ಆಸ್ಪತ್ರೆ ಮತ್ತಿತರ ಅಗತ್ಯ ಸೇವೆಗಳಿಗಾಗಿ ಸಂಚರಿಸುವವರಿಗೆಮಾತ್ರ ಪೊಲೀಸರು ಅವಕಾಶ ನೀಡಿದರು.
ಅನಗತ್ಯವಾಗಿ ಸಂಚರಿಸುತ್ತಿದ್ದ ವರವಾಹನಗಳನ್ನುವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಔಷಧಿ ಅಂಗಡಿಗಳು,ಹಾಲಿನಬೂತ್ ಹಾಗೂನ್ಯಾಯಬೆಲೆಅಂಗಡಿಗಳ ಹೊರತು ಬೇರೆ ವಹಿವಾಟು ಸಂಪೂರ್ಣ ಸ್ಥಗಿತವಾಗಿತ್ತು.
ಜನರಿಗೆ ಎಚ್ಚರಿಕೆ: ಇದುವರೆಗೆ ಇದ್ದ ಭಾಗಶಃ ಲಾಕ್‌ಡೌನ್ ಸಂದರ್ಭದಲ್ಲಿ ಪೊಲೀಸರು ವಾಹನಗಳಸಂಚಾರ ನಿರ್ಬಂಧಕ್ಕೆಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ.ಆದರೆ ಗುರುವಾರ ಮಾತ್ರ ಕಟ್ಟುನಿಟ್ಟಿನ ಕ್ರಮಗಳಿಗೆಮುಂದಾಗಿರುವುದರಿಂದ ಹಾಸನ ನಗರದಲ್ಲಿವಾಹನಗಳ ಸಂಚಾರ ಬಹುತೇಕ ಸ್ತಬ್ಧವಾಗಿತ್ತು.ಬಡಾವಣೆಗಲ್ಲಿ ಮಾತ್ರಅಲ್ಲಲ್ಲಿಕೆಲದ್ವಿಚಕ್ರ ವಾಹನಗಳುಸಂಚರಿಸುತ್ತಿದ್ದವು. ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಮನೆಯಿಂದ ಬರಬಾರದು ಎಂದು ಧ್ವನಿ ವರ್ಧಕಗಳ ಮೂಲಕ ಜನರಿಗೆ ಎಚ್ಚರಿಕೆ ನೀಡಲಾಗುತ್ತಿತ್ತು.
ಜನರ ಸಹಕಾರ: ಆಸ್ಪತ್ರೆಗಳಿಗೆ ಬರುವವರ ಹೊರತುಗ್ರಾಮೀಣ ಪ್ರದೇಶಗಳಿಂದಲೂ ಜನರು ಹಾಸನನಗರಕ್ಕೆ ಗುರುವಾರ ಬರಲಿಲ್ಲ. ಆದರೆ ನಗರದಲ್ಲಿಆಸ್ಪತ್ರೆಗಳಿಗೆ ತೆರಳುವವರು, ಕೊರೊನಾ ಪರೀಕ್ಷೆಗೆಹೋಗುವವರು, ಲಸಿಕೆ ಹಾಕಿಸಿಕೊಳ್ಳಲು ಹೋಗುವವರಿಗೆ ತೊಂದರೆಯೇನೂ ಆಗಲಿಲ್ಲ. ಆದರೆಹಿಂದಿನ ದಿನಗಳಲ್ಲಿ ತರಕಾರಿ, ದಿನಸಿ ಖರೀದಿಗೆಂದುಬರುತ್ತಿದ್ದವರೂ ಗುರುವಾರ ಮನೆಯಿಂದ ಬರದೆಲಾಕ್‌ಡೌನ್‌ಗೆ ಜನರೂ ಸಹಕಾರ ನೀಡಿದರು.ಬ್ಯಾಂಕ್‌ಗಳ ವ್ಯವಹಾರ ಬಂದ್: ಸೋಮವಾರ,ಬುಧವಾರ,
ಶುಕ್ರವಾರ ಮಾತ್ರ ಬೆಳಗ್ಗೆ 6ರಿಂದ 10ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆಅವಕಾಶವಿದ್ದು, ಇನ್ನುಳಿದದಿನಗಳಾದ ಮಂಗಳವಾರ,ಗುರುವಾರ, ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್‌ಡೌನ್ ಜಾರಿಗೆ ಜಿಲ್ಲಾಡಳಿತ ನಿರ್ಧರಿಸಿದೆ. ಬ್ಯಾಂಕಿಂಗ್ ವ್ಯವಹಾಕ್ಕೆ ಸೋಮವಾರ, ಬುಧವಾರ, ಶುಕ್ರವಾರ ಬೆಳಗ್ಗೆ 8 ರಿಂದ 10 ಗಂಟೆವರೆಗೆಅವಕಾಶ ನೀಡಿದ್ದು, ಇನ್ನುಳಿದ 4 ದಿನಗಳಲ್ಲಿ ಬ್ಯಾಂಕ್‌ಗಳ ವ್ಯವಹಾರವನ್ನು ಸಂಪೂರ್ಣ ಬಂದ್ ಮಾಡಲು ಜಿಲ್ಲಾಧಿಕಾರಿ ಆದೇಶಿದ್ದಾರೆ.