ಔರಂಗಾಬಾದ್: ಕೋವಿಡ್ 19 ಸೋಂಕು ಪ್ರಕರಣ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ವಾರಾಂತ್ಯಕ್ಕೆ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:ಭಾರತ: ಕಳೆದ 24ಗಂಟೆಯಲ್ಲಿ 24,882 ಪ್ರಕರಣ ಪತ್ತೆ, ಒಟ್ಟು ಸಂಖ್ಯೆ 2ಲಕ್ಷಕ್ಕೆ ಏರಿಕೆ
ಇದಕ್ಕೂ ಮುನ್ನ ವಾರಾಂತ್ಯದಲ್ಲಿ ಭಾಗಶಃ ಲಾಕ್ ಡೌನ್ ಜಾರಿಗೊಳಿಸಿರುವುದಾಗಿ ಔರಂಗಾಬಾದ್ ಜಿಲ್ಲಾಡಳಿತ ತಿಳಿಸಿತ್ತು. ಶುಕ್ರವಾರ(ಮಾರ್ಚ್ 12) ಔರಂಗಾಬಾದ್ ಜಿಲ್ಲೆಯಲ್ಲಿ ಒಟ್ಟು 57,755 ಕೋವಿಡ್ ಪ್ರಕರಣ ಪತ್ತೆಯಾಗಿದ್ದು, ಇದರಲ್ಲಿ 5,569 ಸಕ್ರಿಯ ಕೋವಿಡ್ ಪ್ರಕರಣಗಳು ಇದ್ದಿರುವುದಾಗಿ ವರದಿ ತಿಳಿಸಿದೆ.
ಕೋವಿಡ್ 19 ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಔರಂಗಾಬಾದ್ ನಲ್ಲಿರುವ ಪ್ರಸಿದ್ಧ ಬೀಬಿ ಕಾ ಮಕ್ಬಾರಾ ಸ್ಮಾರಕ ಮತ್ತು ಶಿವಾಜಿ ಮಹಾರಾಜ್ ಮ್ಯೂಸಿಯಂ ಪ್ರದೇಶಕ್ಕೆ ಭೇಟಿ ನೀಡಲು ಏಪ್ರಿಲ್ 4ರವರೆಗೆ ನಿರ್ಬಂಧ ವಿಧಿಸಿರುವುದಾಗಿ ಜಿಲ್ಲಾಡಳಿತ ಘೋಷಿಸಿತ್ತು.
ಔರಂಗಾಬಾದ್ ನ ಫರ್ಬಾಣಿ ನಗರ ವ್ಯಾಪ್ತಿಯಲ್ಲಿ 2 ದಿನದ ಕರ್ಫ್ಯೂ ವಿಧಿಸಿದ್ದು, ಶನಿವಾರ ಮಧ್ಯರಾತ್ರಿಯಿಂದ ಸೋಮವಾರ ಬೆಳಗ್ಗೆ 6ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರಲಿದ್ದು, ಈ ಸಂದರ್ಭ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿತ್ತು.