Advertisement

ಬಾಬಾ ರಾಮ್‌ದೇವ್‌ ಸೇರಿ ಐವರ ವಿರುದ್ಧ ಕೇಸ್‌

10:53 AM Jun 28, 2020 | sudhir |

ಹೊಸದಿಲ್ಲಿ: ಕೋವಿಡ್ ಔಷಧ ಕುರಿತು ದಾರಿ ತಪ್ಪಿಸಿರುವ ಆಪಾದನೆ ಸಂಬಂಧ ಬಾಬಾ ರಾಮ್‌ದೇವ್‌ ಸೇರಿದಂತೆ ಐವರ ವಿರುದ್ಧ ಶನಿವಾರ ಎಫ್ಐಆರ್‌ ದಾಖಲಿಸಲಾಗಿದೆ.

Advertisement

ತಪ್ಪು ಮಾಹಿತಿ ನೀಡಿದ ಆರೋಪದ ಹಿನ್ನೆಲೆಯಲ್ಲಿ ಬಲರಾಮ್‌ ಜಾಖಡ್‌ ಎಂಬವರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ, ಜೈಪುರ­ದಲ್ಲಿ ಬಾಬಾ ರಾಮ್‌ದೇವ್‌, ಪತಂಜಲಿ ಸಂಸ್ಥೆ ಸಿಇಒ ಬಾಲಕೃಷ್ಣ ಆಚಾರ್ಯ, ವಿಜ್ಞಾನಿ ಅನುರಾಗ್‌ ವಘ್ನೇ, ಡಾ| ಬಲ್ಬಿರ್‌ ಸಿಂಗ್‌ ತೋಮರ್‌, ಡಾ| ಅನುರಾಗ್‌ ತೋಮರ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೊರೊನಾ ಸೋಂಕಿತರಿಗಾಗಿ ಪತಂಜಲಿ ಆಯು­ರ್ವೇದ ಸಂಸ್ಥೆಯು “ಕೊರೊನಿಲ್‌’ ಔಷಧವನ್ನು ಅಭಿವೃದ್ಧಿಪಡಿಸಿದೆ ಎಂದು ಬಾಬಾ ರಾಮ್‌ದೇವ್‌ ಮಂಗಳವಾರ ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next