Advertisement
ತಾಲೂಕಿನ ಮಲ್ಲಂದೂರು ಠಾಣೆಯಲ್ಲಿ ಮಯೂರ್ ಪಟೇಲ್ ಎಂಬುವವರು ದೂರು ದಾಖಲಿಸಿದ್ದು, ನವೀನ್ ತಮಗೆ ದೂರವಾಣಿ ಕರೆ ಮಾಡಿ ನಟ ಸುದೀಪ್ ವಿರುದ್ಧ ದಾಖಲಿಸಿರುವ ಪ್ರಕರಣಹಿಂಪಡೆಯುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಸುದೀಪ್ ನಿರ್ಮಾಣದ ವಾರಸ್ಧಾರ ಧಾರಾವಾಹಿ ಚಿತ್ರೀಕರಣಕ್ಕೆ ಮಯೂರ್ ಪಟೇಲ್ ಅವರ ತೋಟ ಹಾಗೂ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಆದರೆ ಬಾಡಿಗೆ ಹಣವನ್ನು ಪಾವತಿಸಿಲ್ಲ ಎಂದು ಆರೋಪಿಸಿ ಮಯೂರ್ ಪಟೇಲ್ 2017ರಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಎಸ್‌ಪಿ ಅಣ್ಣಾಮಲೈ ಆಗ ಪ್ರಕರಣ ದಾಖಲಿಸಿಕೊಂಡಿದ್ದರು. ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಉಚ್ಚ ನ್ಯಾಯಾಲಯದ ವಕೀಲ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರೂ ಸಹ ತಮಗೆ
ದೂರವಾಣಿ ಕರೆ ಮಾಡಿ ಸುದೀಪ್ ವಿರುದಟಛಿದ ಪ್ರಕರಣ ವಾಪಸ್ ಪಡೆದುಕೊಳ್ಳಿ. ಶೀಘ್ರವೇ ನಿಮಗೆ 1 ಕೋಟಿ ರೂ. ಹಣ ಕೊಡಿಸುತ್ತೇನೆ. ಅದರಲ್ಲಿ ಶೇ.10ರಷ್ಟನ್ನು ತಮಗೆ ಕೊಡಿ ಎಂದು ಹೇಳುತ್ತಿದ್ದಾರೆ ಎಂದು ಇಬ್ಬರೂ ಕರೆ ಮಾಡಿದ ಮೊಬೈಲ್ ಸಂಖ್ಯೆಗಳನ್ನು ಠಾಣೆಗೆ ನೀಡಿ ದೂರು ಸಲ್ಲಿಸಿದ್ದಾರೆ. ಮಲ್ಲಂದೂರು ಪೊಲೀಸರು ನವೀನ್ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.