Advertisement

ಹೆಬ್ಬಾಳಕರ ವಿರುದ್ಧ ದೂರು

11:36 PM Apr 23, 2019 | Lakshmi GovindaRaju |

ಬೆಳಗಾವಿ: ಸಮೀಪದ ಹಿಂಡಲಗಾ ಮತಗಟ್ಟೆ ಆವರಣದಲ್ಲಿ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಮತ ಯಾಚಿಸಿದ್ದಕ್ಕೆ ಅವರ ವಿರುದ್ಧ ಕ್ಯಾಂಪ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಮತಗಟ್ಟೆ ಸಂಖ್ಯೆ 60ರಲ್ಲಿ ಮತದಾನ ಮಾಡಿ ಹೊರ ಬಂದ ಶಾಸಕಿ ಹೆಬ್ಬಾಳಕರ್‌, ಸರದಿ ಸಾಲಿನಲ್ಲಿ ನಿಂತಿದ್ದ ಮತದಾರರಿಗೆ ತಮ್ಮ ಅಭ್ಯರ್ಥಿಗೆ ಮತದಾನ ಮಾಡುವಂತೆ ಕೈ ಮುಗಿಯುತ್ತ ಮುಂದೆ ಸಾಗಿದರು.

ಇದು ನೀತಿ ಸಂಹಿತೆ ಉಲ್ಲಂಘನೆ ಆಗಿದ್ದಕ್ಕೆ ಕೂಡಲೇ ಫ್ಲೈಯಿಂಗ್‌ ಸ್ಕ್ವಾಡ್‌ನ‌ ಸತೀಶ ಕಾಪಶಿ ಹಾಗೂ ಜಯಚಂದ್ರ ಪಾಟೀಲ ಅವರು ದೂರು ನೀಡಿದ್ದಾರೆ. ಶಾಸಕಿ ವಿರುದ್ಧ ಸೆಕ್ಷನ್‌ 126 ಹಾಗೂ 136 ಕಲಂ ಅಡಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next