Advertisement
ಕಾಂಗ್ರೆಸ್‌ನ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಬಿಜೆಪಿಯ ಹಿರಿಯ ನಾಯಕರ ಮಾರ್ಫ್ ಮಾಡಿದ ಫೋಟೋಗಳನ್ನು ಬಳಸಿ ತಿರುಚಿದ ಹಾಗೂ ದಾರಿತಪ್ಪಿಸುವ ಸುಳ್ಳು ಪೋಸ್ಟ್‌ಗಳನ್ನು ಹಾಕಲಾಗಿದೆ. ಈ ಮೂಲಕ ಉದ್ದೇಶಪೂರ್ವಕವಾಗಿ ರಾಜ್ಯದ ಜನರಲ್ಲಿ ದ್ವೇಷ ಹುಟ್ಟಿಸಲು ಹಾಗೂ ಬಿಜೆಪಿ ನಾಯಕರ ಹೆಸರಿಗೆ ಮಸಿ ಬಳಿಯಲು ಯತ್ನಿಸಲಾಗಿದೆ. ಈ ರೀತಿಯ ಫೋಸ್ಟ್‌ಗಳು ಬಿಜೆಪಿ ವಿರುದ್ಧ ಕನ್ನಡಿಗರನ್ನು ಎತ್ತಿಕಟ್ಟುವ ಮತ್ತು ಶಾಂತಿಗೆ ಭಂಗ ತರುವ ಉದ್ದೇಶ ಹೊಂದಿದೆ. ಇದು ಕೆಲ ವರ್ಗದ ಜನರನ್ನು ಉದ್ವಿಘ್ನಗೊಳಿಸುತ್ತದೆ. ಈ ರೀತಿ ಗೊಂದಲ ಉಂಟುಮಾಡುತ್ತಿರುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅವರ ಫೇಸ್‌ಬುಕ್ ಪೇಜ್ ನಿರ್ವಹಿಸುವ ವ್ಯಕ್ತಿಗಳಿಗೆ ಗೊತ್ತಿದ್ದರೂ, ನಿರಂತರವಾಗಿ ಆರೋಪ ಮಾಡುತ್ತಿದ್ದಾರೆ. ಆದರಿಂದ ಶಿವಕುಮಾರ್ ಹಾಗೂ ಅವರ ಫೇಸ್‌ಬುಕ್ ಪೇಜ್ ನಿರ್ವಹಿಸುವ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಯೋಗೇಂದ್ರ ಹೂಡಘಟ್ಟ ದೂರಿನಲ್ಲಿ ಆರೋಪಿಸಿದ್ದಾರೆ.
Advertisement
DK Shivakumar: ಡಿಕೆಶಿ, ಫೇಸ್‌ಬುಕ್ ಖಾತೆ ನಿರ್ವಾಹಕರ ವಿರುದ್ಧ ದೂರು
01:33 PM Jan 07, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.