Advertisement

ಅರವಿಂದ್‌ ಲಿಂಬಾವಳಿ ವಿರುದ್ಧ ದೂರು

11:50 AM Jul 04, 2017 | |

ಬೆಂಗಳೂರು: ಮಾಜಿ ಸಚಿವ, ಶಾಸಕ ಅರವಿಂದ ಲಿಂಬಾವಳಿ ಸೇರಿದಂತೆ 10 ಮಂದಿಯ ವಿರುದ್ಧ ಬಿಜೆಪಿಯಿಂದ ಅಮಾನತುಗೊಂಡಿರುವ ವೆಂಕಟೇಶ್‌ ಮೌರ್ಯ ಯಶವಂತಪುರ ಠಾಣೆಯಲ್ಲಿ ಕೊಲೆ ಬೆದರಿಕೆ ದೂರು ನೀಡಿದ್ದಾರೆ.

Advertisement

 ಮಾಜಿ ಸಚಿವ ಅರವಿಂದ್‌ ಲಿಂಬಾವಳಿ, ಇವರ ಬೆಂಬಲಿಗರಾದ ರವಿ ಮಾಕಳಿ, ವೈ ಸುರೇಂದ್ರ ಗೌಡ, ಎಂ.ಪಿ.ಅನಿಲ್‌ ಕುಮಾರ್‌, ನಟೇಶ್‌, ರಾಮು ಪಿ ರಾವ್‌, ಎಂ.ರಘು, ಶ್ರೀದರ್ಶಿ, ಕೆ.ವಿ. ವೆಂಕಟೇಶ್‌ ಮತ್ತು ವೀರೇಂದ್ರ ವಟ್ಟರ್‌, ರಾಜೇಶ್‌ ಮೂಡಲಗಿ ಎಂಬುವರು ದೂರವಾಣಿ ಮೂಲಕ ಹಾಗೂ ಮನೆ ಬಳಿ ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. 

ನಿವೃತ್ತ ಡಿಸಿಪಿ ತಿಮ್ಮಪ್ಪ ಅವರಿಂದ 2009ರಲ್ಲಿ ಲೋಕಸಭಾ ಚುನಾವಣೆಗೆ ಚಿತ್ರದುರ್ಗದಿಂದ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್‌ ಕೊಡಿಸುವುದಾಗಿ ಅರವಿಂದ ಲಿಂಬಾವಳಿ ಅವರು 2 ಕೋಟಿ ಹಣ ಪಡೆದಿದ್ದರು. ಆದರೆ, ಈ ಪೈಕಿ ಇದುವರೆಗೂ 30 ಲಕ್ಷ ಹಣ ಹಿಂದಿರುಗಿಸಿಲ್ಲ ಎಂದು ದೂರಿನಲ್ಲಿ ಆರೋಪಿಸಿರುವ ಅವರು ಈ ವಿಚಾರ ಪ್ರಸ್ತಾಪಿಸಿದ್ದಕ್ಕೆ ನನಗೆ ಬೆದರಿಕೆಯೊಡ್ಡಲಾಗಿದೆ ಎಂದು ಹೇಳಿದ್ದಾರೆ. ಯಶವಂತಪುರ ಪೊಲೀಸರು ಇದೊಂದು ಗಂಭೀರ ಸ್ವರೂಪವಲ್ಲದ ಪ್ರಕರಣ (ಎನ್‌ಸಿಆರ್‌) ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next