Advertisement

‘ಗೋ ಬ್ಯಾಕ್ ಮೋದಿ’ ಎಂದು ಕುಟುಕಿದ ನಟಿ ವಿರುದ್ಧ ದಾಖಲಾಯ್ತು ದೂರು..!

07:09 PM Feb 15, 2021 | Team Udayavani |

ತಮಿಳುನಾಡು : ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ವಿರೋಧಿಸಿ  ‘ಗೋ ಬ್ಯಾಕ್ ಮೋದಿ’ ಹ್ಯಾಷ್ ಟ್ಯಾಗ್ ನಡಿ ಟ್ವೀಟ್ ಮಾಡಿದ್ದ ತಮಿಳು ನಟಿ ಒವಿಯಾ ಹೆಲೆನ್ ವಿರುದ್ಧ ರಾಜ್ಯ ಬಿಜೆಪಿ ಘಟಕ ಪೊಲೀಸ್ ಠಾಣೆಗೆ ದೂರು ನೀಡಿದೆ.

Advertisement

ನಿನ್ನೆ (ಫೆ.14 ಭಾನುವಾರ) ಹಲವು ಸರ್ಕಾರಿ ಯೋಜನೆಗಳ ಚಾಲನೆಗೆಂದು ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿಗೆ ಭೇಟಿ ನೀಡಿದ್ದರು. ಪ್ರಧಾನಿ ಮೋದಿಯವರ ಭೇಟಿ ವಿರೋಧಿಸಿ ಸೋಷಿಯಲ್ ಮೀಡಿಯಾದಲ್ಲಿ ‘ಗೋ ಬ್ಯಾಕ್ ಮೋದಿ’ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿತ್ತು. ನಟಿ ಒವಿಯಾ ಕೂಡ ಈ ಹ್ಯಾಷ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದರು.

ನಟಿಯ ಟ್ವೀಟ್ ಗಂಭೀರವಾಗಿ ತೆಗೆದುಕೊಂಡಿರುವ ತಮಿಳುನಾಡು ರಾಜ್ಯ ಬಿಜೆಪಿ ಕಾರ್ಯದರ್ಶಿ ಎ. ಸುಧಾರಕರ್,  ಚೈನ್ನೈ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೋದಿ ಆಗಮನದ ಹಿನ್ನೆಲೆ ಕೆಲವರು ಗುಂಪು ರಚಿಸಿಕೊಂಡು ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡಲು ಪ್ರಯತ್ನಿಸಿದ್ದವು. ನಟಿಯ ಈ ಟ್ವೀಟ್ ಸಮಾಜದಲ್ಲಿ ಶಾಂತಿ ಭಂಗ ತರಲು ಪ್ರಚೋದಿಸುವಂತಿದೆ. ಈ ಹಿನ್ನೆಲೆ ಅವರ ವಿರುದ್ಧ ಸೆಕ್ಷನ್ 69(ಎ)ನಡಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಚಮೋಲಿ ದುರ್ಘಟನೆ : ಮೃತರ ಸಂಖ್ಯೆ 56ಕ್ಕೆ ಏರಿಕೆ

Advertisement

Udayavani is now on Telegram. Click here to join our channel and stay updated with the latest news.

Next