Advertisement

ಹೊಸಕೋಟೆ ಶಾಸಕರ ವಿರುದ್ಧ ಎಸಿಬಿಗೆ ದೂರು

12:15 PM Apr 07, 2018 | |

ಬೆಂಗಳೂರು: ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯಿರುವ ನೂರಾರು ಎಕರೆ ಸರ್ಕಾರಿ ಜಮೀನನ್ನು ಬಗರ್‌ಹುಕುಂ ಸಾಗುವಳಿ ಸಕ್ರಮ ಸಮಿತಿಯ ಅಧ್ಯಕ್ಷರೂ ಆಗಿರುವ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್‌ ತಮ್ಮ ಸಂಬಂಧಿಕರು ಹಾಗೂ ಬೆಂಬಲಿಗರಿಗೆ ಮುಂಜೂರು ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಗರ ವಕ್ತಾರ ಎನ್‌.ಆರ್‌.ರಮೇಶ್‌ ಶುಕ್ರವಾರ ಎಸಿಬಿಗೆ ದೂರು ನೀಡಿದ್ದಾರೆ.

Advertisement

ಶಾಸಕ ಎಂಟಿಬಿ ನಾಗರಾಜ್‌ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಕಳೆದ ಐದು ವರ್ಷಗಳಲ್ಲಿ 280 ಕೋಟಿ ರೂ. ಮೌಲ್ಯದ 140 ಎಕರೆ 15 ಗುಂಟೆ ಸರ್ಕಾರಿ ಜಮೀನನ್ನು ಸಂಬಂಧಿಕರು ಹಾಗೂ ಬೆಂಬಲಿಗರಿಗೆ ಮಂಜೂರು ಮಾಡಿಕೊಟ್ಟು ಸರ್ಕಾರದ ಬೊಕ್ಕಸಕ್ಕೆ ನಷ್ಟು ಉಂಟುಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಹೊಸಕೋಟೆ ತಾಲೂಕಿನ ಸೂಲಿಬೆಲೆ, ನಂದಗುಡಿ ಹೋಬಳಿಗಳ ವಿವಿಧ ಗ್ರಾಮಗಳಲ್ಲಿರುವ ಸರ್ಕಾರಿ ಜಮೀನುಗಳ ಪೈಕಿ 140 ಎಕರೆ 15 ಗುಂಟೆ ಜಮೀನನ್ನು ತಮ್ಮ ಅಧ್ಯಕ್ಷತೆಯ ಬಹರ್‌ ಹುಕುಂ ಸಾಗುವಳಿ ಸಕ್ರಮ ಸಮಿತಿಯ ಮೂಲಕ ಮಂಜೂರು ಮಾಡಿದ್ದಾರೆ.

ಈ ಪೈಕಿ 8 ಎಕರೆ 37 ಗುಂಟೆ ತಮ್ಮ ಸಂಬಂಧಿಕರಿಗೆ ಮತ್ತು 102 ಎಕರೆ 11 ಗುಂಟೆಯನ್ನು ಬೆಂಬಲಿಗರಿಗೆ ಮಂಜೂರು ಮಾಡಿದ್ದಾರೆ. ಹೀಗಾಗಿ ಶಾಸಕರು ಹಾಗೂ ಅಕ್ರಮಕ್ಕೆ ಸಹಕಾರ ನೀಡಿದ ಹೋಸಕೋಟೆ ತಹಸೀಲ್ದಾರ್‌, ಕಂದಾಯ ಅಧಿಕಾರಿಗಳ  ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next