Advertisement

ಕಂಟೆಂಟ್‌ ತಡೆಹಿಡಿದರೆ ಪ್ರಾಧಿಕಾರಕ್ಕೆ ದೂರು; ಕೇಂದ್ರ ಸರಕಾರದಿಂದ ಹೊಸ ಪ್ರಸ್ತಾವ‌

04:30 PM Jun 08, 2022 | Team Udayavani |

ಹೊಸದಿಲ್ಲಿ: ಇನ್ನು ಮುಂದೆ ಫೇಸ್‌ಬುಕ್‌ನಂಥ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿರುವ ಬರಹಗಳನ್ನು ತಡೆಹಿಡಿದರೆ ಅದನ್ನು ಪ್ರಶ್ನಿಸಿ ಮೇಲ್ಮನವಿ ಪ್ರಾಧಿಕಾರಕ್ಕೂ ಅರಿಕೆ ಮಾಡಿಕೊಳ್ಳಲು ಅವಕಾಶ ಲಭ್ಯವಾಗಲಿದೆ.

Advertisement

ಕೇಂದ್ರ ಸರಕಾರ ಪ್ರಕಟಿಸಿರುವ ಪರಿಷ್ಕೃತ ಮಾಹಿತಿ ತಂತ್ರಜ್ಞಾನ ನಿಯಮಗಳಲ್ಲಿ ಈ ಅಂಶವನ್ನು ಪ್ರಧಾನವಾಗಿ ಪ್ರಸ್ತಾವಿಸಲಾಗಿದೆ. ಈ ಮೇಲ್ಮನವಿ ಪ್ರಾಧಿಕಾರ 30 ದಿನಗಳಲ್ಲಿ ನಿಗದಿತ ಪ್ರಕರ ಣವನ್ನು ಇತ್ಯರ್ಥ ಗೊಳಿಸ ಬೇಕು ಎಂದು ಪ್ರಸ್ತಾವಿಸಲಾಗಿದೆ. ಆ ನಿರ್ಧಾರ ಇತರ ಸಾಮಾಜಿಕ ಜಾಲತಾಣ ಗಳಿಗೆ ಕೂಡ ಅನ್ವಯ ವಾಗಬೇಕು ಎಂದು ಸೂಚಿಸಲಾಗಿದೆ.

ನಿಗದಿತ ಜಾಲತಾಣದ ಕುಂದು ಕೊರತೆ ನಿವಾರಿಸುವ ಅಧಿಕಾರಿಗೆ ಅದರಲ್ಲಿ ಪೋಸ್ಟ್‌ ಮಾಡಿರುವ ಅಂಶದ ಬಗ್ಗೆ ದೂರು ಸಲ್ಲಿಕೆ ಮಾಡಿದರೂ, ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಯಾವ ಪ್ರಯತ್ನಗಳೂ ನಡೆಯುತ್ತಿ ರಲಿಲ್ಲ. ಈಗ ಅದನ್ನು ಕಡ್ಡಾಯವಾಗಿ ಕೈಗೆತ್ತಿ ಕೊಂಡು ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಹೊಸ ನಿಯಮಗಳನ್ನು ಪರಿಷ್ಕರಿಸಲಾಗಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್‌ ಖಾತೆ ಸಹಾಯಕ ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ.

ಜಾಲತಾಣಗಳು ಸ್ವಯಂ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಸರಕಾರ ಈಗಲೂ ಪ್ರತಿಪಾದಿಸುತ್ತಿದೆ. ಅದರ ಜತೆಗೆ ದೇಶದ ಸಂವಿಧಾನ ಮತ್ತು ಕಾನೂನುಗಳನ್ನು ಕಡ್ಡಾಯವಾಗಿ ಪಾಲಿ ಸಲೇಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ಸಲಹೆ ಸ್ವೀಕಾರಕ್ಕೆ ಸಿದ್ಧ: ಕೇಂದ್ರ ಸರಕಾರ ಜಾರಿಗೊಳಿಸಿರುವ ಹೊಸ ನಿಯಮಗಳಿಗೆ ಸಾರ್ವಜನಿಕರು 30 ದಿನಗಳ ಒಳಗಾಗಿ ಪ್ರತಿಕ್ರಿಯೆ ನೀಡಬೇಕು.

Advertisement

ಮುಂದಿನ ತಿಂಗಳ ಒಳಗಾಗಿ ಸಂಬಂಧಪಟ್ಟ ಎಲ್ಲರ ಸಲಹೆ ಪಡೆದುಕೊಂಡು ಹೊಸ ನಿಯಮಗಳನ್ನು ಅಂತಿಮಗೊಳಿಸಲಾಗುತ್ತದೆ ಎಂದರು ರಾಜೀವ್‌ ಚಂದ್ರಶೇಖರ್‌. ವ್ಯವಸ್ಥೆ ಉತ್ತಮ ಪಡಿಸಲು ಸಾಮಾಜಿಕ ಜಾಲತಾಣ ಕಂಪನಿ ಗಳು ನೀಡುವ ಸಲಹೆ ಸ್ವೀಕರಿಸಲು ಕೇಂದ್ರ ಸರಕಾರ ಸಿದ್ಧವಿದೆ ಎಂದು ಹೇಳಿದ್ದಾರೆ. ಸದ್ಯ ಜಾಲತಾಣಗಳು ಹೊಂದಿರುವ ನಿಯಮ ಗಳನ್ನು ಪಾಲನೆ ಮಾಡುತ್ತಿಲ್ಲ ಎಂದೂ ಸಚಿವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next