Advertisement

ಹೈಕಮಾಂಡ್‌ಗೆ ಸಂದೇಶ ತಲುಪಿಸಲು ಸ್ಪರ್ಧೆ

01:43 AM Mar 28, 2019 | Team Udayavani |

ಉಡುಪಿ : “ಹೈಕಮಾಂಡ್‌ ತಪ್ಪು ನಿರ್ಧಾರ ತೆಗೆದುಕೊಂಡರೆ ನನ್ನಂಥ ಕಾರ್ಯಕರ್ತರು ಪಕ್ಷ ತ್ಯಜಿಸುತ್ತಾರೆ’ ಎಂಬ ಸಂದೇಶವನ್ನು ಹೈಕಮಾಂಡ್‌ಗೆ ತಲುಪಿಸುವ ಉದ್ದೇಶ
ದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಇದು ಹೈಕಮಾಂಡ್‌ ವಿರುದ್ಧದ ನನ್ನ ಪ್ರತಿಭಟನೆ ಎಂದು ಎಐಸಿಸಿ ಸದಸ್ಯ, ಕಾಂಗ್ರೆಸ್‌ನ ಟಿಕೆಟ್‌ ಆಕಾಂಕ್ಷಿಯಾಗಿದ್ದ ಅಮೃತ್‌ ಶೆಣೈ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಪಕ್ಷ ಕಟ್ಟಲು ನನ್ನಂತ ಕಾರ್ಯಕರ್ತರ ಕೊಡುಗೆ ಸಾಕಷ್ಟಿದೆ. ಆದರೆ ನಮ್ಮ ಸಲಹೆಯನ್ನೇ ಕೇಳದೆ ಹೈಕಮಾಂಡ್‌ ನಿರ್ಧಾರ ತೆಗೆದುಕೊಂಡಿದೆ. ಜೆಡಿಎಸ್‌ ಚಿಹ್ನೆಗೆ ಮತ ಹಾಕಲು ಕಾಂಗ್ರೆಸ್‌ ಮತದಾರರ ಮನಸ್ಸು ಒಪ್ಪುತ್ತಿಲ್ಲ. ಒಂದು ವೇಳೆ ಈ ಭಾಗದಲ್ಲಿ ಜೆಡಿಎಸ್‌ ಬಲಿಷ್ಠವಾಗಿದ್ದು ಆ ಪಕ್ಷಕ್ಕೆ ಕ್ಷೇತ್ರ ಬಿಟ್ಟುಕೊಟ್ಟಿದ್ದರೆ ಬೆಂಬಲಿಸುತ್ತಿದ್ದೆ. ಆದರೆ ಇಲ್ಲಿ ಜೆಡಿಎಸ್‌ಗೆ ಮತ ಇಲ್ಲ. ಜನಪ್ರಿಯ ಅಭ್ಯರ್ಥಿಯೂ ಇಲ್ಲ. ಈಗ ಕಾಂಗ್ರೆಸ್‌
ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ಕಷ್ಟವಾಗುತ್ತಿದೆ. ಸ್ಪರ್ಧೆ ಪಕ್ಷ ವಿರೋಧಿ ಎನ್ನುವುದಾದರೆ ಎಐಸಿಸಿಸದಸ್ಯತ್ವಕ್ಕೂ ರಾಜೀನಾಮೆ ನೀಡಲಿ ದ್ದೇನೆ ಎಂದು ಶೆಣೈ ಹೇಳಿದರು.

ಡಾ| ಎ.ವಿ. ಬಾಳಿಗಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಪಿ.ವಿ. ಭಂಡಾರಿ, ಸಾಮಾಜಿಕ ಸೇವಾ ಕಾರ್ಯ ಕರ್ತೆ ಜಯಶ್ರೀ ಭಟ್‌ ಜತೆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next