Advertisement

ಸ್ಥಳೀಯ ಸಂಸ್ಥೆ ಚುನಾವಣೆ ಶಕ್ತಿ ಇರುವ ಕಡೆ ಸ್ಪರ್ಧೆ

11:06 PM Oct 22, 2019 | Team Udayavani |

ಬೆಂಗಳೂರು: “ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶಕ್ತಿ ಇರುವ ಕಡೆ ಜೆಡಿಎಸ್‌ ಸ್ವತಂತ್ರವಾಗಿ ಸ್ಪರ್ಧಿಸಲಿದೆ’ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಪ್ರಸ್ತುತ ಜೆಡಿಎಸ್‌ನ ಓರ್ವ ಸದಸ್ಯ ಇದ್ದು ಐದು ಕಡೆ ಗೆಲ್ಲುವ ಅವಕಾಶವಿದೆ. ಪರಿಷತ್‌ ಸದಸ್ಯ ಬಿ.ಎಂ.ಫ‌ರೂಕ್‌ ಅವರಿಗೆ ಅಲ್ಲಿನ ಉಸ್ತುವಾರಿ ನೀಡಲಾಗುವುದು.

Advertisement

ಅದೇ ರೀತಿ ದಾವಣಗೆರೆ ಮಹಾ ನಗರ ಪಾಲಿಕೆಗೆ ಅಭ್ಯರ್ಥಿ ಗಳ ಆಯ್ಕೆ ಉಸ್ತುವಾರಿ ವಿಧಾನಪರಿಷತ್‌ನ ಮಾಜಿ ಸದಸ್ಯರೂ ಆದ ಶಿವಶಂಕರ್‌ಗೆ ವಹಿಸಲಾಗುವುದು ಎಂದು ಹೇಳಿದರು. ಕೋಲಾರ, ಚಿಕ್ಕಬಳ್ಳಾಪುರ, ಕನಕಪುರ, ಮಾಗಡಿಯಲ್ಲಿ ಪಕ್ಷದ ವತಿಯಿಂದ ಯುವಕರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು. ಸೋಲು-ಗೆಲುವು ಬೇರೆ ವಿಚಾರ. ಆದರೆ, ಸ್ಪರ್ಧೆ ಮಾಡಿ ನಮ್ಮ ಅಸ್ತಿತ್ವ ಕಾಪಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

ಯಾದಗಿರಿಯಲ್ಲಿ ನಮ್ಮ ಪಕ್ಷದ ಯುವ ಜಿಲ್ಲಾಧ್ಯಕ್ಷ ಸೇರಿ ಹಲವು ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಶಾಸಕ ನಾಗನಗೌಡ ಕುಂದಕೂರ ಅವರಿಗೆ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ದ್ದಾಗ ನೀಡಿದ್ದ ಅನುದಾನ ರದ್ದು ಮಾಡಿದ್ದಕ್ಕೆ ಮುಖ್ಯಮಂತ್ರಿಯವರ ಕಾರು ತಡೆದು ಪ್ರತಿಭಟನೆ ಮಾಡಿದ್ದಕ್ಕೆ ಬಂಧಿಸಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾದರೂ ನಿತ್ಯ ಕರೆದು ಹಿಂಸೆ ನೀಡುತ್ತಿದ್ದಾರೆ. ನಾನು ಬುಧವಾರ ಅಲ್ಲಿಗೆ ಹೋಗುತ್ತಿದ್ದೇನೆ. ನಮ್ಮ ಕಾರ್ಯಕರ್ತರಿಗೆ ತೊಂದರೆಯಾದರೆ ಸುಮ್ಮನೆ ಕೂರುವುದಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next