Advertisement
ಈ ವಿಚಾರವನ್ನು ಖುದ್ದು ಮುತಾಲಿಕ್ ಅವರೇ ತಿಳಿಸಿದ್ದಾರೆ. ಮಂಗಳೂರಿಗೆ ಸೋಮವಾರ ಭೇಟಿ ನೀಡಿದ್ದ ವೇಳೆ ಉದಯವಾಣಿಯೊಂದಿಗೆ ಮಾತನಾಡಿದ ಅವರು ಮುಂದಿನ ಚುನಾವಣೆಯಲ್ಲಿ ತಮ್ಮ ಸಂಘಟನೆ ತೆಗೆದುಕೊಳ್ಳುವ ತೀರ್ಮಾನಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅವರು ಹೇಳಿದ್ದಿಷ್ಟು: “ಶಿವಸೇನೆಯನ್ನು ಕರ್ನಾಟಕದಲ್ಲಿ ಕಟ್ಟುವ ನೆಲೆಯಲ್ಲಿ ಹಾಗೂ ಹಿಂದೂ ಸಮಾಜದ ಶ್ರೇಯಸ್ಸಿಗಾಗಿ ಮೊದಲ ಹಂತದ ಪ್ರಯತ್ನ ನಡೆಸಲಾಗಿದೆ. ಈಗಾಗಲೇ ಈ ಸಂಬಂಧ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಜತೆಯಲ್ಲಿ ಎರಡು ಸುತ್ತಿನ ಮಾತುಕತೆಯನ್ನೂ ನಡೆಸಲಾಗಿದೆ. ಕೆಲವೇ ದಿನಗಳಲ್ಲಿ ಅಂತಿಮ ಮಾತುಕತೆ ನಡೆಯಲಿದ್ದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.
ಯಾದರೂ ನಾವು ಸ್ಪರ್ಧೆ ಮಾಡುವುದು ನಿಶ್ಚಿತ. ಶೃಂಗೇರಿ, ಚಿಕ್ಕಮಗಳೂರು, ವಿಜಯ್‌ಪುರ್ ನಗರ, ಬೆಳಗಾವಿ ಸೇರಿದಂತೆ ಐದು ಭಾಗದಲ್ಲಿ ಈಗಾಗಲೇ ನಾವು ಸರ್ವೆ ಮಾಡಿದ್ದು, ಈ ಭಾಗದಲ್ಲಿ ಶ್ರೀರಾಮ ಸೇನೆ ಬಲಿಷ್ಠವಾಗಿರುವುದು ಸ್ಪಷ್ಟವಾಗಿದೆ. ಹೀಗಾಗಿ, ಶ್ರೀರಾಮ ಸಂಘಟನೆ ಪ್ರಾಬಲ್ಯ ಹೊಂದಿರುವ ಕೇತ್ರಗಳಲ್ಲಿ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧೆಗಿಳಿಯುವುದು ಖಚಿತ’.
“ಮುಂದಿನ ಚುನಾವಣೆಯಲ್ಲಿ ಶ್ರೀರಾಮ ಸೇನೆ ಸ್ಪರ್ಧೆಗೆ ಮೈತ್ರಿ ಮಾಡುವುದಾದರೆ ನಮ್ಮ ಮೊದಲ ಆದ್ಯತೆ ಬಿಜೆಪಿ. ಆದರೆ ಬಿಜೆಪಿಯವರು ಇಲ್ಲಿಯವರೆಗೆ ಯಾವುದೇ ರೀತಿಯ ಸ್ಪಂದನೆಯನ್ನು ನೀಡಿಲ್ಲ. ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಲಾಗುವುದು. ಹತಾಶ ಸಚಿವ ರೈ..!
“ರಮಾನಾಥ ರೈ ಅವರು ತಮ್ಮ ವರ್ಚಸ್ಸು ಈಗಾಗಲೇ ಕಳೆದುಕೊಂಡಿದ್ದಾರೆ. ಹೀಗಾಗಿ ಅವರಿಗೆ ಹಿಂದೂ ಸಂಘಟನೆ, ಹಿಂದೂ ನಾಯಕರ ಬಗ್ಗೆ ಅಸಹ್ಯವಾಗಿ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಅವರು ನನ್ನ ಬಗ್ಗೆ ಮಾತನಾಡಿದ ಶಬ್ದಕ್ಕೆ ನಾನೇನು ಉತ್ತರ ಕೊಡಲ್ಲ. ಆದರೆ, ಅವರ ಆ ಮಾತಿನ ಮೂಲಕ ಅವರ ಸಂಸ್ಕೃತಿ ಏನು ಎಂಬುದು ಗೊತ್ತಾಗುತ್ತದೆ. ಅಂತೂ ಅವರ ಹೇಳಿಕೆ ನೋಡುವಾಗಲೇ ಅವರು ವರ್ಚಸ್ಸು ಕಳೆದುಕೊಂಡು ಹತಾಶರಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ’
ಪ್ರಮೋದ್ ಮುತಾಲಿಕ್.
Related Articles
Advertisement