Advertisement

ಮಂಡ್ಯ ಕ್ಷೇತ್ರದಿಂದಲೇ ಸ್ಪರ್ಧೆ: ನಿಖೀಲ್‌ ಸ್ಪಷ್ಟನೆ

08:37 AM Mar 14, 2019 | Team Udayavani |

ಮದ್ದೂರು: ಮುಂದಿನ ಲೋಕಸಭಾ ಚುನಾವಣೆ ವೇಳೆ ರಾಜ್ಯದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ನಿಖೀಲ್‌ ಕುಮಾರಸ್ವಾಮಿ ಘೋಷಿಸಿದರು.

Advertisement

ತಾಲೂಕಿನ ಗೊಲ್ಲರದೊಡ್ಡಿ ಇತಿಹಾಸ ಪ್ರಸಿದ್ಧ ಜುಂಜಪ್ಪ ದೇವಾಲಯದಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಮಾಜಿ ಶಾಸಕಿ ಕಲ್ಪನಾಸಿದ್ದರಾಜು ಹಾಗೂ ಸ್ಥಳೀಯ ಜೆಡಿಎಸ್‌ ಮುಖಂಡರೊಂದಿಗೆ ಬುಧವಾರ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಕ್ಷೇತ್ರ ಬದಲಾವಣೆ ಕೇವಲ ಊಹಾಪೋಹ. 

ಮದ್ದೂರು ತಾಲೂಕಿನ ಪ್ರಸಿದ್ಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಅಧಿಕೃತವಾಗಿ ಪ್ರಚಾರ ಆರಂಭಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರಮುಖ ನಾಯಕರು, ಚುನಾಯಿತ ಸದಸ್ಯರು, ಪಕ್ಷದ ಮುಖಂಡರೊಂದಿಗೆ ಬಿರುಸಿನ ಪ್ರಚಾರ ಕೈಗೊಳ್ಳುವುದಾಗಿ ಹೇಳಿದರು. 

ಕಾರ್ಯಕರ್ತರೇ ಸೈನಿಕರು: ಯಾವ ಚಲನಚಿತ್ರ ನಟರನ್ನೂ ಚುನಾವಣಾ ಪ್ರಚಾರಕ್ಕೆ ಕರೆಯುವುದಿಲ್ಲ. ಚುನಾವಣೆಗಾಗಿ ನಟರ ದುರುಪಯೋಗ ಸರಿಯಾದ ಕ್ರಮವಲ್ಲ. ನನಗೆ ನನ್ನ ಪಕ್ಷದ ಕಾರ್ಯಕರ್ತರೇ ಸೈನಿಕರು. ದೇವೇಗೌಡರ ಕುಟುಂಬ ದೇವರ ಸನ್ನಿಧಿಯಿಂದಲೇ ಎಲ್ಲಾ ಶುಭ ಕಾರ್ಯಗಳನ್ನೂ ಆರಂಭಿಸುವುದು. ನಾನೂ ಇಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಕೈಗೊಂಡಿದ್ದೇನೆ ಎಂದು ಹೇಳಿದರು.

ಮಂಡ್ಯ ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜೆಡಿಎಸ್‌ ಶಾಸಕರು ಪ್ರಚಂಡ ಗೆಲುವು ಸಾಧಿಸಿದ್ದಾರೆ. ಇದು ಜೆಡಿಎಸ್‌ ಭದ್ರಕೋಟೆ. ಕಾರ್ಯಕರ್ತರು, ಮುಖಂಡರು, ಜನಪ್ರತಿನಿಧಿಗಳ ಶ್ರಮದಿಂದ ಗೆದ್ದು ಬರುವ ವಿಶ್ವಾಸವಿದೆ ಎಂದರು. 

Advertisement

ಉತ್ತಮ ಸ್ನೇಹಿತರು: ನಟ ಅಭಿಷೇಕ್‌ಅಂಬರೀಶ್‌ ಹಾಗೂ ತಾವು ಒಳ್ಳೆಯ ಸ್ನೇಹಿತರು. ರಾಜಕೀಯ ಕಾರಣಗಳಿಗಾಗಿ ಸ್ನೇಹಬಂಧ ಹಾಳು ಮಾಡಿಕೊಳ್ಳುವ ಅಗತ್ಯವಿಲ್ಲ. ಚುನಾವಣೆ ಬೇರೆ, ಸ್ನೇಹ ಬೇರೆ, ನಮ್ಮಿಬ್ಬರ ಸ್ನೇಹ ಸಂಬಂಧ ಎಂದಿನಂತೆ ಮುಂದುವರಿಯಲಿದೆ. ಪ್ರಸಕ್ತ ಎದುರಾಗಿರುವ ಚುನಾವಣೆಯಲ್ಲಿ ಅಭಿಷೇಕ್‌ ಮತ್ತು ತಾವು ಬ್ಯುಸಿಯಿದ್ದೇವೆ. ಚುನಾವಣೆ ಬಳಿಕವೂ ನಾವಿಬ್ಬರೂ ಎಂದಿನಂತೆ ಮಾತನಾಡುತ್ತೇವೆಂದು ತಿಳಿಸಿದರು.

ಇಂದು ಅಭ್ಯರ್ಥಿ ಘೋಷಣೆ: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ಗುರುವಾರ ಮಂಡ್ಯ ನಗರದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ. ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖೀಲ್‌ಕುಮಾರಸ್ವಾಮಿ ಅವರನ್ನು ಮಾಜಿ ಪ್ರಧಾನಿ ದೇವೇಗೌಡರೇ ಅಧಿಕೃತವಾಗಿ ಘೋಷಿಸಲಿ ದ್ದಾರೆ. ತಾಲೂಕಿನ ನಿಡಘಟ್ಟ ಗಡಿಭಾಗದಿಂದ ಮಂಡ್ಯದ ಕಾರ್ಯಕ್ರಮಕ್ಕೆ ಐದು ಸಾವಿರ ಬೈಕ್‌ ರ್ಯಾಲಿ ಮೂಲಕ ನಟ ನಿಖೀಲ್‌ಕುಮಾರಸ್ವಾಮಿ ಅವರನ್ನು ಮೆರವಣಿಗೆ ಮೂಲಕ ಜಿಲ್ಲಾ ಕೇಂದ್ರಕ್ಕೆ ಕರೆದೊಯ್ಯಲಾಗುವುದು ತಿಳಿಸಿದರು.

ಮಾಜಿ ಶಾಸಕಿ ಕಲ್ಪನಾಸಿದ್ದರಾಜು, ಸಂತೋಷ್‌, ಕೆಸ್ತೂರು ಜಿಪಂ ಸದಸ್ಯೆ ಸುಚಿತ್ರಾ, ರಮೇಶ್‌, ದಾಸೇಗೌಡ, ಬಿಳಿಯಪ್ಪ ಮತ್ತಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next