ಹೊನ್ನಾವರ: ಅನೇಕ ಪ್ರತಿಭಾವಂತರನ್ನು ಬೆಳೆಸುವ ಶಿಕ್ಷಕರ ಪ್ರತಿಭೆಯನ್ನು ಗುರುತಿಸಲು ಸಹಪಠ್ಯ ಚಟುವಟಿಕೆ ಸ್ಪರ್ಧೆ ಏರ್ಪಡಿಸಲಾಗಿದೆ. ಪರಿಶ್ರಮದಿಂದಲೇ ಪ್ರತಿಭೆ ಮೂಡಿಬರಲು ಸಾಧ್ಯವಾಗಿದ್ದು, ಪ್ರತಿಭಾ ಕಾರಂಜಿ, ಕಲೋತ್ಸವದಂತಹ ಅನೇಕ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿ, ಪ್ರತಿಭೆ ಪ್ರೋತ್ಸಾಹಿಸುವ ಶಿಕ್ಷಕರ ಪ್ರತಿಭೆಯನ್ನು ಒರೆಗೆ ಹಚ್ಚುವ ಜೊತೆಗೆ, ಇನ್ನೂ ಹೆಚ್ಚಿನ ಪ್ರತಿಭೆ ಮೈಗೂಡಿಸಿಕೊಳ್ಳಲು ಇಂತಹ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಡಿಡಿಪಿಐ ಪಿ.ಕೆ. ಪ್ರಕಾಶ ಹೇಳಿದರು.
ಅವರು ಮಾಥೋಮಾ ಪ್ರೌಢಶಾಲೆ ಆವರಣದಲ್ಲಿ ಬುಧವಾರ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಬೆಂಗಳೂರು ಹಾಗೂ ಡಿಡಿಪಿಐ, ಬಿಇಒ ಕಚೇರಿ ಸಹಯೋಗದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಜಿಲ್ಲಾಮಟ್ಟದ ಸಹಪಠ್ಯ ಚಟುವಟಿಕೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಮಾಥೊìಮಾ ಶಾಲಾ ಶೈಕ್ಷಣಿಕ ನಿರ್ದೇಶಕ ಎಚ್.ಎನ್. ಪೈ ಮಾತನಾಡಿ ಶಿಕ್ಷಕರಾದವರು ಇಂತಹ ಕಾರ್ಯಕ್ರಮದ ಮೂಲಕ ವಿವಿಧ ಜ್ಞಾನ ಪಡೆದುಕೊಳ್ಳಬಹುದು. ಜ್ಞಾನದ ಹಸಿವು ಇರಬೇಕು. ಎಲ್ಲದಕ್ಕಿಂತ ಪವಿತ್ರ ವೃತ್ತಿಯೆ ಶಿಕ್ಷಕ ವೃತ್ತಿ. ಆ ವೃತ್ತಿಗೆ ತಕ್ಕಂತೆ ಗೌರವದಿಂದ ನಾವು ವರ್ತಿಸಿದರೆ ಅತ್ಯುತ್ತಮ ಶಿಕ್ಷರಾಗಬಲ್ಲರು. ಇಂತಹ ಕಾರ್ಯಕ್ರಮಗಳ ಆಯೋಜನೆಯಿಂದ ಅವರು ಸಹಪಠ್ಯ ಚಟುವಟಿಕೆಯಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.
ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ನಾಯ್ಕ ಮಾತನಾಡಿ ಜಿಲ್ಲೆಯ ಹಲವು ಸಾಧಕ ಶಿಕ್ಷಕರ ಪ್ರತಿಭೆ ಗುರುತಿಸಲು ಇಲ್ಲಿ ಸಾಧ್ಯವಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಮುಖ್ಯ ಪರಿವೀಕ್ಷಕ ಪ್ರೀಯಾ, ಜಿ.ಎಸ್. ನಾಯ್ಕ, ಎಸ್.ಎನ್. ಗೌಡ, ಸುರೇಶ ನಾಯ್ಕ, ಸಾಧನಾ ಬರ್ಗಿ ಇತರರು ಉಪಸಿªತರಿದ್ದರು. ನಂತರ 5 ತಾಲೂಕಿನಿಂದ ಆಗಮಿಸಿದ ಶಿಕ್ಷಕರ ವಿವಿಧ ಸ್ಪರ್ಧಾ ಕಾರ್ಯಕ್ರಮ
ಜರುಗಿದವು.