Advertisement

ಪದವೀಧರರ ಕ್ಷೇತ್ರದ ಮತದಾರರ ಧ್ವನಿಯಾಗಲು ಸ್ಪರ್ಧೆ : ರಘುಪತಿ ಭಟ್‌

10:23 PM May 21, 2024 | Team Udayavani |

ಶಿವಮೊಗ್ಗ: ನಾನು ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಲು ಸ್ಪರ್ಧಿಸಿದ್ದೇನೆ ಎಂದು ನೈಋತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಾಜಿ ಶಾಸಕ ಕೆ. ರಘುಪತಿ ಭಟ್‌ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕನಾಗಿದ್ದಾಗ ನಾನು ಮಾಡಿದ ಕೆಲಸಗಳನ್ನು ಕಂಡು ಪದವೀಧರ ಮತದಾರರು ನನಗೆ ಮತ ನೀಡುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿ ಸಾಧಕ ಶಿಕ್ಷಕ ಪ್ರಶಸ್ತಿ ಮೂಲಕ ಬದಲಾವಣೆ ತಂದಿದ್ದೇನೆ ಎಂದರು.

ಏಳನೇ ವೇತನ ವರದಿ ಜಾರಿ ಆಗಬೇಕಿದೆ. ಶಿಕ್ಷಕರ ನೇಮಕಾತಿ ಬಾಕಿ ಇದೆ. ಈ ಎಲ್ಲ ಸಮಸ್ಯೆಗೆ ಧ್ವನಿಯಾಗುವುದಾಗಿ ಹೇಳಿದ ಅವರು, ಒಂದು ಅವಕಾಶ ಕೊಟ್ಟರೆ ಹೇಗೆ ಕೆಲಸ ಮಾಡಬಹುದು ಎಂದು ತೋರಿಸುತ್ತೇನೆ ಎಂದರು.

ಚುನಾವಣೆ ಹಿಂದಿನ ರಾತ್ರಿ ಪೆನ್‌ಡ್ರೈವ್‌ ಬರಬಹುದು: ಈಶ್ವರಪ್ಪ
ಶಿವಮೊಗ್ಗ: ಕೆ. ರಘುಪತಿ ಭಟ್‌ ಅವರಿಗೆ ಪಕ್ಷದಿಂದ ನೋಟಿಸ್‌ ಬರಬಹುದು. ಅಲ್ಲದೇ ಚುನಾವಣೆಯ ಹಿಂದಿನ ದಿನ ರಾತ್ರಿ ಯಾವುದಾದರೂ ಪೆನ್‌ಡ್ರೈವ್‌ ಸಹ ಬರಬಹುದು ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಎಚ್ಚರಿಸಿದರು. ತಮ್ಮ ನಿವಾಸದಲ್ಲಿ ರಾಷ್ಟ್ರಭಕ್ತರ ಬಳಗದ ಕಾರ್ಯಕ್ರಮದಲ್ಲಿ ಮಾತನಾಡಿ, ಕರ್ನಾಟಕದಲ್ಲಿ ಬಿಜೆಪಿ ಶುದ್ಧೀಕರಣ ಆಗಬೇಕು ಎಂದು ಹೇಳಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next