ಬೀಜಿಂಗ್: ಚೀನಾದ ವಿಚ್ಛೇದನ ನ್ಯಾಯಾಲಯವೊಂದು ಐತಿಹಾಸಿಕ ತೀರ್ಪು ನೀಡಿದೆ. ಬಹುಶಃ ಇದು ಜಗತ್ತಿನ ಹಲವು ದೇಶಗಳಿಗೆ ಮುಂದೆ ಮಾದರಿ ಯಾಗುವ ಸಾಧ್ಯತೆಯಿದೆ.
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಪತಿಗೆ ವೈವಾಹಿಕ ಜೀವನದ ಅವಧಿಯಲ್ಲಿ ಪತ್ನಿ ಮಾಡಿದ್ದ ಮನೆಗೆಲಸ ಮತ್ತಿತರ ಸಂಗತಿಗಳನ್ನು ಪರಿಗಣಿಸಿ ಪರಿಹಾರ ನೀಡುವಂತೆ ಸೂಚಿಸಿದೆ. ಆದರೆ ಪತ್ನಿಗೆ ಲಭ್ಯವಾಗುವುದು 5.57 ಲಕ್ಷ ರೂ.ಗಳು ಮಾತ್ರ. ಇದು ಟೀಕೆಗೆ ಕಾರಣವಾಗಿದೆ.
ಇದನ್ನೂ ಓದಿ:ತನ್ನ ಹೊಸ ಆವೃತ್ತಿಯ ಸ್ವಿಫ್ಟ್ ಅನಾವರಣಗೊಳಿಸಿದ ಮಾರುತಿ ಸುಜುಕಿ :ಶೇರು ಟ್ರೇಡ್ ನಲ್ಲಿ ಏರಿಕೆ
ವೈವಾಹಿಕ ಜೀವನದ ಐದು ವರ್ಷದ ಅವಧಿಗೆ ನ್ಯಾಯಾಲಯ ಈ ಮೊತ್ತವನ್ನು ನೀಡಲು ಸೂಚಿಸಿದೆ. ಒಬ್ಬ ಮನೆಕೆಲಸದಾಕೆಯನ್ನು ಇಟ್ಟುಕೊಂಡಿದ್ದರೆ, ಒಂದೇ ವರ್ಷಕ್ಕೆ ಇಷ್ಟು ಹಣ ಖರ್ಚಾಗುತ್ತಿತ್ತು ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಸ್ತವವಾಗಿ ವಿಚ್ಛೇದನದ ವೇಳೆ ಚೀನಾದಲ್ಲಿ ಪರಿಹಾರ ನೀಡುವ ಕ್ರಮವಿರಲಿಲ್ಲ. ಹೊಸತಾಗಿ ಚೀನಾಡಳಿತ ಈ ರೀತಿಯ ಕಾನೂನು ಜಾರಿ ಮಾಡಿದೆ. ಅದರಡಿ ನ್ಯಾಯಾಲಯ ಮೇಲಿನಂತೆ ತೀರ್ಪು ನೀಡಿದೆ.
ಇದನ್ನೂ ಓದಿ: ಮೊಟೆರಾ ಸ್ಟೇಡಿಯಂ ಬಗ್ಗೆ ವಿರಾಟ್ ಕೊಹ್ಲಿ ಅಸಮಾಧಾನ!