Advertisement

ವಿದ್ಯುತ್‌ ತಗುಲಿದವನಿಗೆ ಪರಿಹಾರ

01:07 PM Feb 05, 2022 | Team Udayavani |

ಆಳಂದ: ಪಟ್ಟಣದ ಸಂಗಾ ಕಾಲೋನಿಯ ಶ್ರೀನಿವಾಸ ದೇಸಾಯಿ ಪ್ರೌಢಶಾಲೆ ವಿದ್ಯಾರ್ಥಿ ಅಭಿಷೇಕ್‌ ವಸಂತ ಸಲಗರೆ ಎಂಬಾತನಿಗೆ ಕಳೆದ ವರ್ಷ ವಿದ್ಯುತ್‌ ತಂತಿ ತಗುಲಿ ಗಾಯಗೊಂಡಿರುವುದರಿಂದ ಜೆಸ್ಕಾಂ ಇಲಾಖೆಯಿಂದ ಮಂಜೂರಾದ ಒಂದು ಲಕ್ಷ ರೂ. ಚೆಕ್‌ನ್ನು ಶಾಸಕ ಸುಭಾಷ ಗುತ್ತೇದಾರ ಸಂತ್ರಸ್ತ ಕುಟುಂಬಕ್ಕೆ ವಿತರಿಸಿದರು.

Advertisement

ಇದೇ ವೇಳೆ ಮಾತನಾಡಿದ ಶಾಸಕರು ಪರಿಹಾರದ ಹಣವನ್ನು ವಿದ್ಯಾರ್ಥಿ ಶಿಕ್ಷಣಕ್ಕೆ ಹಣ ಮೀಸಲಾಗಿಡಿ ಎಂದು ಕುಟುಂಬದವರಿಗೆ ಸಲಹೆ ನೀಡಿದರು. ರೇವಣಸಿದ್ಧೇಶ್ವರ ಕಾಲೋನಿಯಲ್ಲಿ ವಿದ್ಯುತ್‌ ಪರಿವರ್ತಕದ ವಿದ್ಯುತ್‌ ತಗುಲಿ ರೈತ ರೇವಣಸಿದ್ಧಪ್ಪ ಈಶ್ವರಪ್ಪ ಮಾಳಿ ಅವರ ಎಮ್ಮೆ ಮೃತಪಟ್ಟಿರುವುದರಿಂದ ಅವರಿಗೂ ಸಹ 40 ಸಾವಿರ ರೂ. ಪರಿಹಾರದ ಚೆಕ್‌ನ್ನು ಶಾಸಕರು ವಿತರಿಸಿದರು.

ಜೆಸ್ಕಾಂ ಎಇಇ ಮಾಣಿಕರಾವ್‌ ಕುಲಕರ್ಣಿ, ಮುಖಂಡ ಮಲ್ಲಣ್ಣಾ ನಾಗೂರೆ, ವಿಜಯಕುಮಾರ ಕೋಥಳಿಕರ, ಪ್ರಭಾಕರ ದೇಸಾಯಿ, ಶರಣಪ್ಪ ಸಂಜವಾಡ, ಗುತ್ತಿಗೆದಾರ ಮಹ್ಮದ್‌ ರಫೀಕ್‌, ಮುಖ್ಯಶಿಕ್ಷಕ ಮಲ್ಲಿನಾಥ ಮುನ್ನೊಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next