Advertisement

ನಷ್ಟಕ್ಕೊಳಗಾದ ಪ್ರತಿಯೊಬ್ಬ ರೈತಗೂ ಪರಿಹಾರ

03:18 PM Nov 27, 2021 | Team Udayavani |

ಸಿಂಧನೂರು: ಅಪಾರ ಪ್ರಮಾಣದಲ್ಲಿ ಭತ್ತದ ಬೆಳೆಹಾನಿಗೆ ಒಳಗಾಗಿದ್ದು, ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೂ ತರಲಾಗಿದೆ. ನಷ್ಟಕ್ಕೆ ಒಳಗಾದ ಪ್ರತಿಯೊಬ್ಬ ರೈತರಿಗೂ ಸರಕಾರ ಪರಿಹಾರ ಕಲ್ಪಿಸಲಿದೆ ಎಂದು ಮಾಜಿ ಶಾಸಕ ಪ್ರತಾಪ್‌ಗೌಡ ಪಾಟೀಲ್‌ ಭರವಸೆ ನೀಡಿದರು.

Advertisement

ತಾಲೂಕಿನ 4ನೇ ಮೈಲ್‌ ಕ್ಯಾಂಪ್‌, ವಿರೂಪಾಪುರ, ಮಲ್ಲದಗುಡ್ಡ, ಅರಳಹಳ್ಳಿ, 7ನೇ ಮೈಲ್‌ ಕ್ಯಾಂಪ್‌, ಗುಂಜಳ್ಳಿ, ಶ್ರೀನಿವಾಸ್‌ ಕ್ಯಾಂಪ್‌, ತುರುವಿಹಾಳ ಭಾಗದಲ್ಲಿ ಅಕಾಲಿಕ ಮಳೆಯಿಂದ ಹಾನಿಗೀಡಾದ ಭತ್ತದ ಗದ್ದೆಗಳನ್ನು ವೀಕ್ಷಿಸಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕರನ್ನು ಹಲವು ರೈತರು ತಮ್ಮ ಜಮೀನುಗಳಿಗೆ ಕರೆದೊಯ್ದು ಹಾನಿ ಪ್ರದೇಶ ನೋಡುವಂತೆ ಒತ್ತಾಯಿಸಿದರು. ರೈತರ ಅಹವಾಲು ಕೇಳಿದ ಬಳಿಕ ಅಧಿಕಾರಿಗಳನ್ನು ಸಂಪರ್ಕಿಸಿದ ಮಾಜಿ ಶಾಸಕರು, ಸಮರ್ಪಕ ಬೆಳೆಹಾನಿ ಸಮೀಕ್ಷೆ ನಡೆಸಬೇಕು. ಯಾವೊಬ್ಬ ರೈತನೂ ಕೂಡ ಸರ್ವೇಯಿಂದ ಹೊರಗೆ ಉಳಿಯಬಾರದು ಎಂದು ಒತ್ತಾಯಿಸಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮರೇಗೌಡ ವಿರೂಪಾಪುರ, ಮುಖಂಡರಾದ ವೀರಬಸನಗೌಡ ವಿರೂಪಾಪುರ, ರಾಮಲಿಂಗಪ್ಪ ಸಾಹುಕಾರ, ಮಸ್ಕಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ, ಸತ್ಯಪ್ಪ, ಸತ್ಯಬಾಬು, ವೀರನಗೌಡ ಗುಂಜಳ್ಳಿ, ಹನುಮನಗೌಡ, ರುದ್ರಸ್ವಾಮಿ, ನಿಂಗಪ್ಪ ಕಟ್ಟಿಮನಿ, ಕರಿಯಪ್ಪ ಭಂಗಿ, ಶರಣಪ್ಪ ಹೊಸಗೌಡ್ರು, ಬಾಲಪ್ಪ ಕುಂಟೋಜಿ, ಶರಣಬಸವ ನಾಗರಬೆಂಚಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next