Advertisement
ಕೊಪ್ಪದಲ್ಲಿ ನಡೆದ ಜನಸಂಕಲ್ಪ ಸಮಾವೇಶ ಹಾಗೂ ತೀರ್ಥಹಳ್ಳಿಯಲ್ಲಿ ಮಾತನಾ ಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಾಡಾನೆ – ಮಾನವ ಸಂಘರ್ಷವನ್ನು ತಡೆ ಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಈಗಾಗಲೇ ಆನೆ ನಿಗ್ರಹ ಕಾರ್ಯಪಡೆ ರಚಿಸಿದೆ. ಕಾಡಾನೆ ದಾಳಿಯಿಂದ ಮೃತ ಪಟ್ಟರೆ ಸರಕಾರದಿಂದ ನೀಡಲಾಗುವ 7.5 ಲಕ್ಷ ರೂ. ಪರಿಹಾರವನ್ನು 15 ಲಕ್ಷ ರೂ.ಗಳಿಗೆ ಏರಿಸಲಾಗುವುದು ಎಂದು ಹೇಳಿದರು.
ಅಡಿಕೆ ಎಲೆಚುಕ್ಕಿ ರೋಗದ ನಿರ್ವಹಣೆ ಹೊಣೆಯನ್ನು ಸರಕಾರವೇ ಹೊರಲಿದ್ದು, ಹವಾಮಾನ ಆಧಾರಿತ ಬೆಳೆವಿಮೆ ವ್ಯಾಪ್ತಿಗೆ ತರಲಾಗುವುದು. ವಿಜ್ಞಾನಿಗಳ ಪ್ರಕಾರ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಮಗ್ರ ನಿರ್ವಹಣೆ ಮಾಡಬೇಕು. ಈ ರೋಗದ ವಿರುದ್ಧ ಹೋರಾಡಲು ಬೇಕಾದ ಪೋಷಕಾಂಶಗಳನ್ನು ಅಡಿಕೆ ಗಿಡಗಳು ತೆಗೆದುಕೊಳ್ಳುತ್ತಿಲ್ಲ. 42 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಯೋಜನೆ ರೂಪಿಸಿ ಕೊಡಲು ತಿಳಿಸಿದ್ದೇನೆ. ವರದಿ ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಔಷಧ ಸಿಂಪಡಣೆಗೆ 10 ಕೋ.ರೂ. ನೀಡಲಾಗಿದೆ. ಸಮಗ್ರ ನಿರ್ವಹಣೆಗೆ ಎಷ್ಟೇ ಖರ್ಚಾದರೂ ಅದನ್ನು ಸರಕಾರದಿಂದ ಭರಿಸಲಾಗುವುದು ಎಂದು ಸಿಎಂ ಹೇಳಿದರು.